ಬಿಹಾರದಲ್ಲಿ ಉಲ್ಬಣಿಸಿದ ಮೆದುಳು ಜ್ವರ; ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ

ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳು ಜ್ವರ ಬರುತ್ತದೆ. ಅತಿಯಾದ ಜ್ವರ, ದೇಹ ಸೆಳೆತ ಮತ್ತು ತಲೆನೋವು ಈ ರೋಗದ ಲಕ್ಷಣಗಳಾಗಿವೆ.

Latha CG | news18
Updated:June 17, 2019, 12:33 PM IST
ಬಿಹಾರದಲ್ಲಿ ಉಲ್ಬಣಿಸಿದ ಮೆದುಳು ಜ್ವರ; ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ
ಬಿಹಾರ
  • News18
  • Last Updated: June 17, 2019, 12:33 PM IST
  • Share this:
ಪಾಟ್ನಾ,(ಜೂ.17): ಬಿಹಾರದಲ್ಲಿ ಮೆದುಳು ಜ್ವರ ಉಲ್ಬಣಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮುಜಾಫರ್​ ನಗರದ ಶ್ರೀ ಕೃಷ್ಣ ಮೆಡಿಕಲ್​ ಕಾಲೇಜೊಂದರಲ್ಲಿಯೇ 83 ಮಕ್ಕಳು ಸಾವನ್ನಪ್ಪಿದ್ದು, ಇಂದು ಸಾವಿನ ಸಂಖ್ಯೆ 100 ಕ್ಕೆ ಏರಿಕೆ ಆಗಿದೆ.

ಸುಮಾರು 290 ಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಮೆಡಿಕಲ್​ ಕಾಲೇಜಿನ ತೀವ್ರ ನಿಗಾ ಘಟಕ(ಐಸಿಯು)ಕ್ಕೆ ದಾಖಲಾಗಿದ್ದರು ಎನ್ನಲಾಗಿದೆ. ಈ ಬಾರಿ ಆಗಮಿಸುವ ಮುಂಗಾರು ಮಳೆಯಿಂದಾಗಿ ಈ ಮೆದುಳು ಜ್ವರ ಕಡಿಮೆಯಾಗಲಿದೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್​ ಡಾ.ಎಸ್​.ಕೆ.ಸಹಿ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ನಿನ್ನೆ ಮುಜಾಫರ್​ನಗರ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಿಸಿಲ ತಾಪಕ್ಕೆ ತತ್ತರಿಸಿದ ಬಿಹಾರ; ಒಂದೇ ದಿನಕ್ಕೆ ಸತ್ತವರ ಸಂಖ್ಯೆ 40; ಮೆದುಳು ಜ್ವರಕ್ಕೆ ಬಲಿಯಾದವರು 73 ಮಂದಿ

ಬಿಹಾರ ಸಿಎಂ ನಿತೀಶ್​ ಕುಮಾರ್​ ಮೆದುಳು ಜ್ವರದಿಂದ ಸತ್ತವರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬ ಅರಿವು ಜನರಲ್ಲಿ ಇಲ್ಲ, ಜಾಗೃತಿಯ ಕೊರತೆಯಿಂದಾಗಿ ರೋಗ ಮತ್ತಷ್ಟು ಉಲ್ಭಣವಾಗುತ್ತಿದೆ ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿದ್ದರು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳು ಜ್ವರ ಬರುತ್ತದೆ. ಅತಿಯಾದ ಜ್ವರ, ದೇಹ ಸೆಳೆತ ಮತ್ತು ತಲೆನೋವು ಈ ರೋಗದ ಲಕ್ಷಣಗಳಾಗಿವೆ. ಇದು ವೈರಲ್​ ಫೀವರ್​ ಆಗಿದೆ.  ಬಿಹಾರದಲ್ಲಿ ಒಂದೆಡೆ ಮೆದುಳು ಜ್ವರದಿಂದ ಸತ್ತವರ ಸಂಖ್ಯೆ 100 ಕ್ಕೆ ಏರಿದರೆ, ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಶನಿವಾರ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಗಯಾ, ಅರುಂಗಾಬಾದ್​, ನಾವಡಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಿಂದಾಗಿ ಜನರು ಸಾವನ್ನಪ್ಪಿದ್ದರು. ಅಲ್ಲಿನ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್​ಗಿಂತ ಅಧಿಕವಾಗಿತ್ತು.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ