ಆರ್ಥಿಕತೆಗೆ ಮತ್ತೊಂದು ಕೆಟ್ಟ ಸುದ್ದಿ; ಪ್ರಗತಿಯಲ್ಲಿ ಭಾರೀ ಕುಸಿತ ದಾಖಲಿಸಿದ ಎಂಟು ಕೋಟಿ ಕೈಗಾರಿಕೆಗಳು

ಈ ಎಂಟು ಕೋಟಿ ಕೈಗಾರಿಕೆಗಳು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.7ನಿಂದ ಶೇ. 2.4ನಷ್ಟು ಪ್ರಗತಿ ಸಾಧಿಸಿದ್ದವು.

HR Ramesh | news18-kannada
Updated:September 30, 2019, 7:30 PM IST
ಆರ್ಥಿಕತೆಗೆ ಮತ್ತೊಂದು ಕೆಟ್ಟ ಸುದ್ದಿ; ಪ್ರಗತಿಯಲ್ಲಿ ಭಾರೀ ಕುಸಿತ ದಾಖಲಿಸಿದ ಎಂಟು ಕೋಟಿ ಕೈಗಾರಿಕೆಗಳು
ನಿರ್ಮಲಾ ಸೀತಾರಾಮನ್
  • Share this:
ನವದೆಹಲಿ: ಎಂಟು ಕೋಟಿ ಕೈಗಾರಿಕೆಗಳು ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್​ ಮತ್ತು ವಿದ್ಯುತ್​  ಉತ್ಪಾದನೆಯಲ್ಲಿ ಆಗಸ್ಟ್​ ತಿಂಗಳಿನಲ್ಲಿ ಶೇ.0.5ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದೆ.

ಇದೇ ಎಂಟು ಕೈಗಾರಿಕೆಗಳು ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನ, ಗೊಬ್ಬರ, ಸ್ಟೀಲ್​, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಕಳೆದ ವರ್ಷ ಇದೇ ಆಗಸ್ಟ್​ನಲ್ಲಿ ಶೇ.4.7ರಷ್ಟು ವಿಸ್ತರಣೆಯಾಗಿತ್ತು.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್​ ಮತ್ತು ವಿದ್ಯುತ್ ಉತ್ಪಾದನೆ ಪ್ರಗತಿಯಲ್ಲಿ ತೀರಾ ಕುಸಿತ ಅನುಭವಿಸಿಕೊಂಡು ಬಂದಿದೆ. ಆಗಸ್ಟ್​ನಲ್ಲಿ ಕ್ರಮವಾಗಿ ಶೇ.8.6, ಶೇ.3.9, ಶೇ.4.9 ಮತ್ತು ಶೇ.2.9 ಕುಸಿತ ಕಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಬಿಡುಗಡೆ ಮಾಡಿದ ಅಂಕಿ-ಅಂಶಗಳು ಹೇಳಿದೆ. ಆದಾಗ್ಯೂ, ಗೊಬ್ಬರ ಮತ್ತು ಸ್ಟೀಲ್​ ಉತ್ಪಾದನೆ ಶೇ.2.9ರಷ್ಟು ಪ್ರಗತಿ ಸಾಧಿಸಿದೆ.

ಈ ಎಂಟು ಕೋಟಿ ಕೈಗಾರಿಕೆಗಳು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.7ನಿಂದ ಶೇ. 2.4ನಷ್ಟು ಪ್ರಗತಿ ಸಾಧಿಸಿದ್ದವು.

First published: September 30, 2019, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading