• Home
  • »
  • News
  • »
  • national-international
  • »
  • Morbi Bridge Collapse: ಮರ್ಬಿ ದುರಂತದಲ್ಲಿ ಸಂಸದ ಮೋಹನ್ ಕುಂದರಿಯಾ ಕುಟುಂಬದ 12 ಮಂದಿ ಸಾವು!

Morbi Bridge Collapse: ಮರ್ಬಿ ದುರಂತದಲ್ಲಿ ಸಂಸದ ಮೋಹನ್ ಕುಂದರಿಯಾ ಕುಟುಂಬದ 12 ಮಂದಿ ಸಾವು!

ಮರ್ಬಿ ದುರಂತದ ಬಳಿಕದ ಚಿತ್ರಣ

ಮರ್ಬಿ ದುರಂತದ ಬಳಿಕದ ಚಿತ್ರಣ

ಮೊರ್ಬಿಯ ಮಚ್ಚು ನದಿಯಲ್ಲಿ ತೂಗು ಸೇತುವೆ ಕುಸಿದು 141 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯೂ ಎದುರಾಗಿದೆ. ಈ ಅಪಘಾತದಲ್ಲಿ ಸಂಸದ ಮೋಹನ್ ಕುಂದರಿಯಾ ಅವರ ಸಹೋದರಿಯ ಕುಟುಂಬದ 12 ಸದಸ್ಯರು ಸಾವನ್ನಪ್ಪಿದ್ದಾರೆ.

  • News18 Kannada
  • Last Updated :
  • Gujarat, India
  • Share this:

ಮೊರ್ಬಿ(ಅ.31): ಮೊರ್ಬಿಯ ಮಚ್ಚು ನದಿಯಲ್ಲಿ (Morbi Bridge Collapse) ತೂಗು ಸೇತುವೆ ಕುಸಿದು 141 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಅಪಘಾತದಲ್ಲಿ ಬಿಜೆಪಿ ಸಂಸದ ಮೋಹನ್ ಕುಂದರಿಯಾ (Mohan Kundariya) ಅವರ ಸಹೋದರಿಯ ಕುಟುಂಬದ 12 ಸದಸ್ಯರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ರಾಜ್‌ಕೋಟ್ ಬಿಜೆಪಿ ಸಂಸದ (BJP MP) ಮೋಹನ್ ಕುಂದರಿಯಾ ಅವರ ಸಹೋದರಿಯ ಪತಿಯ ಸಹೋದರನ ನಾಲ್ವರು ಪುತ್ರಿಯರು, 3 ಅಳಿಯಂದಿರು ಮತ್ತು 5 ಮಕ್ಕಳು ಸಾವನ್ನಪ್ಪಿದ್ದಾರೆ.


ಬಿಜೆಪಿ ಸಂಸದ ಮೋಹನ್ ಕುಂದರಿಯಾ ಮೋರ್ಬಿಯಲ್ಲಿ ಸೇತುವೆ ಕುಸಿತದ ಅಪಘಾತದ ನಂತರ ನಿರಂತರವಾಗಿ ಸ್ಥಳದಲ್ಲಿಯೇ ಇದ್ದರು. ಅವರು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆಯಿಂದ ಕುಪಿತಗೊಂಡ ಸಂಸದ ಕುಂದರಿಯಾ, ಈ ಘಟನೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದಕ್ಕೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:Viral Video: ಅಪ್ಪ ಕಳಿಸಿದ ಪೋಸ್ಟ್​ ಕಾರ್ಡ್​ ಬೆಲೆ ಸರಿಗಟ್ಟೋ ಯಾವ ವಸ್ತುವೂ ಇಲ್ಲ! ಭಾವುಕ ವಿಡಿಯೋ ನೋಡಿ


ಅಲ್ಲದೇ ಈ ಕುರಿತು ತನಿಖೆ ನಡೆಸಿದ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಈ ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ ಎಂದು ಮೋಹನ್ ಕುಂದರಿಯಾ ಹೇಳಿದ್ದಾರೆ. ರಾತ್ರಿಯಿಡೀ ನಿರಂತರವಾಗಿ ಫೋನ್ ಮೂಲಕ ಎಲ್ಲದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ.


ಇದಲ್ಲದೇ ಸೇತುವೆ ಕುಸಿದು ಬಿದ್ದ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಸೇನಾ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗೃಹ ಖಾತೆ ರಾಜ್ಯ ಸಚಿವ ಹರ್ಷ ಶಾಂಘ್ವಿ ಕೂಡ ಉಪಸ್ಥಿತರಿದ್ದರು. ಘಟನಾ ಸ್ಥಳವನ್ನು ಪರಿಶೀಲಿಸಿದ ಅವರು ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರು. ಮೊರ್ಬಿ ಸೇತುವೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದೆ.


ಇದನ್ನೂ ಓದಿ: Mango Rate: ಒಂದು ಕೆಜಿ ಮಾವಿನ ಹಣ್ಣಿಗೆ 2.70 ಲಕ್ಷ! ಎಲ್ಲಿ ಸಿಗುತ್ತೆ ಈ ಮಾವು?


ಘಟನೆಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳ ಕುಟುಂಬಗಳಿಗೆ ಸರಕಾರದಿಂದ ಶೀಘ್ರ ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿದ್ದಾರೆ. ಈ ಸೇತುವೆಯನ್ನು ದುರಸ್ತಿ ಮಾಡಿದ ನಂತರ ಅದನ್ನು ತೆರೆಯಲಾಗಿತ್ತು. ಇದಾದ ಬಳಿಕವೇ ಸೇತುವೆ ಕುಸಿದಿದೆ ಎಂದು ಹೇಳಿದರು. ಇದರ ಹಿಂದಿನ ಕಾರಣವೇನು? ಇದರ ಬಗ್ಗೆ ತನಿಖೆಯಾಗಬೇಕು. ಅಲ್ಲದೆ, ಸೇತುವೆ ಮೇಲೆ ಇಷ್ಟೊಂದು ಜನ ಒಟ್ಟಿಗೆ ಇರುವ ಬಗ್ಗೆ ತನಿಖೆಯಾಗಬೇಕು.

Published by:Precilla Olivia Dias
First published: