• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Morning Digest: ಭೂಕಂಪಕ್ಕೆ 26 ಮಂದಿ ಬಲಿ, 12-14 ವರ್ಷದೊಳಗಿನ ಮಕ್ಕಳಿಗೂ ಲಸಿಕೆ; ಬೆಳಗಿನ ಟಾಪ್ ನ್ಯೂಸ್​ಗಳು

Morning Digest: ಭೂಕಂಪಕ್ಕೆ 26 ಮಂದಿ ಬಲಿ, 12-14 ವರ್ಷದೊಳಗಿನ ಮಕ್ಕಳಿಗೂ ಲಸಿಕೆ; ಬೆಳಗಿನ ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 26 ಮಂದಿ ಬಲಿ


ಅಪ್ಘಾನಿಸ್ತಾನದಲ್ಲಿ(Afghanistan) ಪ್ರಬಲ ಭೂಕಂಪ(Earthquake) ಸಂಭವಿಸಿ ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಅಪ್ಘಾನಿಸ್ತಾನದಲ್ಲಿ(Western Afghanistan) ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ.  ಬಾದ್ಘಿಸ್‌ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದಾಗ ಮನೆಗಳ ಮೇಲ್ಛಾವಣಿ ಕುಸಿದು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ಎಎಫ್‌ಪಿಗೆ ತಿಳಿಸಿದ್ದಾರೆ. ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಆಳವಿಲ್ಲದ ಭೂಕಂಪವು 5.3 ತೀವ್ರತೆಯನ್ನು ಹೊಂದಿದೆ.


2.Gold Price Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


Gold Rate on Jan 18, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,090 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,090 ರೂ. ಇತ್ತು. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ಇಲ್ಲಿ ನೋಡೋಣ..


3.Corona Vaccine: 12-14 ವರ್ಷದೊಳಗಿನ ಮಕ್ಕಳಿಗೂ ಕೊರೋನಾ ಲಸಿಕೆ, ಯಾವಾಗಿಂದ ಹಂಚಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಭಾರತವು(India) ಈ ವರ್ಷದ ಮಾರ್ಚ್(March) ವೇಳೆಗೆ 12 ರಿಂದ14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ(Vaccine) ಹಾಕಲು ಪ್ರಾರಂಭಿಸುತ್ತದೆ ಎಂದು ಡಾ ಎನ್‌ಕೆ ಅರೋರಾ ಹೇಳಿದ್ದಾರೆ. ಹೆಸರಾಂತ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಅರೋರಾ ಅವರು, ಕೇಂದ್ರ ಸರ್ಕಾರದ COVID-19 ಕಾರ್ಯನಿರತ ಗುಂಪಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ರೋಗನಿರೋಧಕ ಗುಂಪಿನ (NTAGEI) ಅಧ್ಯಕ್ಷರಾಗಿದ್ದಾರೆ.  ಭಾರತವು ಕಳೆದ ವರ್ಷ ಜನವರಿ 16 ರಂದು ಕೋವಿಡ್ -19 ವಿರುದ್ಧ ತನ್ನ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು. ದೇಶವು ಅಂದಿನಿಂದ 157 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಿದೆ. ಜನವರಿ 3ರಿಂದ ದೇಶದಲ್ಲಿ 15-18 ವಯೋಮಾನದ ಹದಿಹರೆಯದವರಿಗೆ ಲಸಿಕೆ ಹಾಕಲು ಪ್ರಾರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25ರಂದು ಘೋಷಿಸಿದರು.


4.Karnataka Weather Report; ರಾಜ್ಯದಲ್ಲಿ ಮೋಡ ಕವಿದ ವಾತಾವರಣ; ತಮಿಳುನಾಡಿನಲ್ಲಿ ಜ.19ರವರೆಗೆ ಮಳೆಯ ಅಲರ್ಟ್


Karnataka Weather Report: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ (Cloudy Weather) ವಾತಾವರಣ ನಿರ್ಮಾಣವಾಗುತ್ತಿದ್ದು, ದಿನವಿಡೀ ಚಳಿಯ ವಾತಾವರಣ (Cold Weather) ಇರಲಿದೆ. ಕಳೆದ ನಾಲ್ಕೈದು ದಿನಗಳಿಂದ ಬದಲಾಗುತ್ತಿರುವ ಹವಾಮಾನದಿಂದ ಜನರು ಶೀತ ಮತ್ತು ಕೆಮ್ಮು ಸಂಬಂಧಿತ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ನಡುವೆ ದಕ್ಷಿಣ ಕರ್ನಾಟಕ (South Karnataka) ಮತ್ತು ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಚಳಿಯಲ್ಲಿ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ. ಇನ್ನೂ ಕರಾವಳಿ ಭಾಗದಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


5.Petrol And Diesel Price: ನಿಮ್ಮ ನಗರಗಳಲ್ಲಿ ಇಂದಿನ ತೈಲ ದರದ ವಿವರ ನೋಡಿ


Petrol And Diesel Price Today: ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಂದು ಬೆಂಗಳೂರಿನಲ್ಲಿ ತೈಲ ದರ ಯಾವುದೇ ಏರಿಳಿತವನ್ನು ಕಂಡಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ (Karnataka) ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

First published: