Shocking News: ನಿಗಿ ನಿಗಿ ಕೆಂಡದ ಮೇಲೆ ಓಡಾಟ! ಹುಚ್ಚು ಸಾಹಸ ಮಾಡಿದ 25ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಂಡ ಹಾಯುವ ಪದ್ಧತಿಯಲ್ಲಿ ಹಲವು ಬಾರಿ ಅನೇಕರು ಬಿದ್ದು ಗಾಯ ಆದ, ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಇದೀಗ ಪಾರ್ಟಿಯೊಂದರಲ್ಲಿ ಬಿಸಿ ಬಿಸಿ ಕೆಂಡದ ಮೇಲೆ ನಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತಂತೆ. ಅಲ್ಲಿ ಹುಚ್ಚು ಸಾಹಸ ತೋರಿದ 25ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ವಿಡ್ಜರ್‌ಲ್ಯಾಂಡ್‌: ಕೆಂಡ ಹಾಯುವುದು ಅಥವಾ ಕೆೊಂಡ ಹಾಯುವುದು ಎನ್ನುವ ಆಚರಣೆ (Ritual) ಕರ್ನಾಟಕ (Karnataka) ರಾಜ್ಯದ ಅನೇಕ ಕಡೆಗಳಲ್ಲಿ ಆಚರಿಸಲ್ಪಡುತ್ತದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲೂ (State) ಈ ರೀತಿಯ ಆಚರಣೆ ನಡೆಯುತ್ತದೆ. ದೇವರ (God) ಪ್ರೀತ್ಯರ್ಥವಾಗಿ, ನಮ್ಮ ಕಷ್ಟ ಕಳೆಯಲಿ ಅಂತ ಜನರು ಈ ರೀತಿಯ ಆಚರಣೆ ಮಾಡುತ್ತಾರೆ. ಇಂತಹ ಕೊಂಡ ಹಾಯುವ ಪದ್ಧತಿಯಲ್ಲಿ ಹಲವು ಬಾರಿ ಅನೇಕರು ಬಿದ್ದು ಗಾಯ (Injury) ಆದ, ಪ್ರಾಣ ಕಳೆದುಕೊಂಡ (Death) ನಿದರ್ಶನಗಳಿವೆ. ಇದೀಗ ಸ್ವಿಡ್ಜರ್‌ಲ್ಯಾಂಡ್‌ನಲ್ಲೂ (Switzerland) ಇದಕ್ಕೆ ಹೋಲಿಕೆಯಾಗುವ ಘಟನೆ ನಡೆದಿದೆ. ಅಲ್ಲಿ ಪಾರ್ಟಿಯೊಂದರಲ್ಲಿ (Party) ಬಿಸಿ ಬಿಸಿ ಕಲ್ಲಿದ್ದಲಿನ (Coal) ಕೆಂಡದ ಮೇಲೆ ನಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತಂತೆ. ಇದೀಗ ಅಲ್ಲಿ ಹುಚ್ಚು ಸಾಹಸ ತೋರಿದ 25ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ (Hospital) ಸೇರಿದ್ದಾರೆ.

ಬಿಸಿ ಕಲ್ಲಿದ್ದಲು ತುಳಿದು 25ಕ್ಕೂ ಹೆಚ್ಚು ಮಂದಿ ಗಾಯ

ಉತ್ತರ ಸ್ವಿಟ್ಜರ್ಲೆಂಡ್‌ನಲ್ಲಿ ಬಿಸಿ ಕಲ್ಲಿದ್ದಲಿನ ಮೇಲೆ ನಡೆದಾಡಿದ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ಜ್ಯೂರಿಚ್ ಸರೋವರದ ಔ ಪರ್ಯಾಯ ದ್ವೀಪದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ರೀತಿಯ ಬಿಸಿ ಕಲ್ಲಿದ್ದಲು ತುಳಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಹುಚ್ಚು ಸಾಹಸ ತೋರಿಸೋದಕ್ಕೆ ಹೋಗಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ 13 ಮಂದಿ ಆರೋಗ್ಯ ಸ್ಥಿತಿ ಗಂಭೀರ

ಇನ್ನು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ. ಒಟ್ಟು 25ಕ್ಕೂ ಹೆಚ್ಚು ಜನರಿಗೆ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗಳ ಬಗ್ಗೆ ತುರ್ತು ಸೇವೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜ್ಯೂರಿಚ್ ಕ್ಯಾಂಟನ್ (ರಾಜ್ಯ) ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

ಪೊಲೀಸರಿಂದ ಪ್ರಾರಂಭವಾದ ತನಿಖೆ

ಈ ಘಟನೆ ಕುರಿತಂತೆ ಜ್ಯೂರಿಚ್ ಕ್ಯಾಂಟನ್ (ರಾಜ್ಯ) ಪೊಲೀಸರು ದೂರು ದಾಖಲಿಸಿಕೊಂಡು, ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಪಾರ್ಟಿ ಆಯೋಜಕರು ಹಾಗೂ ಅಲ್ಲಿ ಹಾಜರಿದ್ದ ಜನರಿಂದ ಹೇಳಿಕೆ ಪಡೆದಿದ್ದಾರೆ. ಜೊತೆಗೆ ತನಿಖಾಧಿಕಾರಿಗಳು ಘಟನಾ ಸ್ಥಳದಿಂದ ಸಾಕ್ಷ್ಯವನ್ನು ಪಡೆದುಕೊಂಡರು ಮತ್ತು ಘಟನೆಯ ಸಂದರ್ಭಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಗಾಯಾಳುಗಳ ಹೇಳಿಕೆಯನ್ನೂ ಸಹ ಪೊಲೀಸ್ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಜಾಹೀರಾತು ಕಂಪನಿಯಿಂದ ಸ್ಪರ್ಧೆ ಆಯೋಜನೆ?

ಜರ್ಮನ್ ಭಾಷೆಯ ಬ್ಲಿಕ್ ಎಂಬ ಸ್ವಿಸ್  ಸುದ್ದಿ ವಾಹಿನಿ ಈ ಬಗ್ಗೆ ವರದಿ ಪ್ರಸಾರ ಮಾಡಿದೆ. ಅದರ ಪ್ರಕಾರ ಈ ಈವೆಂಟ್ ಅನ್ನು ಜಾಹೀರಾತು ಮಾರ್ಕೆಟಿಂಗ್ ಕಂಪನಿ ಗೋಲ್ಡ್‌ಬಾಚ್ ಆಯೋಜಿಸಿದೆ ಎಂದು ಹೇಳಿಕೊಂಡಿದೆ. "ಈವೆಂಟ್‌ನಲ್ಲಿ ಒಟ್ಟು 150 ಜನರು ಉಪಸ್ಥಿತರಿದ್ದರು," ಎಂದು ಗೋಲ್ಡ್‌ಬಾಚ್‌ನ ಸಂವಹನ ಮುಖ್ಯಸ್ಥ ಐರಿಸ್ ಬ್ಲಾಟ್ಲರ್ ಹೇಳಿದ್ದಾರೆ.

ಇದನ್ನೂ ಓದಿ: Gold: ಬ್ರೆಡ್‌ನ ಬದಲು ಚಿನ್ನ ಕೊಟ್ಟ ಮಹಿಳೆ, ಗಟ್ಟಿಯಾಗಿದೆ ತಿನ್ನೋದಕ್ಕೆ ಆಗಲ್ಲ ಅಂತ ಎಸೆದು ಹೋದ ಭಿಕ್ಷುಕಿ!

ಅಷ್ಟಕ್ಕೂ ಬಿಸಿ ಕಲ್ಲಿದ್ದಲು ಮೇಲೆ ನಡೆಯುವ ಸ್ಪರ್ಧೆ ನಡೆದಿದ್ದೇಕೆ?

ಈವೆಂಟ್‌ನಲ್ಲಿ ಜನರು ಬಿಸಿ ಕಲ್ಲಿದ್ದಲಿನ ಮೇಲೆ ಏಕೆ ನಡೆದರು ಎಂಬುದರ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗೆ ಪಾರ್ಟಿ ಆಯೋಜಿಸಿದವರು ಈ ರೀತಿಯ ಸ್ಪರ್ಧೆ ಆಯೋಜಿಸಿದ್ದು ಏಕೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ಬಳಿಕವಷ್ಟೇ ಘಟನೆಗೆ ನೈಜ ಕಾರಣ ಏನು ಎನ್ನುವುದು ತಿಳಿದು ಬರಲಿದೆ.
Published by:Annappa Achari
First published: