Morning Digest: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ, ಅಮಿತ್​ ಶಾ ಭೇಟಿಯಾದ ರಮೇಶ್​ ಜಾರಕಿಹೊಳಿ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

ರಾಜ್ಯದಲ್ಲಿ ಸಂಪುಟ (Cabinet) ವಿಸ್ತರಣೆ ಅಥವಾ ಪುನಾರಚನೆಯ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ದೆಹಲಿ ಪ್ರವಾಸ ಮಗಿಸಿಯೂ ಬಂದಿದ್ದಾರೆ. ಈ ನಡುವೆ ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ನಾಯಕರನ್ನ ಭೇಟಿ ಆಗಿದ್ದಾರೆ. ಆದ್ರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಮ್ಮದೇ ಮಾರ್ಗದಲ್ಲಿ ಸಂಪುಟಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿವೆ. ಗೋವಾ ಸಿಎಂ ಪ್ರವೋದ್ ಸಾವಂತ್ ಅವರ ಜೊತೆಯಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

2.Hijab Controversy: ಹಿಜಾಬ್ ವಿವಾದ, ಪ್ರಿಯಾಂಕಾ ಗಾಂಧಿ ಟ್ವೀಟ್ ಬಗ್ಗೆ ಸಂಸದೆ Sumalatha Ambareesh ಹೇಳಿದ್ದೇನು?

ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್, ಈ ಪ್ರಕರಣ ರಾಜಕೀಯ ಪಡೆದುಕೊಳ್ಳಲು ಬಹಳ ದೊಡ್ಡ ಪಾತ್ರವಿದೆ. ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಕೈವಾಡ ಇದೆ ಎಂದು ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಮುಗ್ಧ ಮಕ್ಕಳಲ್ಲಿ ವಿಷ ಬಿತ್ತಲು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ನನಗೆ ಈ ಪ್ರಕರಣದಲ್ಲಿ ಬಹಳಷ್ಟು ರಾಜಕೀಯವಿರುವುದು ಎದ್ದು ಕಾಣುತ್ತಿದೆ ಎಂದು ಯಾವುದೇ ರಾಜಕೀಯ ಪಕ್ಷದ ಕಡೆ ಬೊಟ್ಟು ಮಾಡದೆ ಪ್ರತಿಕ್ರಿಯೆ ನೀಡಿದ್ದಾರೆ.

3.UP Elections: ಇಂದು ಅತಿ‌ ಮಹತ್ವದ ಮೊದಲ ಹಂತದ ಮತದಾನ

ನವದೆಹಲಿ, ಫೆ. 10: ರಾಷ್ಟ್ರ ರಾಜಕಾರಣದ ಮೇಲೂ ಗಮನಾರ್ಹ ಪರಿಣಾಮ ಬೀರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಈ ಬಾರಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಮತದಾನವಾಗಲಿದೆ. ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ (Central Election Commission)‌ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸಲು ಅವಕಾಶ ನೀಡಿದೆ. ಇದೇ ಕಾರಣಕ್ಕೆ ಈ ಬಾರಿ ಫೆಬ್ರವರಿ 11ರವರೆಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಬೃಹತ್ ಸಭೆ, ಸಮಾರಂಭ, ಸಮಾವೇಶ, ಬೈಕ್ ರ್‍ಯಾಲಿಗಳಿಗೂ ನಿರ್ಬಂಧ ವಿಧಿಸಿದೆ.

4.Karnataka Weather Today: ರಾಜ್ಯದಲ್ಲಿ ಬೇಸಿಗೆಯ ಧಗೆ ಆರಂಭ; ಇತ್ತ ತಮಿಳುನಾಡಿಗೆ ಮಳೆರಾಯನ ಎಂಟ್ರಿ

Karnataka Weather Today 10 Feb 2022: ರಾಜ್ಯದಲ್ಲಿ ಬೇಸಿಗೆ (Summer) ಆರಂಭವಾಗಿದ್ದು, ಚಳಿ ಚಳಿ (Cold) ಎನ್ನುತ್ತಿದ್ದ ಜನರು ಬಿಸಿಲಿನ ತಾಪಕ್ಕೆ ಶಿವ ಶಿವ ಅನ್ನುವಂತಾಗಿದೆ. ಕರಾವಳಿ(Coastal), ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಪೂರ್ಣ ಒಣ ಹವೆ ಇರಲಿದ್ದು, ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆ ಸಣ್ಣ ಪ್ರಮಾಣದ ಚಳಿ ಬಿಸಿಲಿನಿಂದ ಬಳಲಿದ ಜನತೆಗೆ ತಂಪಾದ ಹಿತವನ್ನು ನೀಡುತ್ತಿದೆ.ಇನ್ನೂ ಮಲೆನಾಡು, ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಚಳಿ ಕೊಂಚ ಇಳಿಕೆಯಾಗಿದೆ. ಇಂದು ಬೆಂಗಳೂರಿ(Bengaluru Weather)ನಲ್ಲಿ ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.

5.Writing With Fire: ಆಸ್ಕರ್ ಪ್ರಶಸ್ತಿಯ ಫೈನಲ್ ರೇಸ್ ನಲ್ಲಿ ಭಾರತದ ಸಾಕ್ಷ್ಯಚಿತ್ರ : ಪ್ರಶಸ್ತಿ ಗೆಲ್ಲುತ್ತಾ Writing With Fire?

ಸಿನಿಮಾ ಜಗತ್ತಿನಲ್ಲಿ(Cinema World) ಅತ್ಯುತ್ತಮ ಪ್ರಶಸ್ತಿ(Award) ಎಂದು ಕರೆಯಲ್ಪಡುವ 94 ನೇ ಆಸ್ಕರ್(Oscar) ಪ್ರಶಸ್ತಿಯ ಫೈನಲ್ ಲಿಸ್ಟ್(Final List) ಅನೌನ್ಸ್ ಮಾಡಲಾಗಿದೆ.. ಅಮೆರಿಕಾದ(America) ಲಾಸ್ ಏಂಜಲೀಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 94 ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶಿತರ ಪಟ್ಟಿ ಬಿಡುಗಡೆ ಮಾಡಿದೆ.. ಆದರೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ತಮಿಳು ನಟ ಸೂರ್ಯ(Tamil Actor Surya) ನಟನೆಯ ಜೈ ಭೀಮ್(Jai Bheem) ಚಿತ್ರ ಆಸ್ಕರ್ ಅಂತಿಮ ರೇಸ್ ನಿಂದ ಹೊರ ಬಿದ್ದಿದೆ. ಆದರೆ ಭಾರತದ ಸಾಕ್ಷ್ಯಚಿತ್ರವೊಂದು ಆಸ್ಕರ್ ಫೈನಲ್ ರೇಸ್ ನಲ್ಲಿ ಇದ್ದು ಪ್ರಶಸ್ತಿ ಗೆಲ್ಲುವ ಹಂತದಲ್ಲಿ ಇದೆ. ಹೀಗಾಗಿ ಭಾರತೀಯರು ರೈಟಿಂಗ್ ವಿಥ್ ಫೈಯರ್(Writing with Fire) ಸಾಕ್ಷಾಚಿತ್ರ 94ನೇ ಆಸ್ಕರ್ ಪ್ರಶಸ್ತಿ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
Published by:Latha CG
First published: