ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಮನ್ ಕಿ ಬಾತ್ (Mann Ki Baat) ಎಂಬ ರೇಡಿಯೋ ಕಾರ್ಯಕ್ರಮದ (Radio program) ಬಗ್ಗೆ ಎಲ್ಲರಿಗೂ ಗೊತ್ತು. ತಿಂಗಳ ಕೊನೆ ಭಾನುವಾರ (Sunday) ಪ್ರಸಾರವಾಗುವ ಈ ಜನಪ್ರಿಯ ರೆಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದುವರೆಗೂ ಬರೋಬ್ಬರಿ 99 ಸಂಚಿಕೆಗಳನ್ನು ಪೂರೈಸಿರುವ ಮನ್ ಕಿ ಬಾತ್, ಇದೀಗ 100ನೇ ಸಂಚಿಕೆಗೆ ಕಾಲಿಟ್ಟಿದೆ. ಇದೇ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ 100ನೇ ಸಂಚಿಕೆ ಪ್ರಸಾರವಾಗಲಿದೆ. ಇದೀಗ ಮನ್ ಕಿ ಬಾತ್ ಕುರಿತಂತೆ ಸಾಕಷ್ಟು ವಿಶೇಷ ಹಾಗೂ ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದೆ. ಪ್ರತಿಷ್ಠಿತ ಐಐಎಂ ರೋಹ್ಟಕ್ (IIM Rohtak) ಈ ಬಗ್ಗೆ ಸರ್ವೆ ನಡೆಸಿದ್ದು, ಇದುವರೆಗೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೇಶದ 100 ಕೋಟಿಗೂ ಹೆಚ್ಚು ಮಂದಿ ಕೇಳಿದ್ದಾರಂತೆ!
100 ಕೋಟಿ ಜನರನ್ನು ತಲುಪಿದ ಮನ್ ಕಿ ಬಾತ್
100 ನೇ ಸಂಚಿಕೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮವು ಬರೋಬ್ಬರಿ ದೇಶದ 100 ಕೋಟಿ ಕೇಳುಗರನ್ನು ತಲುಪಿದೆ ಎಂದು IIM ಸಮೀಕ್ಷಾ ವರದಿ ಹೇಳಿದೆ.
As per @IIM_Rohtak Survey on #MannKiBaat :
▪️ Nearly 96% people are aware of Mann Ki Baat
▪️ More than 100 crore people have listened to it at least once
▪️ 23 crore people have listened/viewed the programme regularly
▪️ 41 crore people have scope of converting from… pic.twitter.com/mMuSGdglIW
— All India Radio News (@airnewsalerts) April 24, 2023
ಸರ್ವೆ ವರದಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವ, ಕೇಳುಗರೊಂದಿಗೆ ಭಾವನಾತ್ಮಕ ಸಂಪರ್ಕ, ಕೇಳುಗರಿಂದ ಜನಪ್ರಿಯತೆಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಮನ್ ಕಿ ಬಾತ್ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ, 60% ಜನರು ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ, 73% ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾಗಿ ವರದಿ ಹೇಳಿದೆ.
ಇದನ್ನೂ ಓದಿ: Letter to Prime Minister: ಪ್ರಧಾನಿಗೆ ಪತ್ರ ಬರೆಯುವುದು ಹೇಗೆ? ಯಾರು, ಯಾವೆಲ್ಲ ವಿಚಾರಕ್ಕೆ ಪಿಎಂ ಸಂಪರ್ಕಿಸಬಹುದು?
ಶೇ. 96ರಷ್ಟು ಜನ ಒಮ್ಮೆಯಾದರೂ ಮನ್ ಕಿ ಬಾತ್ ಕೇಳಿದ್ದಾರೆ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಬಗ್ಗೆ ದೇಶದ ಸುಮಾರು ಶೇ. 96ರಷ್ಟು ಜನರಿಗೆ ತಿಳಿದಿದೆ. ಈ ಕಾರ್ಯಕ್ರಮ 100 ಕೋಟಿ ಜನರನ್ನು ತಲುಪಿದೆ, ಅವರು ಒಮ್ಮೆಯಾದರೂ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಈ ಅಂಕಿಅಂಶಗಳನ್ನು ಪ್ರಸಾರ ಭಾರತಿ ನಿಯೋಜಿಸಿದ ಮತ್ತು ರೋಹ್ಟಕ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಡೆಸಿದ ಸಮಗ್ರ ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ.
23 ಕೋಟಿ ಮಂದಿ ನಿರಂತರ ಕೇಳುಗರು!
ವರದಿಯ ಪ್ರಕಾರ 23 ಕೋಟಿ ಜನರು ನಿಯಮಿತವಾಗಿ ಕಾರ್ಯಕ್ರಮಕ್ಕೆ ಟ್ಯೂನ್ ಮಾಡುತ್ತಾರೆ. ಇನ್ನೂ 41 ಕೋಟಿ ಜನರು ಹೊಸದಾಗಿ ಕಾರ್ಯಕ್ರಮ ಕೇಳುತ್ತಾರೆ.
ಜನಪ್ರಿಯತೆಗೆ ಕಾರಣಗಳು ಏನು?
ಪ್ರಧಾನಿಯ ನರೇಂದ್ರ ಮೋದಿಯವರ ಮೇಲೆ ಜನರು ಇಟ್ಟಿರುವ ನಂಬಿಕೆಯ ಪರಿಣಾಮವೇ ಮನ್ ಕಿ ಬಾತ್ ಅಪಾರ ಜನಪ್ರಿಯತೆ ಗಳಿಸಿದೆ. ಖುದ್ದು ಪ್ರಧಾನಿಯೇ ನಾಗರಿಕರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವುದು ಮತ್ತು ಸಲಹೆ, ಸೂಚನೆ ಕೇಳುವುದರಿಂದ ಮತ್ತಷ್ಟು ಜನರನ್ನು ಆಕರ್ಷಿಸುತ್ತಿದೆ.
ಶೇಕಡಾವಾರು ವಿವರ
ಇದುವರೆಗಿನ 99 ಆವೃತ್ತಿಗಳಲ್ಲಿ ಮನ್ ಕಿ ಬಾತ್ ಜನಸಂಖ್ಯೆಯ ಮೇಲೆ ಬೀರಿದ ಪ್ರಭಾವವನ್ನು ಅಳೆಯಲು ಅಧ್ಯಯನವು ಪ್ರಯತ್ನಿಸಿದೆ. ಬಹುಪಾಲು ಕೇಳುಗರು ಸರ್ಕಾರಗಳು ಕೆಲಸ ಮಾಡುವ ಬಗ್ಗೆ ಅರಿವು ಹೊಂದಿದ್ದಾರೆ ಮತ್ತು 73% ಜನರು ಆಶಾವಾದಿಗಳಾಗಿದ್ದು, ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಭಾವಿಸುತ್ತಾರೆ. ಇನ್ನು 58% ಕೇಳುಗರು ತಮ್ಮ ಜೀವನ ಪರಿಸ್ಥಿತಿಗಳು ಸುಧಾರಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 59% ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: Modi Letter: ಬೆಂಗಳೂರಿನ ಬಾಲಕನಿಗೆ ಪ್ರಧಾನಿಯವರಿಂದ ಬಂತು ಪತ್ರ! ವಿದ್ಯಾರ್ಥಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಮೋದಿ?
ಭಾಷಣ ಎಲ್ಲೆಲ್ಲಿ ಕೇಳಿದ್ದಾರೆ?
ಮನ್ ಕಿ ಬಾತ್ ಅನ್ನು 44.7% ಜನರು ಟಿವಿಯಲ್ಲಿ, 37.6% ಜನರು ಮೊಬೈಲ್‌ನಲ್ಲಿ, 19 ರಿಂದ 34 ವರ್ಷದೊಳಗಿನ 62% ರಷ್ಟು ಜನರು ಕಾರ್ಯಕ್ರಮವನ್ನು ವೀಕ್ಷಿಸುವುದು ಅದನ್ನು ಕೇಳುವುದಕ್ಕಿಂತ ಉತ್ತಮ ಎಂದಿದ್ದಾರೆ. ಇನ್ನು ಕೇಳುಗರಲ್ಲಿ ಅತಿ ಹೆಚ್ಚು ಮಂದಿ ಅಂದರೆ ಶೇಕಡಾ 65ರಷ್ಟು ಜನ ಹಿಂದಿಯಲ್ಲಿ, ಶೇಕಡಾ 18ರಷ್ಟು ಜನ ಇಂಗ್ಲಿಷ್‌ನಲ್ಲಿ ಕೇಳಿದ್ದಾರಂತೆ. 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳನ್ನು ಹೊರತುಪಡಿಸಿ, ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ