Morning Digest: ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ಏರಿಕೆ, ಚಿನ್ನದ ದರ ಸ್ಥಿರ, ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಚಳಿಯ ಪ್ರಮಾಣ ಹೆಚ್ಚಳ, ತುಂತುರು ಮಳೆ

Karnataka Weather Report Today: ರಾಜ್ಯದಲ್ಲಿ ಮಳೆಯ (Karnataka Rainfall) ಪ್ರಮಾಣ ಇಳಿಕೆಯಾಗಿದ್ರೆ, ಚಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲಿದೆ. ಬಿಸಿಲು ಜಿಲ್ಲೆಗಳಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ ಇದರ ಜೊತೆ ದಿನವವಿಡೀ ಮೋಡ ಕವಿದ ವಾತಾವರಣದಿಂದಾಗಿ (Cloudy Weather) ಜನರು ಚಳಿಯಿಂದ ಮನೆಗೆ ಹೊರಗೆ ಬರದಂತೆ ಆಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕಾಲಿಕ ಮಳೆ (Unseasonal Rain) ಬ್ರೇಕ್ ಕೊಟ್ಟಿದ್ರೂ, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ, ಮತ್ತೊಂದು ಕಡೆ ಬೆಂಗಳೂರಿನ ಬಹುತೇಕ ಭಾಗದಲ್ಲಿ ಮಳೆಯ ಸಿಂಚನ ಆಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 25, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

2. ವಾರಣಾಸಿಯಲ್ಲಿ ಬಿಜೆಪಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ- ಕುತೂಹಲ ಕೆರಳಿಸಿದ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ (Varanasi) ಬಿಜೆಪಿ ಮುಖ್ಯಮಂತ್ರಿಗಳು (Chief Minister) ಮತ್ತು ಉಪಮುಖ್ಯಮಂತ್ರಿಗಳೊಂದಿಗೆ (Deputy Chief Minister) ಸಭೆ ನಡೆಸಿದ್ದಾರೆ."ಬಿಜೆಪಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಕಾಶಿಯಲ್ಲಿ ವಿಸ್ತೃತ ಸಭೆಯನ್ನು ಈಗಷ್ಟೇ ಮುಕ್ತಾಯಗೊಳಿಸಲಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ (Tweet) ಸಹ ಮಾಡಿದ್ದಾರೆ.3.Petrol, Diesel Price Today: ಬೆಂಗಳೂರಿನಲ್ಲಿ ತೈಲ ಬೆಲೆ ಏರಿಕೆ: ಇಲ್ಲಿದೆ ನಿಮ್ಮ ನಗರದ ದರ

Petrol, Diesel Price Today December 14, 2021: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

4.Gold Price Today: ಚಿನ್ನ ಖರೀದಿಗೆ ಹೋಗುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಇವತ್ತಿನ ಹಳದಿ ಲೋಹದ ಬೆಲೆ

Gold Rate on Dec 14, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಯಥಾಸ್ಥಿತಿ ಕಾಯ್ದುಕೊಂಡಿದೆ ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಏರಿಕೆ ಕಂಡಿದೆ ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,780ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,780ರೂ. ಇತ್ತು. ಇಂದೂ ಸಹ ಅದೇ ಬೆಲೆ ಇದೆ.

5. ಮುಂದಿನ ವರ್ಷ 5 ಬಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲು ನಿರ್ಧಾರ- ಪಿಯೂಷ್ ಗೋಯಲ್

ಭಾರತವು (India) ಮುಂದಿನ ವರ್ಷ 5 ಬಿಲಿಯನ್ (5 Billion) ಡೋಸ್ ಕೊರೊನಾ ಲಸಿಕೆಗಳನ್ನ (Corona Vaccination) ಉತ್ಪಾದಿಸಲು ಯೋಜಿಸಿದೆ ಮತ್ತು ಪ್ರಪಂಚವನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಕೊಡುಗೆ ನೀಡಲು ಯೋಜನೆ ತಯಾರಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ದೇಶವಾಗಿರುವ ಭಾರತವು ಇತರ ದೇಶಗಳಿಗೆ ಕೊರೊನಾ ಲಸಿಕೆಗಳ ಪೂರೈಕೆಯನ್ನು ಪುನರಾರಂಭಿಸಿದೆ. ಕೊರೊನಾ ವೈರಸ್(Coronavirus) ಸೋಂಕು ಹಠಾತ್ ಏರಿಕೆ ಕಂಡ ಕಾರಣ ದೇಶದ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲು ಕೇಂದ್ರಿಕರಿಸಲು ನಿರ್ಧರಿಸಿದ ಕಾರಣ ಈ ವರ್ಷದ ಏಪ್ರಿಲ್‌ನಲ್ಲಿ ಕೊರೊನಾ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು.

6.ಬೆಳಗಾವಿ ಪೋಲಿಸರ ಮಹಾ ಎಡವಟ್ಟು: MES ಪುಂಡನಿಗೆ ಮಸಿ ಬಳಿದ ಯುವಕನ ವಿರುದ್ಧ ಕೊಲೆ ಯತ್ನ ಕೇಸ್

ಬೆಳಗಾವಿ: ಸೋಮವಾರ MES ಮುಖಂಡ ದೀಪಕ್ ದಳವಿ (Deepak Malavi) ಮುಖಕ್ಕೆ ಮಸಿ ಬಳಿದಿದ್ದ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತ ಸಂಪತ್ ದೇಸಾಯಿ (Sampath Desai) ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬೆಳಗಾವಿ ಟಿಳಕವಾಡಿ ಪೊಲೀಸರ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಕರ್ನಾಟಕ ನವನಿರ್ಮಾಣ‌‌ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ‌ಪಾಟೀಲ್ (Bhiamashankar Patil)ಪತ್ರ ಬರೆದಿದ್ದಾರೆ. ಸುಳ್ಳು ಕೇಸ್ ದಾಖಲಿಸಿದ್ದನ್ನ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಪತ್ರದ ಮುಖೇನ ನೀಡಿದ್ದಾರೆ.
Published by:Latha CG
First published: