• Home
  • »
  • News
  • »
  • national-international
  • »
  • Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಮದುವೆ ಮನೆಯಲ್ಲಿ 13 ಮಂದಿ ಸಾವು, ಮುಂದಿನ 24 ಗಂಟೆ ಮಳೆ, ಬೆಳಗಿನ ಟಾಪ್ ನ್ಯೂಸ್

Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಮದುವೆ ಮನೆಯಲ್ಲಿ 13 ಮಂದಿ ಸಾವು, ಮುಂದಿನ 24 ಗಂಟೆ ಮಳೆ, ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Tragedy: ಮಸಣವಾದ ಮದುವೆ ಮನೆ, ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಹಿಳೆಯರು ಸಾವು


ಮದುವೆ ಸಂಭ್ರಮದಲ್ಲಿದ್ದವರು ಯಾರೂ ಸಹ ಊಹಿಸಲು ಅಸಾಧ್ಯವಾದ ಘಟನೆ ನಡೆದು ಹೋಗಿದೆ. ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯುತ್ತಿದ್ದ ವೇಳೆ ಸುಮಾರು 13 ಮಂದಿ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಬಿದ್ದು ದುರಂತ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮದಲ್ಲಿ. ವಿಧಿಯಾಟಕ್ಕೆ ಮದುವೆ ಸಂಭ್ರಮದಲ್ಲಿದ್ದ ಮಹಿಳೆಯರು ಮಸಣ ಸೇರಿದ್ದಾರೆ. ಮದುವೆ ಮನೆಯಲ್ಲಿ ಇಂತಹದ್ದೊಂದು ಅವಘಡ ಸಂಭವಿಸುತ್ತದೆಂದು ಯಾರೂ ಸಹ ಊಹಿಸಿರಲಿಲ್ಲ. ಜವರಾಯನ ಅಟ್ಟಹಾಸಕ್ಕೆ 13 ಮಹಿಳೆಯರು ಬಲಿಯಾಗಿದ್ದು, ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.


2.Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕಾಡಲಿದೆ ವಿದ್ಯುತ್​ ಸಮಸ್ಯೆ


ಫೆಬ್ರವರಿ 17 ಮತ್ತು ಫೆಬ್ರವರಿ 18 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಂದು (ಫೆಬ್ರವರಿ 17 ರಂದು) ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ.ಎನ್.ನಯ್ಯ ರಸ್ತೆ, ಬಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರ ಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, 8 ನೇ ಕ್ರಾಸ್, 9 ನೇ ಮತ್ತು 10 ನೇ ಕ್ರಾಸ್ ಜೆಪಿ ನಗರ 1 ನೇ ಹಂತ ನಗರ, 9ನೇ ಕ್ರಾಸ್, ಐಜಿ ಸರ್ಕಲ್, ಸಾರಕ್ಕಿ ಮಾರುಕಟ್ಟೆ, ಕೆಟಿ ಅಪಾರ್ಟ್‌ಮೆಂಟ್, ಡಬ್ಲ್ಯುಎಂಎಸ್ ಕಾಂಪೌಂಡ್ ಹಿಂಬದಿ.


3.Karnataka Weather Report: ಮುಂದಿನ 24 ಗಂಟೆ ಈ ಭಾಗದಲ್ಲಿ ಮಳೆಯ ನಿರೀಕ್ಷೆ


Karnataka Weather Report 17 Feb 2022: ರಾಜ್ಯದಲ್ಲಿ ಧಗೆ ಹೆಚ್ಚಾಗುತ್ತಿದ್ದು, ಸಂಜೆ 7 ಗಂಟೆ ಆದ್ರೂ ಶಕೆ ಕಡಿಮೆ ಆಗುತ್ತಿಲ್ಲ. ಮಧ್ಯಾಹ್ನದ ಬಿಸಿಲಿಗೆ ಜನರು ಹೈರಾಣು ಆಗುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಜನರು ತಂಪಾದ ಪಾನೀಯ (Cold Drinks)ಗಳತ್ತ ಮೊರೆ ಹೋಗುತ್ತಿದ್ದಾರೆ. ಕೋಲಾರ (Kolar) ಜಿಲ್ಲೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಲಿದೆ. ಬೆಂಗಳೂರು ಗ್ರಾ, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ ಜಿಲ್ಲೆಗಳಲ್ಲಿ ಬೆಳಗಿನ ಜಾವ ಚಳಿಯ ಜೊತೆ ಮಂಜಿನಿಂದ ಕೂಡಿದ ವಾತಾವರಣ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29, ಕನಿಷ್ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


4.Gold Price Today: ಇಳಿಕೆಯಾಯ್ತು ಚಿನ್ನದ ಬೆಲೆ, ತಡ ಮಾಡದೇ ಇಂದೇ ಖರೀದಿಸಿ


Gold Rate on Feb 17, 2022: ಇತ್ತೀಚೆಗೆ ಚಿನ್ನ, ಬೆಳ್ಳಿ ದರದಲ್ಲಿ(Gold and Silver Price) ಭಾರಿ ವ್ಯತ್ಯಾಸವಾಗುತ್ತಿದೆ. ಒಂದು ದಿನ ಬೆಲೆ ಏರಿಕೆಯಾದರೆ, ಇನ್ನೊಂದು ದಿನ ಇಳಿಕೆಯಾಗುತ್ತಿರುತ್ತದೆ. ಹಲವು ದಿನಗಳ ಕಾಲ ಗಗನಮುಖಿಯಾಗಿದ್ದ ಬಂಗಾರದ ಬೆಲೆ ಈಗ ಏರಿಕೆ - ಇಳಿಕೆಯ ಹಾದಿಯಲ್ಲಿದೆ. ನಿನ್ನೆ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ, ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂ. ಇತ್ತು. ಇಂದು 200 ರೂ. ಇಳಿಕೆಯಾಗಿ 46,200 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,620 ರೂ. ಇತ್ತು. ಇಂದು 220 ರೂ. ಕಡಿಮೆಯಾಗಿ 50,400 ರೂ. ಆಗಿದೆ.


5.Cricket: ಭಾರತ ವೆಸ್ಟ್ ಇಂಡೀಸ್ ಮೊದಲ ಟಿ-20 ಪಂದ್ಯ: 6 ವಿಕೆಟ್ ಗಳ ಅಂತರದಿಂದ ಭಾರತಕ್ಕೆ ಭರ್ಜರಿ ಗೆಲುವು


ಪ್ರವಾಸಿ ವೆಸ್ಟ್ ಇಂಡೀಸ್(West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ (ODI) ಕ್ಲೀನ್ ಸ್ವೀಪ್ (Clean Sweep) ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಮುಖಭಂಗ ಮಾಡಿದ್ದ ಭಾರತ ಟಿ20(T-20) ಸರಣಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಹೌದು ಕೋಲ್ಕತ್ತಾದ ಈಡನ್ ಗಾರ್ಡನ್(Eden Garden Kolkata) ಕ್ರೀಡಾಂಗಣದಲ್ಲಿ(Stadium) ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ಗೆ ಭಾರಿ ಮುಜುಗರ ಉಂಟುಮಾಡಿದೆ. ಈ ಮೂಲಕ ಭಾರತ ಮೂರು ಟಿ20 ಪಂದ್ಯಗಳಲ್ಲಿ 1-0 ಅಂತರದಿಂದ ಸರಣಿ ಮುನ್ನಡೆ ಕಾಯ್ದುಕೊಂಡಿದೆ.

Published by:Latha CG
First published: