Morning Digest: ಕಾಲ್ತುಳಿತದಿಂದ 12 ಮಂದಿ ಸಾವು, ಚಿನ್ನದ ಬೆಲೆ ಏರಿಕೆ, ತಮಿಳುನಾಡಿನಲ್ಲಿ ಮಳೆ, ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Tragic Incident: ಮಾತಾ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತದಿಂದ 12 ಮಂದಿ ಸಾವು, ಹಲವರಿಗೆ ಗಾಯ

ಜಮ್ಮು(ಜ.1): ಹೊಸ ವರ್ಷದ ದಿನದಂದೇ(New Year) ಭೀಕರ ದುರಂತ ಸಂಭವಿಸಿದ್ದು, ಕರಾಳ ದಿನವಾಗಿ ಪರಿಣಮಿಸಿದೆ. ಹೊಸ ವರ್ಷಾಚರಣೆ ಪ್ರಯುಕ್ತ ಜಮ್ಮು-ಕಾಶ್ಮೀರದ(Jammu and Kashmir) ಮಾತಾ ವೈಷ್ಣೋದೇವಿ ದೇವಾಲಯ(Mata Vaishno Devi shrine)ಕ್ಕೆ ಆಗಮಿಸಿದ್ದ ಅನೇಕ ಭಕ್ತರು ನೂಕುನುಗ್ಗಲು(stampede) ಉಂಟಾಗಿ ಮೃತಪಟ್ಟಿದ್ದಾರೆ. ಸುಮಾರು 12 ಮಂದಿ ಸಾವನ್ನಪ್ಪಿದರೆ, 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವಾಲಯ(Temple)ದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ಈ ನೂಕು ನುಗ್ಗಲು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಈ ಘಟನೆ ಕುರಿತಾಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ದುರಂತದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

2.Karnataka Weather Today: ಕರ್ನಾಟಕದಲ್ಲಿ ಹೆಚ್ಚಾಗಲಿರುವ ಚಳಿ, ಈ ರಾಜ್ಯಗಳಲ್ಲಿ ಅಕಾಲಿಕ ಮಳೆ

ಈಗಾಗಲೇ ದೇಶಾದ್ಯಂತ ಮೈ ನಡುಗುವ ಚಳಿ(Cold) ಇದ್ದು, ಜನರು ಮನೆಯಿಂದ(Home) ಹೊರಬರಲು ಕಷ್ಟಪಡುತ್ತಿದ್ದಾರೆ ಚಳಿಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗಪ್ಪಾ ಎಂದು ಜನರು ಒದ್ದಾಡುತ್ತಿರುವ ಸಂದರ್ಭದಲ್ಲಿ ಹವಾಮಾನ ಇಲಾಖೆ(Meteorological Department) ಜನಸಾಮಾನ್ಯರಿಗೆ ಮತ್ತೊಂದು ಶಾಕ್(Shock) ನೀಡಿದ್ದು ಇನ್ನೊಂದು ವಾರ ಕರ್ನಾಟಕದಾದ್ಯಂತ (Karnataka) ವಿಪರೀತ ಚಳಿ ಇರಲಿದ್ದು, ಅಕಾಲಿಕ ಮಳೆಗೆ ನೆರೆಯ ರಾಜ್ಯ ತಮಿಳುನಾಡು ತತ್ತರಿಸಿ ಹೋಗಲಿದೆಯಂತೆ. ಹೌದು ಹವಾಮಾನ ಇಲಾಖೆಯ ಪ್ರಕಾರ ಜನವರಿ ಒಂದರಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದ್ದು, ತಮಿಳುನಾಡಿನಲ್ಲಿ ಅಕಾಲಿಕ ಮಳೆ ಶುರುವಾಗಲಿದೆಯಂತೆ.

3.Gold Price Today: ಹೊಸ ವರ್ಷಕ್ಕೆ ಗ್ರಾಹಕರಿಗೆ ಕಹಿಸುದ್ದಿ, ಏರಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ

Gold Rate on Jan 1, 2022: ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಹೊಸ ವರ್ಷದ ದಿನದಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್​ ಕೊಟ್ಟಿದೆ. ಬೆಂಗಳೂರಿನಲ್ಲಿ (Bengaluru)ಯೂ ಇಂದು ಬಂಗಾರದ ಬೆಲೆ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,760 ರೂ. ಇತ್ತು. ಇಂದು 250 ರೂ. ಏರಿಕೆಯಾಗಿದ್ದು 47,010 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,760 ರೂ. ಇತ್ತು. ಇಂದು 250 ರೂ. ಏರಿಕೆಯಾಗಿದ್ದು, 49,010 ರೂ. ಆಗಿದೆ.

4.Petrol Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ತೈಲ ದರ- ನಿಮ್ಮ ನಗರಗಳ ಇಂದಿನ ಬೆಲೆ ಹೀಗಿದೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್ (Petrol And Diesel) ‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru)) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

5.2022 Most Expected Movies: ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

2021 ಕಳೆದು 2022 ಬಂದಿದೆ. ಹೊಸ ವರ್ಷ(New Year)ದ ಸಂಭ್ರಮದಲ್ಲಿ ಎಲ್ಲರು ಇದ್ದಾರೆ. ಹೊಸ ವರ್ಷಕ್ಕೆ ಹೊಸದೇನೋ ಮಾಡುವ ಹಂಬಲ, ಆಸೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ವರ್ಷವೂ ಚಿತ್ರರಂಗಕ್ಕೆ ಕೊರೋನಾ ಕಾಟ ಕೊಟ್ಟಿತ್ತು. ಅಂದುಕೊಂಡ ಹಾಗೇ ಯಾವ ಚಿತ್ರಗಳು ಯಶಸ್ಸು ಕಾಣಲಿಲ್ಲ. ಆದರೆ, 2022 ಚಿತ್ರರಂಗಕ್ಕೆ ಬಹಳ ಮುಖ್ಯವಾದ ವರ್ಷ. ಈ ವರ್ಷ ಘಟಾನುಘಟಿಗಳ ಸಿನಿಮಾ(Movie)ಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. 2022ರಲ್ಲಿ ಸಾಕಷ್ಟು ನಿರೀಕ್ಷಿತ ಚಿತ್ರಗಳು ಇವೆ. ಸಿನಿ ಪ್ರಿಯರಿಗೆ 2022 ಸಿನಿಮಾ ಹಬ್ಬ(Film Festival)ವೇ ಆಗಿರಲಿದೆ. 2022 ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಆಗಿದೆ. ಅದರಲ್ಲಿ ಕನ್ನಡದ ಕೆಜಿಎಫ್(KGF), RRR, ರಾಧೆ ಶ್ಯಾಮ್(Radhe-Shyam), ಸೇರಿದಂತೆ ಹಲವು ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಎಲ್ಲವೂ ಅಂದು ಕೊಂಡಂತೆ ಆದರೆ 2022 ಚಿತ್ರರಂಗಕ್ಕೆ ವರವಾಗಲಿದೆ. 2022ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ(IMDB) ಸಿದ್ಧಪಡಿಸಿದೆ. ಪಾಪ್ಯುಲಾರಿಟಿ(Popularity) ಹಾಗೂ ವೋಟ್(Vote)​ಗಳ ಆಧಾರದ ಮೇಲೆ ರ‍್ಯಾಂಕ್ ನೀಡಲಾಗಿದೆ. ಇದರಲ್ಲಿ ವಿಶೇಷ ಅಂದರೆ, ಈ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಸಿನಿಮಾ ಅಂದರೆ ಅದು ಕೆಜಿಎಫ್​ 2. ಹೌದು, ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಿಟ್ಟರೆ ಕನ್ನಡದ(Kannada) ಮತ್ಯಾವ ಸಿನಿಮಾವೂ ಈ ಪಟ್ಟಿಯಲ್ಲಿ ಇಲ್ಲ..
Published by:Latha CG
First published: