Morning Digest: ಉಕ್ರೇನ್​​ನಿಂದ ಕನ್ನಡಿಗರ ಆಗಮನ, ಇಳಿಕೆಯಾದ ಚಿನ್ನ, ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲುವು; ಬೆಳಗಿನ ಟಾಪ್ ನ್ಯೂಸ್​

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Air Lift: ಉಕ್ರೇನ್‌ನಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳು, 13 ಮಂದಿ ಕನ್ನಡಿಗರ ಆಗಮನ, ಇನ್ನೂ ಹಲವರ ಪರದಾಟ

ದೆಹಲಿ: ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಸದ್ಯ ಉಕ್ರೇನ್ ದೇಶವನ್ನು ರಷ್ಯಾ ಸೇನಾಪಡೆ (Military Force) ಅಕ್ಷರಶಃ ಬಗ್ಗು ಬಡಿಯುತ್ತಿದೆ. ಅಲ್ಲಿನ ನಾಗರಿಕರಲ್ಲದೇ (Citizens), ವಿದೇಶಿಗರೂ (Foreigners) ಸಹ ಉಕ್ರೇನ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಪೈಕಿ ಅನೇಕ ಭಾರತೀಯರೂ (Indians) ಅಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ಏರ್‌ಲಿಫ್ಟ್ (Air Lift) ಮಾಡುವ ಪ್ರಕ್ರಿಯೆ ಮುಂದುವರೆದಿದ್ದು, ನಿನ್ನೆ ಉಕ್ರೇನ್‌ನಿಂದ ಭಾರತಕ್ಕೆ 2ನೇ ವಿಮಾನ ಆಗಮಿಸಿತ್ತು. ಇದರಲ್ಲಿ ಸುಮಾರು 250 ವಿದ್ಯಾರ್ಥಿಗಳು (Students) ಇದ್ದರು. ಈ ಪೈಕಿ ಕರ್ನಾಟಕದ (Karnataka) 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಸದ್ಯ ಅವರಿಗೆ ದೆಹಲಿಯ (Delhi) ಕರ್ನಾಟಕ ಭವನದಲ್ಲಿ (Karnataka Bhavan) ಆಶ್ರಯ ನೀಡಲಾಗಿದ್ದು, ಇದೀಗ ಬೆಂಗಳೂರಿಗೆ (Bengaluru) ವಾಪಸ್ ಆಗಲಿದ್ದಾರೆ. ಈ ನಡುವೆಯೂ ಕನ್ನಡಿಗರು ಸೇರಿದಂತೆ ಅನೇಕರು ಇನ್ನೂ ಉಕ್ರೇನ್‌ನಲ್ಲೇ ಸಿಲುಕಿದ್ದು, ನಮ್ಮನ್ನು ಯಾರು ಕೇಳುತ್ತಿಲ್ಲ ಅಂತ ಆತಂಕ ತೋಡಿಕೊಳ್ಳುತ್ತಿದ್ದಾರೆ.

2.Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ಕರೆಂಟ್​ ಕೈಕೊಡಲಿದೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದ್ಯುತ್ ವ್ಯತ್ಯಯ (Power Cut) ಸಾಮಾನ್ಯವಾಗಿ ಬಿಟ್ಟಿದೆ. ದಿನವೂ ವಿದ್ಯುತ್ ವ್ಯತ್ಯಯ ಸಮಸ್ಯೆ (Problem) ಬೆಂಗಳೂರಿಗರನ್ನು ಕಾಡುತ್ತಲೇ ಇದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯ ನಿರ್ವಹಣೆ ಕೈಗೆತ್ತಿಕೊಂಡಿರುವುದು ಮತ್ತು ಅಲ್ಲಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಬೆಸ್ಕಾಂ (BESCOM) ವಿದ್ಯುತ್ ವ್ಯತ್ಯಯ ಮಾಡುತ್ತಲೇ ಇದೆ. ದಿನವೂ ಕರೆಂಟ್ ಇಲ್ಲದೆ ಜನರು ಪರದಾಡುವಂತಾಗಿದೆ. ಆದರೆ ವಿದ್ಯುತ್ ಸಮಸ್ಯೆ ಸಾಕಷ್ಟು ಜನರಿಗೆ ತೊಂದರೆ ಉಂಟು ಮಾಡುತ್ತಿದೆ. ಮನೆಯಲ್ಲಿ ಕುಳಿತು ಕೆಲಸ ಮಾಡುವರಿಗೆ ವಿದ್ಯುತ್ ಸಮಸ್ಯೆ ತಲೆ ನೋವುಂಟು ಮಾಡಿದೆ. ಫೆಬ್ರವರಿ 27 ಮತ್ತು ಫೆಬ್ರವರಿ 28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

3.India Vs Srilanka: ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

ವೆಸ್ಟ್ ಇಂಡೀಸ್(west Indies) ವಿರುದ್ಧ 3 ಪಂದ್ಯಗಳ ಏಕದಿನ(ODI) ಸರಣಿ ಹಾಗೂ 3 ಪಂದ್ಯಗಳ(Match) ಟಿ ಟ್ವೆಂಟಿ (t-20)ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್(white wash) ಸಾಧನೆ ಮಾಡಿದ್ದ ಟೀಮ್ ಇಂಡಿಯಾ(Team India) ಇದೀಗ ಶ್ರೀಲಂಕಾ(Sri Lanka) ವಿರುದ್ಧವೂ ಸಹ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಸದ್ಯ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೀಮ್ ಇಂಡಿಯಾ 2-0 ಅಂತರದಿಂದ ಸರಣಿ ಜಯಿಸಿದೆ.

4.Gold And Silver Price: ಇವತ್ತು "ಚಿನ್ನಾ" ಅಂತ ಕರೆಯೋ ಮುನ್ನ ಸ್ವಲ್ಪ ಗೋಲ್ಡ್ ರೇಟ್ ಓದ್ಕೊಂಡ್ಬಿಡಿ!

Gold And Silver Price, Fe 27, 2022: ಹಣದುಬ್ಬರವನ್ನು (Inflation) ಸಮರ್ಥವಾಗಿ ಎದುರಿಸಲು ಇರುವ ಒಂದು ಉತ್ತಮ ಮಾರ್ಗವೆಂದರೆ ಚಿನ್ನದ ಮೇಲೆ ಹೂಡಿಕೆ (Invest on Gold). ಅಷ್ಟೇ ಅಲ್ಲ ಇಂದು ಚಿನ್ನದ ಮೇಲಿನ ಹೂಡಿಕೆಯನ್ನು ಬಹು ಸುರಕ್ಷಿತ ಹೂಡಿಕೆ (Safe Investment) ಎಂದೂ ಸಹ ಕರೆಯಲಾಗುತ್ತದೆ. ಇನ್ನು ಇದೀಗ ಉಕ್ರೇನ್ (Ukraine) ಹಾಗೂ ರಷ್ಯಾ (Russia) ಮಧ್ಯೆ ಯುದ್ಧ (War) ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಚಿನ್ನದ ಬೆಲೆ (Gold Rate) ಗಗನಕ್ಕೆ ಏರುತ್ತಿದೆ. ಬೆಂಗಳೂರಿನಲ್ಲಿ (Bengaluru) ಚಿನ್ನದ ಬೆಲೆಯಲ್ಲಿ ಹಿಂದೆಂದಿಗಿಂತಲೂ ಇಂದು ಗಮನಾರ್ಹ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ನೀವು ಅಮೂಲ್ಯವಾದ ಲೋಹವನ್ನು ಖರೀದಿಸುತ್ತಿದ್ದರೆ ಬೆಂಗಳೂರಿನಲ್ಲಿ ದೈನಂದಿನ ಚಿನ್ನದ ಬೆಲೆಯನ್ನು ಪರಿಶೀಲಿಸಲೇ ಬೇಕು. ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ (24 Carrot) 1 ಗ್ರಾಂ ಚಿನ್ನಕ್ಕೆ ನಿನ್ನೆ 5,111 ರೂಪಾಯಿ ಇತ್ತು. ಇಂದು ಅದರ ಬೆಲೆ 5057 ರೂಪಾಯಿ ಆಗಿದೆ. ಅಂದರೆ 54 ರೂಪಾಯಿ ಇಳಿಕೆಯಾಗಿದೆ. ಇನ್ನು 22 ಕ್ಯಾರೆಟ್‌ ಗೋಲ್ಡ್ (22 Carrot Gold) ನಿನ್ನೆ 1 ಗ್ರಾಂಗೆ 4,685 ರೂಪಾಯಿ ಇದ್ದರೆ, ಇಂದು ಅದೇ ಬಂಗಾರಕ್ಕೆ 4635 ರೂಪಾಯಿಗಳಾಗಿವೆ. ಅಂದರೆ 50 ರೂಪಾಯಿ ಇಳಿದಂತಾಗಿದೆ.
Published by:Latha CG
First published: