Morning Digest: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಯುವಕನ ಕೊಲೆ, T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಭಾರತ, ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Amit Shah Interview: ಯುಪಿ ಚುನಾವಣೆ ಬಿಜೆಪಿಗೆ ಎಷ್ಟು ನಿರ್ಣಾಯಕ? ಅಮಿತ್​ ಶಾ Exclusive ಸಂದರ್ಶನ

ಪಂಚ ರಾಜ್ಯಗಳ ಚುನಾವಣೆ (5 States Elections) ಬಿಜೆಪಿ ಪಕ್ಷಕ್ಕೆ (BJP Party) ಮಹತ್ವದ ಚುನಾವಣೆಯಾಗಿ ಮಾರ್ಪಟ್ಟಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಶತ ಪ್ರಯತ್ನ ಮಾಡುತ್ತಿದೆ ಬಿಜೆಪಿ. ಮುಖ್ಯವಾಗಿ ಉತ್ತರ ಪ್ರದೇಶ ಚುನಾವಣೆ(Uttar Pradesh Election) ಮೇಲೆ ಕಣ್ಣಿಟ್ಟಿರುವ ಕಮಲ, ಅಲ್ಲಿ ಮತ್ತೆ ಕೇಸರಿ ಬಾವುಟ ಹಾರಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಹಾಲಿ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ನೇತೃತ್ವದ ಬಿಜೆಪಿ​ ಸರ್ಕಾರ ಮತ್ತೆ ರಚನೆಯಾಗಬೇಕೆಂಬುದು ಬಿಜೆಪಿಯ ಅಜೆಂಡಾವಾಗಿದೆ. ದೇಶದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ರಾಜಕೀಯ ಧ್ರುವೀಕರಣ, ಹಿಜಾಬ್ ವಿವಾದ, ಸಿಎಎ ಕಾಯ್ದೆ, ಕೊರೋನಾ, ಭಯೋತ್ಪಾದನೆ, ಯೋಗಿ ಆದಿತ್ಯನಾಥ್ ಸಿಎಂ ಆಗುವ ಬಗ್ಗೆ ಇರುವ ಅನುಮಾನಗಳು ಇನ್ನೂ ಹಲವು ವಿಷಯಗಳ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ವಿಷಯಗಳ ಬಗ್ಗೆ, ನೆಟ್‌ವರ್ಕ್ 18 ಪ್ರಧಾನ ಸಂಪಾದಕ ರಾಹುಲ್ ಜೋಶಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನಡೆಸಿದ್ದಾರೆ.

2.Shivamoggaದಲ್ಲಿ ಯುವಕನ ಕೊಲೆ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಕುಟುಂಬಸ್ಥರಿಗೆ ಗೃಹ ಸಚಿವರಿಂದ ಸಾಂತ್ವಾನ

ಹಳೆ ವೈಷಮ್ಯ ಹಿನ್ನೆಲೆ ಶಿವಮೊಗ್ಗ(Shivamogga)ದಲ್ಲಿ ಹಿಂದೂ ಸಂಘಟನೆ(Hindu Organization) ಗಳಲ್ಲಿ ಗುರುತಿಸಿಕೊಂಡಿದ್ದ ಯುವಕನನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅನ್ಯಕೋಮಿನ ಘರ್ಷಣೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಹಾಕಲಾಹಗಿದ್ದು, 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ರವರು ಇಂದು ಮುಂಜಾನೆ, ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗ ದಳದ ಕಾರ್ಯಕರ್ತನ ಪಾರ್ಥೀವ ಶರೀರವನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ವೀಕ್ಷಿಸಿದರು. ನಂತರ ಮೃತನ ಕುಟುಂಬದ ಸದಸ್ಯರನ್ನೂ ಭೇಟಿಯಾಗಿ, ಸಾಂತ್ವಾನ ಹೇಳಿದರು. ಯುವಕನ ಕೊಲೆಯ ಕುರಿತು ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರುನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದೇನೆ. ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಗಸ್ತು ತಿರುಗುತ್ತಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದರು.

3.Congress ನಾಯಕರ ಅಹೋರಾತ್ರಿ ಧರಣಿ; ಇಂದು ಅಧಿವೇಶನದಲ್ಲಿಯೂ ಮುಂದುವರಿಯಲಿದೆ ಪ್ರತಿಭಟನೆ

ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ (Congress Leaders) ಅಹೋರಾತ್ರಿ ಧರಣಿ (Protest) ನಾಲ್ಕನೇ ದಿನ ಮುಗಿಸಿದೆ. ಇತ್ತ ಸರ್ಕಾರ ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಡೋಂಟ್ ಕೇರ್ ಅಂತ ಹೇಳಿದ್ದು, ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಇಂದು ಅಧಿವೇಶನ (Assembly Session) ಪುನರಾರಂಭವಾಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ(Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ. ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋವರೆಗೂ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

4.Ind Vs WI: ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ

ವೆಸ್ಟ್ಇಂಡೀಸ್ (West Indies)ವಿರುದ್ಧದ ಏಕದಿನ (ODI )ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ (Team India)ಟಿ-ಟ್ವೆಂಟಿಯಲ್ಲಿ T-20ಪಾರಮ್ಯ ಮೆರೆದಿದೆ.. ಹೌದು ಕೋಲ್ಕತ್ತಾದ (Kolkata )ಈಡನ್ ಗಾರ್ಡನ್(Eden garden)ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತ ತಂಡ 3-0 ಸರಣಿ ವಶಕ್ಕೆ ಪಡೆದುಕೊಂಡಿದೆ.ಈ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ತೀವ್ರ ಮುಖಭಂಗ ಉಂಟುಮಾಡಿದೆ.. ಇನ್ನು ವೆಸ್ಟ್ ಇಂಡೀಸ್ ತಂಡವನ್ನ ಮೂರು ಟಿ20 ಪಂದ್ಯದಲ್ಲೂ ಸೋಲಿಸಿದ ಭಾರತ ಸತತ 9ನೇ ಟಿ20 ಪಂದ್ಯವನ್ನ ಜಯಿಸಿದ ಸಾಧನೆ ಮಾಡಿದೆ. 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 9 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.

5.Karnataka Weather Report: ಒಂದು ವಾರಕ್ಕೆ ಬಿಸಿಲಿಗೆ ಸುಸ್ತಾದ ಜನರು; ಇಲ್ಲಿದೆ ಇವತ್ತಿನ ಹವಾಮಾನ ವರದಿ

Karnataka Weather Report 21 Feb 2022: ಫೆಬ್ರವರಿ ಅಂತ್ಯಕ್ಕೆ ಬಂದಂತೆ ರಾಜ್ಯದಲ್ಲಿ ಬಿಸಿಲು ಏರಿಕೆಯಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಎಲ್ಲಡೆ ಬೇಸಿಗೆ (Summer) ಅನುಭವ ಆಗುತ್ತಿದೆ. ಮಧ್ಯಾಹ್ನ ಸೂರ್ಯನ ಪ್ರಖರತೆ ಹೆಚ್ಚಾಗಿದ್ರೆ, ರಾತ್ರಿ 10 ಗಂಟೆಯ ನಂತರ ಚಳಿ (Cold Weather) ಹಿತ ನೀಡುತ್ತಿದೆ. ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗುತ್ತಿದೆ. ರಾಜಧಾನಿ ಬೆಂಗಳೂರಿ(Bengaluru Weather)ನಲ್ಲಿ ಗರಿಷ್ಠ 32 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಸೂರ್ಯ ತನ್ನ ಪ್ರಖರತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದಾನೆ. ವಿಶೇಷ ಅಂದ್ರೆ ಮಲೆನಾಡು ಭಾಗದಲ್ಲಿಯೂ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟುತ್ತಿದೆ.
Published by:Latha CG
First published: