ಕಾಬೂಲ್(ಜೂ.22): ಅಫ್ಘಾನಿಸ್ತಾನದಲ್ಲಿ (Afghanistan) ಬುಧವಾರ ಮುಂಜಾನೆ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 130 ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 250 ಜನರು ಗಾಯಗೊಂಡಿದ್ದಾರೆ. ಸಾವುನೋವುಗಳ (Death) ಸಂಖ್ಯೆ ಹೆಚ್ಚಾಗಬಹುದೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಂಪವು ಪಾಕಿಸ್ತಾನದ ಗಡಿಯ ಸಮೀಪವಿರುವ ಖೋಸ್ಟ್ ನಗರದಿಂದ ಸುಮಾರು 44 ಕಿಮೀ (27 ಮೈಲುಗಳು) 51 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ (United States) ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ (Kabul) ನಿವಾಸಿಯೊಬ್ಬರು "ಬಲವಾದ ಮತ್ತು ದೀರ್ಘವಾದ ಆಘಾತಗಳನ್ನು" ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ (EMSC) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಭೂಕಂಪ ಬಲವಾಗಿತ್ತು, ಎಂದು ವಾಯುವ್ಯ ಪಾಕಿಸ್ತಾನಿ ನಗರದ ಪೇಶಾವರ್ ನಿವಾಸಿ ಹೇಳಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಸುಮಾರು 119 ಮಿಲಿಯನ್ ಜನರು ಅಲುಗಾಡಿದ ಅನುಭವಕ್ಕೆ ಒಳಗಾಗಿದ್ದಾರೆ. ಅಫ್ಘಾನ್ ಮಾಧ್ಯಮಗಳಲ್ಲಿನ ಛಾಯಾಚಿತ್ರಗಳು ಮನೆಗಳು ಅವಶೇಷಗಳಾಗಿ ಕುಸಿದಿರುವುದನ್ನು ತೋರಿಸಿವೆ.
100 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ
ತಾಲಿಬಾನ್ ಆಡಳಿತದ ನೈಸರ್ಗಿಕ ವಿಕೋಪ ಸಚಿವಾಲಯದ ಮುಖ್ಯಸ್ಥ ಮೊಹಮ್ಮದ್ ನಸ್ಸಿಮ್ ಹಕ್ಕಾನಿ, ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ, ಅಲ್ಲಿ 100 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಹೆಚ್ಚಿನ ಹಾನಿ ಕುರಿತು ಪರಿಶೀಲನೆ
ಖೋಸ್ಟ್‌ನಲ್ಲಿ ಇನ್ನೂ 25 ಜನರು ಮತ್ತು ನಂಗರ್‌ಹಾರ್ ಪ್ರಾಂತ್ಯದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು, ಹೆಚ್ಚಿನ ಸಾವುನೋವುಗಳು ಸಂಭವಿಸಿವೆಯೇ ಎಂದು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಪಾಕಿಸ್ತಾನದಲ್ಲಿ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ.
ಸೇನೆ ಹಿಂಪಡೆದ ಅಮೆರಿಕ, ತಾಲೀಬಾನ್ ಕೈಗಳಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನ
ಎರಡು ದಶಕಗಳ ಯುದ್ಧದ ನಂತರ US ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ಅಮೆರಿಕಾಗೆ ಮರಳಿದಾಗ, ಆಗಸ್ಟ್ ತಿಂಗಳಲ್ಲಿ ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿತು. ಅಫ್ಘಾನಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು ಆಡಳಿತ ಹದೆಗೆಟ್ಟಿದೆ.
ಇದನ್ನೂ ಓದಿ: Earthquake: ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಬಳಿ ಕಂಪಿಸಿದ ಭೂಮಿ! ಅಂಡಮಾನ್‌ನಲ್ಲೂ ಕಂಪನದ ಅನುಭವ
ತಾಲಿಬಾನ್ ಸ್ವಾಧೀನಕ್ಕೆ ಪ್ರತಿಕ್ರಿಯೆಯಾಗಿ, ಅನೇಕ ಸರ್ಕಾರಗಳು ಅಫ್ಘಾನಿಸ್ತಾನದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ ಮತ್ತು ಶತಕೋಟಿ ಡಾಲರ್ ಮೌಲ್ಯದ ಅಭಿವೃದ್ಧಿ ಸಹಾಯವನ್ನು ಕಡಿತಗೊಳಿಸಿವೆ.
ನೆರವು ಕೇಳಿದ ಅಫ್ಘಾನ್ ವಕ್ತಾರರು
ಮಾನವೀಯ ನೆರವು ಮುಂದುವರೆದಿದ್ದು ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತವೆ. ಅಫ್ಘಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಯಾವುದೇ ಅಂತರರಾಷ್ಟ್ರೀಯ ಸಂಸ್ಥೆಯಿಂದ ಸಹಾಯವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಅಫ್ಘಾನಿಸ್ತಾನ ಈಗಾಗಲೇ ಬಡತನ, ನಿರುದ್ಯೋಗ ಸೇರಿ ಹಲವು ಸಾಮಾಜಿಕ ಸಮಸ್ಯೆಗಳಿಂದ ಬಳಲುತ್ತಿದ್ದು ಈಗ ಭೂಕಂಪದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಇದನ್ನೂ ಓದಿ: Blue Lava: ನೀಲಿ ಲಾವಾ ಕುರಿತು ಬಗ್ಗೆ ಕೇಳಿದ್ದೀರಾ? ನೋಡಲು ಸುಂದರ ಮತ್ತು ಅಷ್ಟೇ ಅಪಾಯಕಾರಿ ಜ್ವಾಲಾಮುಖಿ ಇದು
ದಕ್ಷಿಣ ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ಭೂಕಂಪ ನಡೆಯುತ್ತಲೇ ಇರುತ್ತವೆ. ಏಕೆಂದರೆ ಭಾರತೀಯ ಪ್ಲೇಟ್ ಎಂದು ಕರೆಯಲ್ಪಡುವ ಟೆಕ್ಟೋನಿಕ್ ಪ್ಲೇಟ್ ಉತ್ತರಕ್ಕೆ ಯುರೇಷಿಯನ್ ಪ್ಲೇಟ್‌ಗೆ ತಳ್ಳುತ್ತಿದೆ. ಇದರ ಪರಿಣಾಮವಾಗಿ ಭೂಕಂಪಗಳ ಅನುಭವವಾಗುತ್ತಿದೆ.
2015 ರಲ್ಲಿ ಭೂಕಂಪವು ದೂರದ ಅಫ್ಘಾನ್ ಈಶಾನ್ಯಕ್ಕೆ ಕಾಣಿಸಿಕೊಂಡಿದೆ. ಅಫ್ಘಾನಿಸ್ತಾನ ಮತ್ತು ಹತ್ತಿರದ ಉತ್ತರ ಪಾಕಿಸ್ತಾನದಲ್ಲಿ ನೂರಾರು ಜನರ ಸಾವಿಗೆ ಇದು ಕಾರಣವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ