HR RameshHR Ramesh
|
news18-kannada Updated:January 20, 2020, 6:39 PM IST
ಬಿಜೆಪಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಕೋರಿದ ಪ್ರಧಾನಿ ಮೋದಿ. ಅಮಿತ್ ಶಾ ಇದ್ದಾರೆ.
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಹಿಮಾಚಲ ಪ್ರದೇಶ ಮೂಲದ ಜೆ.ಪಿ.ನಡ್ಡಾ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಪ್ರಧಾನಿ ಮೋದಿ, ನಿರ್ಗಮಿತ ಅಧ್ಯಕ್ಷ ಅಮಿತ್ ಶಾ ಸೇರಿ ಪಕ್ಷದ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಜೆ.ಪಿ.ನಡ್ಡಾ ಇಂದಿನಿಂದ ಮೂರು ವರ್ಷಗಳ ಕಾಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ನೂತನ ಅಧ್ಯಕ್ಷರಿಗೆ ಬಿಜೆಪಿ ಮುಖ್ಯಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜೆ.ಪಿ. ನಡ್ಡಾ ಅವರ ನಾಯಕತ್ವದಲ್ಲಿ ಪಕ್ಷವು ತನ್ನ ಮೂಲ ತತ್ವ ಮತ್ತು ಸಿದ್ಧಾಂತದೊಂದಿಗೆ ಅಭೂತಪೂರ್ವ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನಗೆ ಇದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಎದುರಿಸಿದ ಸವಾಲುಗಳಿಗಿಂತ ಈಗ ಹೆಚ್ಚು ಸವಾಲುಗಳನ್ನು ಎದುರಿಸಬೇಕಿದೆ ಎಂದು ಹೇಳಿದರು. ಹಾಗೂ ಹಿಮಾಚಲಪ್ರದೇಶಕ್ಕಿಂತ ಹೆಚ್ಚಾಗಿ ಜೆಪಿ ನಡ್ಡಾ ಬಗ್ಗೆ ಬಿಹಾರ ಹೆಚ್ಚು ಹೆಮ್ಮೆ ಪಡುತ್ತದೆ ಎಂದು ನೂತನ ಅಧ್ಯಕ್ಷರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ,
ಶುಭಾಶಯ ಕೋರಿದರು.
ಇದನ್ನು ಓದಿ: ಮೋದಿ-ಶಾ ನಂಬಿಕಸ್ಥ ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಸಂಘಟನೆ ಮತ್ತು ಸಂಘರ್ಷ ಇವು ಪಕ್ಷದ ಮೂಲ ತಳಹದಿಗಳು. ಒಂದು ಪಕ್ಷ ಸರ್ಕಾರವಾಗಿದ್ದಾಗ, ಪಕ್ಷ ಸಂಘಟನೆಯನ್ನು ನಡೆಸುವುದು ಸವಾಲಿನ ಕೆಲಸವಾಗಿರುತ್ತದೆ. ಆದರೆ, ನಿರ್ಗಮಿತ ಅಧ್ಯಕ್ಷ ಅಮಿತ್ ಶಾ ಅವರು ಅತ್ಯುತ್ತಮ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೊಗಳಿದರು.
4-5 ತಲೆಮಾರುಗಳ ಕಾರ್ಯಕರ್ತರು ತತ್ವ ಮತ್ತು ಆದರ್ಶಗಳನ್ನು ಅನುಸರಿಸುತ್ತಿದ್ದಾರೆ. ಈ ಆದರ್ಶಗಳನ್ನು ಆಧರಿಸಿ ಭಾರತದ ಜನರು ಬಿಜೆಪಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
First published:
January 20, 2020, 5:57 PM IST