ಈದ್ ಸಂಭ್ರಮದಂದು ಹುಡುಗಿಯನ್ನು ಅಪ್ಪಿಕೊಳ್ಳಲು ಮಾಲ್ ಹೊರಗೆ ಕ್ಯೂ ನಿಂತ ಯುವಕರು!


Updated:June 19, 2018, 5:48 PM IST
ಈದ್ ಸಂಭ್ರಮದಂದು ಹುಡುಗಿಯನ್ನು ಅಪ್ಪಿಕೊಳ್ಳಲು ಮಾಲ್ ಹೊರಗೆ ಕ್ಯೂ ನಿಂತ ಯುವಕರು!

Updated: June 19, 2018, 5:48 PM IST
ನ್ಯೂಸ್ 18 ಕನ್ನಡ

ಲಕ್ನೋ(ಜೂ.19): ಮುರಾದಾಬಾದ್​ನಲ್ಲಿ ಈದ್​ ಸಂಭ್ರಮದಂದು ಯುವಕರನ್ನು ಲೈನ್​ನಲ್ಲಿ ನಿಲ್ಲಿಸಿ ಅಪ್ಪಿಕೊಂಡು ಶುಭಾಷಯ ಕೋರುತ್ತಿದ್ದ ಯುವತಿಯ ವಿಡಿಯೋವೊಂದು ಸದ್ಯ ಚರ್ಚೆಗೀಡಾಗಿದೆ. ಆದರೆ ವಿಡಿಯೋದಲ್ಲಿರುವ ಆಹುಡುಗಿ ಯಾರು? ಈ ಕುರಿತಅಗಿ ಯಾರಿಗೂ ಮಾಹಿತಿ ಇಲ್ಲ. ಇನ್ನು ಯುವತಿ ಕ್ಯೂನಲ್ಲಿ ಬರುತ್ತಿದ್ದ ಯುವಕರನ್ನು ಅಪ್ಪಿಕೊಳ್ಳುತ್ತಿದ್ದಾಗ ಆಕೆಯ ಗೆಳತಿಯರು ಯುವಕರನ್ನು ಎಣಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.

ರವಿವಾರ ಸಂಜೆ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಇನ್ನು ಯುವತಿ ಅಪ್ಪಿಕೊಳ್ಳುತ್ತಿದ್ದ ಸ್ಥಳದಲ್ಲಿ ಜನದಟ್ಟಣೆಯಿಂದ ಕಾಣುತ್ತಿದ್ದು., ಬಹುತೇಕ ಮಂದಿ ಈ ದೃಶ್ಯಗಳನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾರೆ. ಅಲ್ಲದೇ ಕೆಲ ಯುವಕರು ಕಮೆಂಟ್​ ಮಾಡುವುದೂ ಕೇಳಿ ಬಂದಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಯುವತಿ ತನ್ನ ಕೆಲಸ ಮುಂದುವರೆಸಿದ್ದಾಳೆ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ