Morning Digest: ಉಕ್ರೇನ್​ನಲ್ಲಿ ಕನ್ನಡಿಗರ ಪರದಾಟ, ಹಿಜಾಬ್ ಬ್ಯಾನ್​ ಇಲ್ಲವೆಂದ ಕೇಂದ್ರ ಸಚಿವರು, ಚಿನ್ನದ ಬೆಲೆ ಇಳಿಕೆ; ಬೆಳಗಿನ ಟಾಪ್​ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Russia ಆಯ್ತು, ಈಗ ದಾಳಿಗೆ ಸಜ್ಜಾದ ಚೀನಾ! ಏನು ಮಾಡೋದಕ್ಕೆ ಹೊರಟಿದೆ ಡ್ರ್ಯಾಗನ್ ರಾಷ್ಟ್ರ?

ಅಮೆರಿಕ ಸೇರಿ ವಿಶ್ವದ ಪ್ರಾಬಲ್ಯ ಇರುವ ರಾಷ್ಟ್ರಗಳು ಹೇಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂಬುದನ್ನ ಕಾದು ನೋಡಿ, ಚೀನಾ ಸಹ ಬಾಲ ಬಿಚ್ಚಲು ಸಿದ್ಧವಾಗಿದೆ.. ಹಲವಾರು ವರ್ಷಗಳಿಂದ ಚೀನಾ ಕಣ್ಣಿಟ್ಟಿರುವ ರಾಷ್ಟ್ರವನ್ನ ವಶಪಡಿಸಿಕೊಳ್ಳಲು ಕುತಂತ್ರಿ ಡ್ರ್ಯಾಗನ್ ರಾಷ್ಟ್ರ ಹೊಂಚು ಹಾಕುತ್ತಿದೆ.
ಟಿಬೆಟನ್ ತನ್ನ ಸ್ವತ್ತಿಗೆ ತೆಗೆದುಕೊಂಡ ಚೀನಾ ಹೇಗಾದರೂ ಸರಿ ತೈವಾನ್ ಅನ್ನು ಕೂಡ ತನ್ನ ಪ್ರದೇಶಕ್ಕೆ ವಿಲೀನ ಮಾಡಿಕೊಳ್ಳಬೇಕು ಎಂದು ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದೆ. ಹೀಗಾಗಿ ಹಲವಾರು ಬಾರಿ ತೈವಾನ್ ಮೇಲೆ ಸಣ್ಣ ಪ್ರಮಾಣದಲ್ಲಿ ಆಕ್ರಮಣಗಳನ್ನು ಮಾಡಿ ಎಚ್ಚರಿಕೆಯನ್ನು ನೀಡುತ್ತಾ ಬಂದಿರುವ ಚೀನಾ, ಈಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದನ್ನು ನೆಪವಾಗಿಟ್ಟುಕೊಂಡು, ತೈವಾನ್ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸಿದೆ.

2."Hijab ಬ್ಯಾನ್ ಮಾಡುವುದಿಲ್ಲ" ಎಂದ ಕೇಂದ್ರ ಸಚಿವರು! ವಿವಾದದ ಬಗ್ಗೆ ಅವರು ಹೇಳಿದ್ದೇನು?

ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಡುವೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಹಿಜಾಬ್ ನಿಷೇಧ ಮಾಡುವುದಿಲ್ಲ ಅಂತ ಅವರು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, "ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಆದರೆ ಭಾರತದಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿಷೇಧವಿಲ್ಲ. ಇದು ಸ್ಪಷ್ಟವಾಗಿದೆ ಎಂದಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ನಿಯಮ ಪಾಲಿಸಲೇ ಬೇಕು ಅಂತ ಸಚಿವರು ಹೇಳಿದ್ದಾರೆ. ಸಹಜವಾಗಿ, ಕೆಲವು ಸಂಸ್ಥೆಗಳು ತಮ್ಮದೇ ಆದ ಶಿಸ್ತು ಹೊಂದಿವೆ, ಡ್ರೆಸ್ ಕೋಡ್ ಮತ್ತು ಸಮವಸ್ತ್ರ ಹೊಂದಿವೆ. ನಾವು ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವಾಗ, ನಾವು ಸಾಂವಿಧಾನಿಕ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು. ಹೀಗಾಗಿ ಸಂಸ್ಥೆಯ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.

3.India Vs Sri Lanka: ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಭಾರತ

ವೆಸ್ಟ್ ಇಂಡೀಸ್(West Indies) ವಿರುದ್ಧದ ಟಿ-20 ಪಂದ್ಯದಲ್ಲಿ ಸರಣಿ ಕ್ಲೀನ್-ಸ್ವೀಪ್(Clean sweep) ಮಾಡುವ ಮೂಲಕ ಸಾಧನೆ ಮಾಡಿದ ಟೀಮ್ ಇಂಡಿಯಾ(Team India) ಶ್ರೀಲಂಕಾ(Sri Lanka) ವಿರುದ್ಧದ ಪಂದ್ಯದಲ್ಲಿ ಸರಣಿ ಕ್ಲೀನ್-ಸ್ವೀಪ್ ಮಾಡುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದೆ. ಧರ್ಮಶಾಲಾದಲ್ಲಿ(Dharmashala) ಶ್ರೀಲಂಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಆರು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ಆ ಮೂಲಕ 3-0 ಅಂತರದಲ್ಲಿ ಸರಣಿ ಗೆಲುವನ್ನು ಸಾಧಿಸಿದೆ.ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 147 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 16.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0ಯಲ್ಲಿ ವಶಪಡಿಸಿಕೊಂಡಿತು.

4.Gold Price Today: ಆಭರಣ ಪ್ರಿಯರಿಗೆ ಸಖತ್ ಗುಡ್ ನ್ಯೂಸ್; ಮತ್ತಷ್ಟು ಇಳಿಕೆ ಕಂಡ ಚಿನ್ನ, ಇಂದೇ ಖರೀದಿಸಿ

Gold Rate on Feb 28, 2022: ರಷ್ಯಾ - ಉಕ್ರೇನ್‌ ಯುದ್ಧ ಪರಿಣಾಮ ಬರೀ ಆ ದೇಶಗಳಿಗೆ ಮಾತ್ರವಲ್ಲ ಭಾರತದ ಮೇಲೂ ಪರಿಣಾಮ ಬೀರುತ್ತಿದೆ. ಒಂದು ಕಡೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದ್ದರೆ, ಮತ್ತೊಂದು ಕಡೆ ಚಿನಿವಾರ ಪೇಟೆಯಲ್ಲೂ ಏರುಪೇರು ಕಾಣುತ್ತಿದೆ. ಬಂಗಾರ ಹಾಗೂ ಬೆಳ್ಳಿ ಮೌಲ್ಯ ದಿನೇ ದಿನೇ ವ್ಯತ್ಯಾಸವಾಗುತ್ತಿದೆ. ರಷ್ಯಾ - ಉಕ್ರೇನ್ ಯುದ್ಧದ ಮೊದಲನೇ ದಿನದಂದು ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡಿದ್ದರೂ, ನಂತರ ದೇಶದಲ್ಲಿ ಬಂಗಾರದ ದರ ಕುಸಿಯುತ್ತಿದೆ. ಇಂದೂ ಸಹ ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,350 ರೂ. ಇತ್ತು. ಇಂದು 10 ರೂ. ಇಳಿಕೆಯಾಗಿ 46,340 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,570 ರೂ. ಇತ್ತು. ಇಂದು 10 ರೂ. ಕಡಿಮೆಯಾಗಿ 50,560 ರೂ. ಆಗಿದೆ.

5.Ukraineನಲ್ಲಿ ಪರದಾಡುತ್ತಿದ್ದಾರೆ ರಾಜ್ಯದ ವಿದ್ಯಾರ್ಥಿಗಳು! "Please Help Me..." ಅಂದ್ರೆ ಕೇಳೋರಾರು?

ಉಕ್ರೇನ್‌ನಲ್ಲಿ (Ukraine) ರಷ್ಯಾ (Russia) ನಡೆಸುತ್ತಿರುವ ದಾಳಿ (Attack) ಮುಂದುವರೆದಿದೆ. ಆ ದಾಳಿ ಮಧ್ಯೆಯೇ ಭಾರತೀಯರನ್ನು (Indians) ಏರ್‌ಲಿಫ್ಟ್‌ (Air Lift) ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ‘ಆಪರೇಷನ್ ಗಂಗಾ’ (Operation Ganga) ಮುಂದುವರೆದಿದೆ. ಹಲವು ವಿದ್ಯಾರ್ಥಿಗಳು (Students) ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಈ ಪೈಕಿ ಕರ್ನಾಟಕದ (Karnataka) ವಿದ್ಯಾರ್ಥಿಗಳೂ ಸೇಫ್ (Safe) ಆಗಿ ತಮ್ಮ ಮನೆ ಸೇರಿದ್ದಾರೆ. ನಿನ್ನೆ ರಾತ್ರಿಯಷ್ಟೇ 13 ವಿದ್ಯಾರ್ಥಿಗಳು ಬೆಂಗಳೂರು (Bengaluru) ವಿಮಾನ ನಿಲ್ದಾಣಕ್ಕೆ (Airport) ಬಂದಿಳಿದಿದ್ದಾರೆ. ಇವೆಲ್ಲದರ ನಡುವೆಯೇ ರಾಜ್ಯದ ಇನ್ನೂ ಹಲವು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. “ದಯವಿಟ್ಟು ಬೇಗ ನಮ್ಮನ್ನು ಕರೆಸಿಕೊಳ್ಳಿ, ಇಲ್ಲಿ ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದೇವೆ” ಅಂತ ಕೇಂದ್ರ ಸರ್ಕಾರ (Central Government) ಹಾಗೂ ರಾಜ್ಯ ಸರ್ಕಾರಗಳಿಗೆ (State Government) ಮನವಿ ಮಾಡಿದ್ದಾರೆ.
Published by:Latha CG
First published: