Morning Digest: ಹಿರಿಯ ನಟ ರಾಜೇಶ್​ ನಿಧನ, ತಿರುಪತಿಯಲ್ಲಿ ಹೊಸ ರೂಲ್ಸ್​, ಚಿನ್ನದ ಬೆಲೆ ಏರಿಕೆ; ಬೆಳಗಿನ ಟಾಪ್​ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Gold And Silver Price; ಎರಡು ದಿನಗಳ ಬಳಿಕ ಏರಿಕೆಯಾದ ಚಿನ್ನ: ಖರೀದಿಗೂ ತೆರಳುವ ಮುನ್ನ ಇವತ್ತಿನ ಬೆಲೆ ನೋಡಿ

Gold And Silver Price Today: ಕೇಂದ್ರ ಬಜೆಟ್‌ (Central Budget) ನಂತರ ಏರಿಕೆಯ ಹಾದಿಯಲ್ಲಿದ್ದ ಬಂಗಾರದ (Gold) ಬೆಲೆ (Rate) ಕಳೆದ 2 ದಿನಗಳಿಂದ ಇಳಿಕೆಯಾಗಿತ್ತು. ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. ಇತ್ತು. ಇಂದು 500 ರೂ. ಏರಿಕೆಯಾಗಿ 46,300 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,970 ರೂ. ಇತ್ತು. ಇಂದು 540 ರೂ. ಏರಿಕೆಯಾಗಿ 50,510 ರೂ. ಆಗಿದೆ.

2.Karnataka Weather Today: ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಏರಿಕೆ

Karnataka Weather Today: ರಾಜ್ಯದಲ್ಲಿ ಬೇಸಿಗೆಯ (Summer) ಬಿಸಿಲು ನೆತ್ತಿ ಸುಡುತ್ತಿದೆ. ಆದ್ರೆ ರಾತ್ರಿ ಮಾತ್ರ ಚಳಿಗಾಲದ ಅನುಭವ ನೀಡುತ್ತಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿದ್ದು, ಅಲ್ಲಲ್ಲಿ ಚದುರಿದ ಮಳೆಯಾಗಿರುವ ವರದಿಯಾಗಿವೆ. ಇನ್ನುಳಿದ ಪ್ರದೇಶದಲ್ಲಿ ಒಣ ಹವೆ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿದ್ದು, ಜನರಿಗೆ ಬೇಸಿಗೆಯ ಅನುಭವವಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇಷ್ಟು ದಿನ ಚಳಿಗೆ ನಡುಗುತ್ತಿದ್ದ ಜನರು, ಬೇಸಿಗೆ ಆರಂಭಕ್ಕೂ ಮುನ್ನವೇ ಸೂರ್ಯದೇವ(Sun)ನನ್ನು ಶಪಿಸುತ್ತಿದ್ದಾರೆ.

3.Actor Rajesh: ಹಿರಿಯ ನಟ ಕಲಾತಪಸ್ವಿ ರಾಜೇಶ್(87) ಇನ್ನು ನೆನಪು ಮಾತ್ರ

ಹಿರಿಯ ನಟ ಕಲಾತಪಸ್ವಿ ರಾಜೇಶ್ (87) ಇಂದು ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ರಾಜೇಶ್ ಅವರು ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.  ಬೆಂಗಳೂರಿನ ಬಾಣಸವಾಡಿಯ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ರಾಜೇಶ್ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿತ್ತು.

4.Tirupati: ತಿರುಪತಿ ದೇಗುಲದ ಆವರಣದಲ್ಲಿ ಸಿಗಲ್ಲ ಊಟ, ತಿಂಡಿ, ಕಾಫಿ, ಟಿಟಿಡಿ ಹೊಸ ರೂಲ್ಸ್ ಏನು ಗೊತ್ತಾ​!?

ತಿರುಪತಿ(ಫೆ .19): ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (Tirupati Venkateshwara) ಸೇರಿದಂತೆ 12 ದೇವಸ್ಥಾನಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (TTD), ಬೆಟ್ಟದ ಮೇಲಿನ ದೇವಸ್ಥಾನದ ಪಟ್ಟಣದಲ್ಲಿ ಯಾವುದೇ ಖಾಸಗಿ ತಿನಿಸುಗಳು ಮತ್ತು ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡದಿರಲು ನಿರ್ಧರಿಸಿದೆ. ಇನ್ನು ತಿರುಮಲದ ತಿರುಪತಿ ದೇವಾಲಯದ ಆವರಣದಲ್ಲಿ ತಲೆ ಎತ್ತಿರೋ ಎಲ್ಲಾ ಖಾಸಗಿ ಹೋಟೆಲ್​ಗಳನ್ನು(Private hotel) ತೆರವುಗೊಳಿಸಲು ಟಿಟಿಡಿ ನಿರ್ಧರಿಸಿದೆ. ಏಕರೂಪದಲ್ಲಿ ಅನ್ನ ಪ್ರಸಾದ ವಿತರಿಸಲು ( Distribute) ಆಡಳಿತ ಮಂಡಳಿಯು ಚಿಂತನೆ ನಡೆಸಿದೆ. ತಿರುಮಲ ಬೆಟ್ಟದ ಎಲ್ಲ ಪ್ರಮುಖ, ಆಯಕಟ್ಟಿನ ಸ್ಥಳಗಳಲ್ಲಿ ಅನ್ನ ಪ್ರಸಾದ ವಿತರಿಸುವ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿರೋದಾಗಿ ಆಡಳಿತ ಮಂಡಳಿಯ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

5.Stealing Donkey: ಕತ್ತೆ ಕದ್ದ ಆರೋಪ, ಕಾಂಗ್ರೆಸ್​ ಮುಖಂಡನನ್ನು ಬಂಧಿಸಿದ ಪೊಲೀಸರು

ಹೈದರಾಬಾದ್(ಫೆ.19): ತೆಲಂಗಾಣದ(Telangana) ಕರೀಂನಗರದಲ್ಲಿ(Karimnagar) ಕತ್ತೆಯನ್ನು(Donkey) ಕದ್ದ(Steal) ಆರೋಪದ ಮೇಲೆ ಕಾಂಗ್ರೆಸ್​ ಮುಖಂಡನನ್ನು(Congress Leader) ಬಂಧಿಸಲಾಗಿದೆ ಎಂದು ಪೊಲೀಸರು(Police) ದೃಢಪಡಿಸಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ, ಇತ್ತೀಚೆಗೆ ತೆಲಂಗಾಣ ಸಿಎಂ ಕೆಸಿಆರ್​ (Telangana CM K Chandrashekar Rao)ವಿರುದ್ಧ ನಡೆದ ಪ್ರತಿಭಟನೆಯಲ್ಲಿ(Protest) ಕಳುವು ಮಾಡಲಾಗಿದ್ದ ಕತ್ತೆಯನ್ನೇ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:Latha CG
First published: