HOME » NEWS » National-international » MORADABAD WARD BOY NOT DIED BY CORONA VACCINE SAYS HEALTH MINISTER SESR

Covid Vaccine : ಮೊರಾದಾಬಾದ್​ ಆರೋಗ್ಯ ಕಾರ್ಯಕರ್ತನ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ; ಆರೋಗ್ಯ ಸಚಿವಾಲಯ

ಮಹಿಪಾಲ್​ ಸಾವಿಗೆ ಹೃದಯದ ಸಮಸ್ಯೆ ಕಾರಣವಾಗಿದೆ. ಮಹಿಪಾಲ್​ ಹೃದಯ ಹಿಗ್ಗಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿಯಲ್ಲಿ ತಿಳಿದು ಬಂದಿದೆ

news18-kannada
Updated:January 18, 2021, 4:03 PM IST
Covid Vaccine : ಮೊರಾದಾಬಾದ್​ ಆರೋಗ್ಯ ಕಾರ್ಯಕರ್ತನ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ; ಆರೋಗ್ಯ ಸಚಿವಾಲಯ
ಕೊರೋನಾ ಲಸಿಕೆ.
  • Share this:
ಲಕ್ನೋ (ಜ. 18): ಕೊರೋನಾ​ ಲಸಿಕೆ ಪಡೆದ ಬಳಿಕ ಮೊರಾದಾಬಾದ್​ನ 46 ವರ್ಷದ ಆರೋಗ್ಯ ಕಾರ್ಯಕರ್ತ ಸಾವನ್ನಪ್ಪಿದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹಿನ್ನಲೆ ಕೊವಾಕ್ಸಿನ್​ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಕೂಡ ತೀವ್ರಮಟ್ಟದ ಚರ್ಚೆ ಶುರುವಾಗಿತ್ತು. ಈ ಪ್ರಕರಣವನ್ನು ಕೇಂದ್ರ ಆರೋಗ್ಯ ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ ಆರೋಗ್ಯ ಕಾರ್ಯಕರ್ತನ ಸಾವಿನ ಕುರಿತು ಸ್ಪಷನೆ ತಿಳಿಯಲು ಉನ್ನತ ಮಟ್ಟದ ಸಮಿತಿ ಕೂಡ ರಚಿಸಿದೆ. ಈ ವರದಿ ಪ್ರಕಾರ ವಾರ್ಡ್​ ಬಾಯ್​ ಸಾವಿಗೆ ಹೃದಯಾಘಾತ ಕಾರಣವಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನಲೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಮೊರಾದಾಬಾದ್​ ಯುವಕ ಕೊವಾಕ್ಸಿನ್​ ಲಸಿಕೆ ಪಡೆದು ಸಾವನ್ನಪ್ಪಿದ್ದಾನೆ ಎಂಬುದು ಸತ್ಯಕ್ಕೆ ದೂರಾವದ ಅಂಶ ಎಂದು ತಿಳಿಸಿದೆ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿನ ಸರ್ಕಾರಿ ಆಸ್ಪತ್ರೆ ದೀನ್​ ದಯಾಳ್​ ಉಪಾಧ್ಯಾಯ್​ ಆಸ್ಪತ್ರೆಯ ಮಹಿಪಾಲ್​ ಭಾನುವಾರ ಸಾವನ್ನಪ್ಪಿದ್ದರು. ಈ ಹಿನ್ನಲೆ ಈ ಸಾವಿನ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರ್​ ರಾಕೇಶ್​ ಸಿಂಗ್​ ಸೂಚನೆ ನೀಡಿದ್ದಾರೆ.

ಮಹಿಪಾಲ್​ ಸಾವಿಗೆ ಹೃದಯದ ಸಮಸ್ಯೆ ಕಾರಣವಾಗಿದೆ. ಮಹಿಪಾಲ್​ ಹೃದಯ ಹಿಗ್ಗಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿಯಲ್ಲಿ ತಿಳಿದು ಬಂದಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಮಿಲಿಂದ್​ ಚಂದ್ರ ಗಾರ್ಗ್​ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮಹಿಪಾಲ್ ಗೆ​ ಹೃದಯಾಘಾತವಾಗಿದೆ. ಮೂರು ಜನ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅವರಿಗೆ ಹೃದಯ ಶ್ವಾಸಕೋಶದ ಸಮಸ್ಯೆ ಇರುವುದು ಬಯಲಾಗಿದೆ.  ಕೊರೋನಾ ವೈರಸ್​ ಲಸಿಕೆಯ ಯಾವುದೇ ಅಡ್ಡ ಪರಿಣಾಮ ಬೀರಿರುವುದು ತಿಳಿದು ಬಂದಿಲ್ಲ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗಗೊಂಡಿದೆ.

ಇದನ್ನು ಓದಿ: ಅಭಿಮಾನಿಗಳಿಗೆ ಕಿಚ್ಚನ ಸಂದೇಶ: ಫ್ಯಾಂಟಮ್​ ಚಿತ್ರದ ಬಗ್ಗೆ ದೊಡ್ಡ ಅಪ್ಡೇಟ್​ ಕೊಡಲಿದ್ದಾರೆ ಸುದೀಪ್​..!

ಉತ್ತರ ಪ್ರದೇಶ ಮುಖ್ಯಮಂತ್ರಿ ಕೂಡ ಲಸಿಕೆಯ ಅಡ್ಡಪರಿಣಾಮ ಬೀರುತ್ತಿವೆ ಎಂಬ ವಾದವನ್ನು ಅಲ್ಲಗಳೆದಿದ್ದಾರೆ. ಆದರೆ, ಲಸಿಕೆ ಚುಚ್ಚಿಸಿಕೊಂಡ ಬಳಿಕ ಅನೇಕರಲ್ಲಿ ಜ್ವರ ಕಾಣಿಸಿಕೊಂಡಿದೆ. ಲಸಿಕೆ ಚುಚ್ಚಿಸಿಕೊಂಡ ಮಹಿಪಾಲ್​​​ ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದಂತೆ ತಮ್ಮ ಮಗನನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಮಹಿಪಾಲ್​ ಮಗ ವಿಶಾಲ್​, ಲಸಿಕೆ ಪಡೆಯುವ ಮೊದಲು ಅವರು ಕೆಮ್ಮು ಹೊಂದಿದ್ದರು. ಲಸಿಕೆ ಪಡೆದ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಉಸಿರಾಟ ಸಮಸ್ಯೆ ಅನುಭವಿಸಿದರು. ಭಾನುವಾರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆವು. ಅಂದು ರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಲಸಿಕೆ ಪಡೆದವರು ಕೆಲವು ಸಮಸ್ಯೆಗೆ ಗುರಿಯಾಗಿದ್ದಾರೆ. ಆದರೆ, ಮಹಿಪಾಲ್​ನಂತೆ ಗಂಭೀರ ಸಮಸ್ಯೆ ಎದುರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಆದರೆ, ಮಹಿಪಾಲ್​ ಕುಟುಂಬ ಮಾತ್ರ ಆತನ ಸಾವಿಗೆ ಲಸಿಕೆಯೇ ಕಾರಣ ಎಂದಿದೆ. ಮಹಿಪಾಲ್​ಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ. ಜ್ವರ ಮತ್ತು ಕೆಮ್ಮು ಹೊರತು ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ನನ್ನ ತಂದೆಗೆ ಕೊರೋನಾ ಡ್ಯೂಟಿ ಮಾಡಿದರೂ ಅವರು ಸೋಂಕಿಗೆ ತುತ್ತಾಗಿರಲಿಲ್ಲ ಎಂದು ಮಗ ತಿಳಿಸಿದ್ದಾನೆ.
ಕೊರೋನಾ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಮಹಿಪಾಲ್​ ಪ್ರಕರಣದ ಕುರಿತು ಉನ್ನತ ಮಟ್ಟದ ವೈದ್ಯಕೀಯ ತನಿಖೆ ನಡೆಸಲಾಗುವುದು ಎಮದು ಮೊರಾದಾಬಾದ್​ ಡಿಸ್ಟ್ರಿಕ್ಟ್​​ ಮ್ಯಾಜಿಸ್ಟ್ರೇಟ್​ ತಿಳಿಸಿದ್ದಾರೆ.
Published by: Seema R
First published: January 18, 2021, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories