ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 2.6 ಲಕ್ಷ ಮಕ್ಕಳಿಂದ ಪ್ರಬಂಧ ರಚನೆ

ಕಳೆದ ಬಾರಿ ನಡೆದ ಚಾಯ್​ ಪೇ ಚರ್ಚಾ ಕಾರ್ಯಕ್ರಮವನ್ನು 8.5 ಕೋಟಿ ಜನರು ವೀಕ್ಷಿಸಿದ್ದರೆನ್ನಲಾಗಿದೆ. ಟ್ವಿಟ್ಟರ್​ನಲ್ಲೂ ಆ ಸಂದರ್ಭದಲ್ಲಿ ನಂಬರ್ ಒನ್ ಟ್ರೆಂಡಿಂಗ್​ನಲ್ಲಿತ್ತು. ಈ ಬಾರಿ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

news18
Updated:January 19, 2020, 6:10 PM IST
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 2.6 ಲಕ್ಷ ಮಕ್ಕಳಿಂದ ಪ್ರಬಂಧ ರಚನೆ
ಪರೀಕ್ಷಾ ಪೆ ಚರ್ಚಾ
  • News18
  • Last Updated: January 19, 2020, 6:10 PM IST
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಒಂದು ದಿನ ಬಾಕಿ ಇದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ತಲೆದೋರುವ ಒತ್ತಡ, ಆತಂಕಗಳ ನಿವಾರಣೆಗೆ ಮೋದಿ ಅವರು ಕೆಲ ಸುಲಭ ಸೂತ್ರಗಳನ್ನು ಮತ್ತು ಸಲಹೆಗಳನ್ನು ನೀಡಲಿದ್ಧಾರೆ. ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಬೆಳಗ್ಗೆ 11ಗಂಟೆಗೆ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ 2 ಸಾವಿರದಷ್ಟು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಈಗಾಗಲೇ ಹಿಂದೆ ಎರಡು ಬಾರಿ ನಡೆದು ಯಶಸ್ಸು ಕಂಡಿದೆ. ಈ ಬಾರಿ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಮಾನವ ಸಂಪನ್ಮೂಲ ಇಲಾಖೆಯು ಡಿಸೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿವಿಧ ಆಯ್ದೆ ವಿಚಾರಗಳ ಬಗ್ಗೆ ಕಿರು ಪ್ರಬಂಧ ರಚಿಸುವಂತೆ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನ ಒದಗಿಸಿತು. 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಅವರಲ್ಲಿ 2.6 ಲಕ್ಷ ಮಕ್ಕಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ಧಾರೆ. ಕಳೆದ ಬಾರಿ, ಅಂದರೆ 2019ರಲ್ಲಿ ಸುಮಾರು 1 ಲಕ್ಷ ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾದಲ್ಲಿ ಇದೇ ಮೊದಲ ಬಾರಿಗೆ 50 ದಿವ್ಯಾಂಗ ವಿದ್ಯಾರ್ಥಿಗಳು ಭಾಗಿ

ಹಾಗೆಯೇ, ಪೈಂಟಿಂಗ್ ಮತ್ತು ಪೋಸ್ಟರ್ ರಚಿಸುವ ಸ್ಪರ್ಧೆಯೂ ಇತ್ತು. ಇದರಲ್ಲಿ ಬಂದಿರುವ 750 ಪೋಸ್ಟರ್​ಗಳಲ್ಲಿ ಐವತ್ತನ್ನು ಆರಿಸಲಾಗಿದೆ. ಇನ್ನು ಚರ್ಚಾ ಸ್ಪರ್ಧೆಗೆ ವಿವಿಧ ಕೇಂದ್ರೀಯ ವಿದ್ಯಾಲಯಗಳಿಂದ ಇಬ್ಬರು ವಿದ್ಯಾರ್ಥಿನಿಯರು ಸೇರಿ ನಾಲ್ವರು ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ ನಡೆದ ಚಾಯ್​ ಪೇ ಚರ್ಚಾ ಕಾರ್ಯಕ್ರಮವನ್ನು 8.5 ಕೋಟಿ ಜನರು ವೀಕ್ಷಿಸಿದ್ದರೆನ್ನಲಾಗಿದೆ. ಟ್ವಿಟ್ಟರ್​ನಲ್ಲೂ ಆ ಸಂದರ್ಭದಲ್ಲಿ ನಂಬರ್ ಒನ್ ಟ್ರೆಂಡಿಂಗ್​ನಲ್ಲಿತ್ತು. ಈ ಬಾರಿ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ