• Home
  • »
  • News
  • »
  • national-international
  • »
  • Morning Digest: ನಟ ಚೇತನ್​​ಗೆ 14 ದಿನ ನ್ಯಾಯಾಂಗ ಬಂಧನ, ರಷ್ಯಾ ವಿರುದ್ಧ ಅಮೆರಿಕ ಕಿಡಿ; ಬೆಳಗಿನ ಟಾಪ್ ನ್ಯೂಸ್​

Morning Digest: ನಟ ಚೇತನ್​​ಗೆ 14 ದಿನ ನ್ಯಾಯಾಂಗ ಬಂಧನ, ರಷ್ಯಾ ವಿರುದ್ಧ ಅಮೆರಿಕ ಕಿಡಿ; ಬೆಳಗಿನ ಟಾಪ್ ನ್ಯೂಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Actor Chetan: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ


ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ (Tweet) ಮಾಡಿದ್ದ ನಟ ಚೇತನ್ (Actor Chetan) ಅವರನ್ನು ಶೇಷಾದ್ರಿಪುರಂ ಪೊಲೀಸರು ನಿನ್ನೆ ಮಧ್ಯಾಹ್ನ ಬಂಧಿಸಿದ್ದರು. ಇದೀಗ ನಟ ಚೇತನ್ ಗೆ 8ನೇ ಎಸಿಎಂಎಂ ನ್ಯಾಯಲಯ 14 ದಿನ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಿದೆ. ಚೇತನ್ ಪರ ವಕೀಲರಾದ ಕೆ.ಬಾಲನ್ (Lawyer K Balan) ಜಾಮೀನಿಗೆ (Bail) ಅರ್ಜಿ ಸಲ್ಲಿಸಿದ್ದರು. ಆದ್ರೆ ನ್ಯಾಯಾಧೀಶರು ಬುಧವಾರ ಅಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದರು. ಇತ್ತ ಚೇತನ್ ಬಂಧನದ ಬಳಿಕ ಫೇಸ್ ಬುಕ್ ಲೈವ್ ಬಂದಿರುವ ನಟನ ಪತ್ನಿ ಮೇಘಾ(Actor Chetan Wife Megha), ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಫೆಬ್ರವರಿ 16ರಂದು ನಟ ಚೇತನ್ ನ್ಯಾಯಾಧೀಶರ ಕುರಿತು ಪ್ರಚೋದನಕಾರಿ ಟ್ವೀಟ್ ಮಾಡಿದ್ದರು.


2.UP Elections: ಅಣ್ಣನ ಕ್ಷೇತ್ರ ಅಮೇಥಿಯಲ್ಲಿ ಇಂದು ತಂಗಿ ಪ್ರಿಯಾಂಕಾ ಗಾಂಧಿ ಪ್ರಚಾರ


ನವದೆಹಲಿ, ಫೆ. 23: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು ಚುನಾವಣಾ ಕಣದ ಬಿಸಿ‌ ಈಗ ಹೆಚ್ಚಾಗಿದೆ. ಇತರೆ ರಾಜ್ಯಗಳ ಚುನಾವಣಾ ಕೆಲಸ ಕೂಡ ಮುಗಿದಿದ್ದು ಘಟಾನುಘಟಿ ನಾಯಕರು ಈಗ ಉತ್ತರ ಪ್ರದೇಶದ ಕಡೆ ಗಮನ ಹರಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress Incharge and AICC General Secretary Priyanka Gandhi) ಅವರು ಇಂದು‌ ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ.


3.Russia-Ukraine War: ರಷ್ಯಾದ ವಿರುದ್ಧ ‘ದೊಡ್ಡಣ್ಣ‘ ಗರಂ, 2 ಹಣಕಾಸು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ


ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಸಂಘರ್ಷ (conflict) ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳಂತೂ ಇಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಪೂರ್ವ ಉಕ್ರೇನ್‌‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಪೂರ್ವ ಉಕ್ರೇನ್‌ ಭಾಗದ ಡೊನೆಟ್ಸ್ಕ್ (Donetsk) ಮತ್ತು ಲುಹಾನ್ಸ್ಕ್ (Luhansk) ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸುವ ಶಾಸನವೊಂದಕ್ಕೆ ಪುಟಿನ್ ಸಹಿ ಹಾಕಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧದ ಕಾರ್ಮೋಡ ದಟ್ಟವಾಗಿರುವ ಸಂದರ್ಭದಲ್ಲಿ ಪುಟಿನ್ ಅವರ ಈ ಘೋಷಣೆ ಮಹತ್ವದ ತಿರುವು ನೀಡಿದೆ. ಈ ಎರಡೂ ಪ್ರದೇಶಗಳಲ್ಲಿ ರಷ್ಯಾ ಬೆಂಬಲಿತ ಬಂಡುಕೋರರ ಪ್ರಾಬಲ್ಯ ಇದೆ. ಹೀಗಾಗಿ ರಷ್ಯಾ ಇವುಗಳನ್ನು ಸ್ವತಂತ್ರ ಎಂದು ಘೋಷಿಸಿ, ಬಳಿಕ ತನ್ನ ಗಡಿ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ. ಆದರೆ ರಷ್ಯಾದ ಈ ಸರ್ವಾಧಿಕಾರಿ ಧೋರಣೆ ವಿರುದ್ಧ ಅಮೆರಿಕಾ (America) ಸೇರಿದಂತೆ ಅನೇಕ ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ರಷ್ಯಾದ ನಿರ್ಧಾರದಿಂದ ಗರಂ ಆಗಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden), ರಷ್ಯಾದ ಎರಡು ಹಣಕಾಸು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.


4.High Court: ಹಿಜಾಬ್ ವೀಡಿಯೋಗಾಗಿ ಮಕ್ಕಳ ಬೆನ್ನು ಬೀಳದಂತೆ 60ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ PIL ಸಲ್ಲಿಕೆ


ಉಡುಪಿಯ ಸರಕಾರಿ ಕಾಲೇಜು(Udupi Government College) ಒಂದರಲ್ಲಿ ಶುರುವಾಗಿ ಈಗ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ(National Level) ಬಹಳ ಸದ್ದು ಮಾಡುತ್ತಿರುವ ಹಿಜಾಬ್(HIjab) ವಿವಾದ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದೆ. ರಾಜಕೀಯ(Political) ಸ್ವರೂಪ ಪಡೆದು ಕೊಂಡಿರುವ ಹಿಜಾಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಸಂಕೇತವನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್(High Court) ಮಧ್ಯಂತರ ಆದೇಶ ನೀಡಿ ವಿಚಾರಣೆ ನಡೆಸುತ್ತಿದ್ದರು ರಾಜ್ಯದಲ್ಲಿ ಪ್ರಸ್ತುತ ಹಿಜಾಬ್ ವಿವಾದ ತೆರೆಮರೆಗೆ ಸರಿಯುತ್ತಿಲ್ಲ.. ಇದಲ್ಲದೆ ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಸಹ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ..


5.Split In JDS: ಚನ್ನಪಟ್ಟಣ JDSನಲ್ಲಿ ಬಿರುಕು, ಸಿ.ಪಿ.ಯೋಗೇಶ್ವರ್ ಕಡೆಗೆ ಮುಖಂಡರು, ಕಾರ್ಯಕರ್ತರ ವಲಸೆ


ರಾಮನಗರ(ಫೆ.23): 2018 ರಲ್ಲಿ ಜೆಡಿಎಸ್ (JDS) ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು, ಶಾಸಕರಾಗಿ (MLA) ರಾಜ್ಯದ ಸಿಎಂ ಸಹ ಆದರೂ. ಆದರೆ 2023 ರ ಚುನಾವಣೆ ಏನಾಗಲಿದೆ ಎಂದು ಸ್ವತಃ ಜೆಡಿಎಸ್ ಪಕ್ಷದವರೇ ಚಿಂತೆ ಮಾಡುವಂತಾಗಿದೆ. ಯಾಕೆಂದರೆ ಕ್ಷೇತ್ರದ ಮಾಜಿ ಸಚಿವ, ಬಿಜೆಪಿ ಪ್ರಭಾವಿ ನಾಯಕ ಸಿ.ಪಿ.ಯೋಗೇಶ್ವರ್ ಈಗ ಫುಲ್ ಅಕ್ಟೀವ್ ಆಗಿದ್ದಾರೆ. ಯೋಗೇಶ್ವರ್ ನಾಯಕತ್ವಕ್ಕೆ ಮೆಚ್ಚಿ ನೂರಾರು ಜನ ಜೆಡಿಎಸ್ ಪ್ರಮುಖ ಮುಖಂಡರೇ ಬಿಜೆಪಿ (BJP) ಪಕ್ಷ ಸೇರುತ್ತಿದ್ದಾರೆ.‌ ಕುಮಾರಸ್ವಾಮಿ ರವರು ಕ್ಷೇತ್ರದ ಶಾಸಕರಾದ ಬಳಿಕ ಚನ್ನಪಟ್ಟಣ ಜೆಡಿಎಸ್ ನಲ್ಲಿ ಪ್ರತ್ಯೇಕ ಗುಂಪುಗಳು ಹೆಚ್ಚಾಗಿದ್ದು ಅದು ಕುಮಾರಸ್ವಾಮಿ ಗೆ ಈಗ ದೊಡ್ಡ ಮಟ್ಟದಲ್ಲಿ ಪೆಟ್ಟಾಗುತ್ತಿದೆ. ಚನ್ನಪಟ್ಟಣದ ಕಡೆಗೆ ಗಮನಬಿಟ್ಟ ಕುಮಾರಸ್ವಾಮಿ ಗೆ ಈಗ ಇದು ತಲೆನೋವಾಗಿದೆ.

Published by:Latha CG
First published: