Life in Moon- ಚಂದ್ರನಲ್ಲಿ ಇಡೀ ಮಾನವಕುಲ 1 ಲಕ್ಷ ವರ್ಷ ಬದುಕುವಷ್ಟು ಆಕ್ಸಿಜನ್ ಇದೆ, ಆದರೆ…

Oxygen in Moon- ಚಂದ್ರನ ಮೇಲ್ಮೈನಲ್ಲಿರುವ ಕಲ್ಲು ಮತ್ತು ಧೂಳಿನ ಕಣಗಳಲ್ಲಿ ಹೇರಳವಾದ ಆಮ್ಲಜನಕ ಇದೆ. ಆದರೆ, ಅದು ಮಾನವನ ಬಳಕೆಗೆ ಸಾಧ್ಯವಾಗುವಂತೆ ರೂಪಾಂತರಿಸುವುದು ಸವಾಲಿನ ಕೆಲಸವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಹ್ಯಾಕಾಶ ಶೋಧನೆಯಲ್ಲಿ ಒಂದೆಡೆ ಪ್ರಗತಿ ವಿಕಸನಗಳ ಜೊತೆ ಜೊತೆಗೆ ಪರಿಣಾಮಕಾರಿ ಬಾಹ್ಯಾಕಾಶ ಸಂಪನ್ಮೂಲ ಬಳಕೆಯನ್ನು ಅನುಮತಿಸುವ ತಂತ್ರಜ್ಞಾನಗಳಿಗೆ ಹೆಚ್ಚು ಸಮಯ ಮತ್ತು ಹಣವನ್ನು ಹೂಡಿಕೆಯನ್ನು ಹೆಚ್ಚಿನ ಸಂಸ್ಥೆಗಳು ಮಾಡುತ್ತಿರುವುದನ್ನು ಗಮನಿಸಿದ್ದೇವೆ. ಈ ಪ್ರಯತ್ನಗಳಿಗೆ ಮುಂಚೂಣಿಯಾಗಿ ಇದೀಗ ಚಂದ್ರನ ಮೇಲೆ ಆಮ್ಲಜನಕವನ್ನು ಉತ್ಪಾದಿಸುವ ಅತ್ಯುತ್ತಮ ವಿಧಾನಗಳ ಮೇಲೆ ಬೆಳಕು ಚೆಲ್ಲಲಾಗುತ್ತಿದೆ.

ಅಕ್ಟೋಬರ್‌ನಲ್ಲಿ, ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ (Australian Space Agency) ಮತ್ತು ನಾಸಾ (NASA) ಸಂಸ್ಥೆಗಳು ಆರ್ಟೆಮಿಸ್ ಕಾರ್ಯಕ್ರಮದ (Artemis Program) ಅಡಿಯಲ್ಲಿ ಚಂದ್ರನ ಮೇಲೆ ಆಸ್ಟ್ರೇಲಿಯಾದ ನಿರ್ಮಿತ ರೋವರ್ ಅನ್ನು ಕಳುಹಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಆರ್ಟೆಮಿಸ್ ಪ್ರೋಗ್ರಾಮ್ ಚಂದ್ರನ ಮೇಲೆ ಮಾನವರನ್ನು ಇಳಿಸುವ ನಾಸಾದ ಉದ್ದೇಶವಾಗಿದೆ. ಅದೇ ರೀತಿ ಏಜೆನ್ಸಿಗಳು ಕೂಡ ಮಾನವ ಬಳಕೆಗಾಗಿ ಬಾಹ್ಯಾಕಾಶದಲ್ಲಿ ಹೇರಳವಾಗಿರುವ ಸಂಪನ್ಮೂಲಗಳನ್ನು ಹೊರತೆಗೆಯಲು ಬೇರೆ ಬೇರೆ ವಿಧಾನಗಳನ್ನು ಅನ್ವೇಷಿಸುವಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು ಹೂಡಿಕೆ ಮಾಡುತ್ತಿವೆ. ನಾಸಾ ಆರ್ಟೆಮಿಸ್ ತಂತ್ರಜ್ಞಾನ ಬಳಸಿಕೊಂಡು ಚಂದ್ರನ ಮೇಲ್ಮೈ ಅನ್ವೇಷಿಸಲು ನವೀನ ತಂತ್ರಜ್ಞಾನಗಳನ್ನು ಬಳಸುತ್ತದೆ.

ಈ ಯೋಜನೆಯ ಅಡಿಯಲ್ಲಿ ಚಂದ್ರನ ಮೇಲ್ಮೈ ಹಾಗೂ ಅದರ ಸುತ್ತಲಿನ ನಾಸಾ ಕೈಗೊಳ್ಳಲಿರುವ ಅಂತಾರಾಷ್ಟ್ರೀಯ ಹಾಗೂ ವಾಣಿಜ್ಯ ಪಾಲುದಾರಿಕೆಗಳು ನಿರ್ಣಾಯಕ ಅಂಶವಾಗಿದ್ದು ಮಾನವ ಮತ್ತು ರೋಬೋಟಿಕ್ ಚಂದ್ರನ ಕಾರ್ಯಾಚರಣೆಗಳನ್ನು ಮತ್ತಷ್ಟು ಬೆಂಬಲಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ನಾಸಾದೊಂದಿಗೆ ಕೈಜೋಡಿಸಲಿದೆ.

ಮಾನವನ ಯೋಸಕ್ಕೆ ಯೋಗ್ಯವಾಗಿರುವ ವಾತಾವರಣವನ್ನು ಚಂದ್ರನು ಹೊಂದಿದ್ದರೂ ತೆಳುವಾಗಿದ್ದು ಹೆಚ್ಚಾಗಿ ಹೈಡ್ರೋಜನ್ (Hydrogen), ನಿಯಾನ್ (Neon) ಮತ್ತು ಆರ್ಗಾನ್‌ (Argon) ನಿಂದ ಕೂಡಿದೆ. ಇದು ಮಾನವನಿಗೆ ಉಸಿರಾಡಲು ಯೋಗ್ಯವಾಗಿರುವ ಅನಿಲ ಮಿಶ್ರಣವಲ್ಲ. ಚಂದ್ರನ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕವಿದೆ ಎಂಬುದು ತಿಳಿದುಬಂದಿದ್ದರೂ ಇದು ಅನಿಲ ರೂಪದಲ್ಲಿಲ್ಲ. ಬದಲಿಗೆ ಇದು ರೆಗೋಲಿತ್‌ನೊಳಗೆ ಸಿಲುಕಿದೆ. ರೆಗೋಲಿತ್ (Lunar Regolith) ಎಂಬುದು ಗ್ರಹದ ತಳದಲ್ಲಿರುವ ಘನವಸ್ತುವಾಗಿದೆ. ಚಂದ್ರನ ಮೇಲ್ಮೈಯನ್ನು ಆವರಿಸುವ ಕಲ್ಲು ಮತ್ತು ಸೂಕ್ಷ್ಮ ಧೂಳಿನ ಪದರ. ರೆಗೋಲಿತ್‌ನಿಂದ ಆಮ್ಲಜನಕವನ್ನು ಹೊರತೆಗೆದರೂ ಇದು ಮಾನವ ಜೀವನಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿದೆಯೇ ಎಂಬುದನ್ನು ನೋಡಬೇಕಾಗಿದೆ.

ಆಮ್ಲಜನಕ ಹೇಗಿದೆ?

ನಮ್ಮ ಸುತ್ತಲಿನ ಅನೇಕ ಖನಿಜಗಳಲ್ಲಿ ಆಮ್ಲಜನಕವಿದೆ. ಚಂದ್ರನು ಹೆಚ್ಚಾಗಿ ಭೂಮಿಯ ಮೇಲೆ ನೀವು ಕಾಣುವ ಅದೇ ಬಂಡೆಗಳಿಂದ ಮಾಡಲ್ಪಟ್ಟಿದೆ. ಸಿಲಿಕಾ, ಅಲ್ಯೂಮಿನಿಯಂ ಮತ್ತು ಕಬ್ಬಿಣ ಮತ್ತು ಮೆಗ್ನೀಸಿಯಮ್ ಆಕ್ಸೈಡ್‌ಗಳಂತಹ ಖನಿಜಗಳು ಚಂದ್ರನ ಭೂದೃಶ್ಯದಲ್ಲಿ ಪ್ರಾಬಲ್ಯ ಹೊಂದಿವೆ. ಈ ಎಲ್ಲಾ ಖನಿಜಗಳು ಆಮ್ಲಜನಕವನ್ನು ಹೊಂದಿದ್ದರೂ ನಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: Drinking Water-ದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಹೇಗಿದೆ ಗೊತ್ತೇ?

ಚಂದ್ರನ ಮೇಲೆ ಈ ಖನಿಜಗಳು ಗಟ್ಟಿಯಾದ ಕಲ್ಲು, ಧೂಳು, ಜಲ್ಲಿಕಲ್ಲು ಹಾಗೂ ಮೇಲ್ಮೈಲ್ಲಿರುವ ಇತರ ಅಂಶಗಳು ಒಳಗೊಂಡಂತೆ ವಿಭಿನ್ನ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ಲೆಕ್ಕವಿಲ್ಲದಷ್ಟು ಸಹಸ್ರಮಾನಗಳಲ್ಲಿ ಉಲ್ಕೆಗಳು ಚಂದ್ರನ ಮೇಲ್ಮೈಗೆ ಅಪ್ಪಳಿಸುವ ಪರಿಣಾಮಗಳಿಂದ ಈ ಅಂಶಗಳು ಉಂಟಾಗಿವೆ. ಕೆಲವು ಜನರು ಚಂದ್ರನ ಮೇಲ್ಮೈ ಪದರವನ್ನು ಚಂದ್ರನ "ಮಣ್ಣು" ಎಂದು ಕರೆಯುತ್ತಾರೆ. ರೆಗೋಲಿತ್ ಗಟ್ಟಿಯಾದ ಬಂಡೆಯಿಂದ ನಿರ್ಮಾಣವಾಗಿದೆ ಇದರ ಫಲಿತಾಂಶವು ಮೂಲ ಬಂಡೆಗಳಲ್ಲಿ ಇಲ್ಲದ ಖನಿಜಗಳ ಮ್ಯಾಟ್ರಿಕ್ಸ್ ಆಗಿದೆ. ಭೂಮಿಯ ಮಣ್ಣು ಗಮನಾರ್ಹವಾದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳಿಂದ ತುಂಬಿದೆ. ಏತನ್ಮಧ್ಯೆ, ಚಂದ್ರನ ಮೇಲ್ಮೈಯಲ್ಲಿರುವ ವಸ್ತುಗಳು ಮೂಲತಃ ಅದರ ಮೂಲ, ಅಸ್ಪೃಶ್ಯ ರೂಪದಲ್ಲಿ ರೆಗೋಲಿತ್ ಆಗಿದೆ.

ಆಮ್ಲಜನಕವನ್ನು ಹೊರತೆಗೆಯುವುದು ಸವಾಲು:

ಚಂದ್ರನ ರೆಗೋಲಿತ್ ಅಂದಾಜು 45% ಆಮ್ಲಜನಕದಿಂದ ನಿರ್ಮಾಣವಾಗಿದೆ. ಈ ಆಮ್ಲಜನಕವನ್ನು ಮೇಲೆ ತಿಳಿಸಿರುವ ಖನಿಜಗಳು ಬಿಗಿಯಾಗಿ ಬಂಧಿಸಲಾಗಿದೆ. ಆ ಬಂಧಗಳನ್ನು ಮುರಿಯಲು ನಾವು ಶಕ್ತಿಯ ಪ್ರಯೋಗವನ್ನು ಮಾಡಲೇಬೇಕು.

ವಿದ್ಯುದ್ವಿಭಜನೆಯ (Electrolysis) ಬಗ್ಗೆ ನಿಮಗೆ ತಿಳಿದಿದ್ದರೆ ನಿಮಗೆ ಇದು ತಿಳಿದಿರಬಹುದು. ಭೂಮಿಯ ಮೇಲೆ, ಅಲ್ಯೂಮಿನಿಯಂ ಉತ್ಪಾದನೆಯಂತಹ ಕೆಲಸಗಳಲ್ಲಿ ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆಮ್ಲಜನಕದಿಂದ ಅಲ್ಯೂಮಿನಿಯಂ ಅನ್ನು ಪ್ರತ್ಯೇಕಿಸಲು ವಿದ್ಯುದ್ವಾರಗಳ (Electrode) ಮೂಲಕ ಅಲ್ಯೂಮಿನಿಯಂ ಆಕ್ಸೈಡ್ (ಸಾಮಾನ್ಯವಾಗಿ ಅಲ್ಯೂಮಿನಾ ಎಂದು ಕರೆಯಲಾಗುತ್ತದೆ) ದ್ರವ ರೂಪದ ಮೂಲಕ ವಿದ್ಯುತ್ ಪ್ರವಾಹವನ್ನು ರವಾನಿಸಲಾಗುತ್ತದೆ. ಈ ಸಂದರ್ಭದಲ್ಲಿ, ಆಮ್ಲಜನಕವನ್ನು ಉಪಉತ್ಪನ್ನವಾಗಿ ಉತ್ಪಾದಿಸಲಾಗುತ್ತದೆ. ಚಂದ್ರನ ಮೇಲೆ, ಆಮ್ಲಜನಕವು ಮುಖ್ಯ ಉತ್ಪನ್ನವಾಗಿದೆ ಮತ್ತು ಹೊರತೆಗೆಯಲಾದ ಅಲ್ಯೂಮಿನಿಯಂ (ಅಥವಾ ಇತರ ಲೋಹ) ಸಂಭಾವ್ಯ ಉಪಯುಕ್ತ ಉಪಉತ್ಪನ್ನವಾಗಿದೆ.

ಇದನ್ನೂ ಓದಿ: ಭಾರತದ ಅತ್ಯಂತ Cleanest State, City, Town ಯಾವುವು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ

ಇದು ಸರಳವಾದ ಪ್ರಕ್ರಿಯೆಯಾಗಿದ್ದರೂ ಇಲ್ಲೊಂದು ಸವಾಲಿದೆ. ಶಕ್ತಿಯ ಹೆಚ್ಚಿನ ಪ್ರಾಬಲ್ಯವನ್ನು ನಾವು ಹಾಕಬೇಕಾಗಿರುವುದರಿಂದ ಇದು ಸಮರ್ಥನೀಯವಾಗಿರಲು, ಇದು ಸೌರ ಶಕ್ತಿ ಅಥವಾ ಚಂದ್ರನ ಮೇಲೆ ಲಭ್ಯವಿರುವ ಇತರ ಶಕ್ತಿ ಮೂಲಗಳಿಂದ ಬೆಂಬಲಿಸುವ ಅಗತ್ಯವಿದೆ. ರೆಗೊಲಿತ್‌ನಿಂದ ಆಮ್ಲಜನಕವನ್ನು ಹೊರತೆಗೆಯಲು ಗಣನೀಯ ಕೈಗಾರಿಕಾ ಉಪಕರಣಗಳು ಸಹ ಅಗತ್ಯವಿರುತ್ತದೆ. ನಾವು ಮೊದಲು ಘನ ಲೋಹದ ಆಕ್ಸೈಡ್ ಅನ್ನು ದ್ರವ ರೂಪಕ್ಕೆ ಪರಿವರ್ತಿಸಬೇಕಾಗಿದೆ, ಶಾಖವನ್ನು ಅನ್ವಯಿಸುವ ಮೂಲಕ ಅಥವಾ ಶಾಖವನ್ನು ದ್ರಾವಕಗಳು ಅಥವಾ ಎಲೆಕ್ಟ್ರೋಲೈಟ್ಗಳೊಂದಿಗೆ ಸಂಯೋಜಿಸಲಾಗುತ್ತದೆ. ಭೂಮಿಯ ಮೇಲೆ ಇದನ್ನು ನಿರ್ವಹಿಸಲು ಅವಶ್ಯಕ ತಂತ್ರಜ್ಞಾನಗಳನ್ನು ನಾವು ಹೊಂದಿದ್ದೇವೆ ಆದರೆ ಇದೇ ಉಪಕರಣವನ್ನು ಚಂದ್ರನ ಕಡೆಗೆ ವಾಲಿಸಿ ನಿರ್ವಹಿಸುವುದು ಕೊಂಚ ಕಷ್ಟಕರವಾಗಿದೆ. ಹಾಗೂ ಇದನ್ನು ಚಲಾಯಿಸಲು ಸಾಕಷ್ಟು ಶಕ್ತಿಯನ್ನು ಉತ್ಪಾದಿಸುವ ಅವಶ್ಯಕತೆ ಕೂಡ ಇದೆ.

ಈ ವರ್ಷದ ಆರಂಭದಲ್ಲಿ, ಬೆಲ್ಜಿಯಂ ಮೂಲದ ಸ್ಟಾರ್ಟ್‌ಅಪ್ ಸ್ಪೇಸ್ ಅಪ್ಲಿಕೇಷನ್ಸ್ ಸರ್ವಿಸಸ್ ವಿದ್ಯುದ್ವಿಭಜನೆಯ ಮೂಲಕ ಆಮ್ಲಜನಕವನ್ನು ತಯಾರಿಸುವ ಪ್ರಕ್ರಿಯೆಯನ್ನು ಸುಧಾರಿಸಲು ಮೂರು ಪ್ರಾಯೋಗಿಕ ಅಣು ಕೇಂದ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿತು. 2025 ರಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ in-situ ಸಂಪನ್ಮೂಲ ಬಳಕೆ ಮಿಷನ್‌ನ ಭಾಗವಾಗಿ ತಂತ್ರಜ್ಞಾನವನ್ನು ಚಂದ್ರನಲ್ಲಿಗೆ ಕಳುಹಿಸುವ ಯೋಜನೆಯನ್ನು ಹೊಂದಿದ್ದಾರೆ.

ಆಮ್ಲಜನಕದ ಪ್ರಮಾಣ:

ಆಮ್ಲಜನಕದ ಪ್ರಮಾಣವನ್ನು ಅಳೆಯಲು ನಿರ್ಧರಿಸಿದಾಗ ಚಂದ್ರನು ಎಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ಪೂರೈಸಬಹುದು ಎಂಬ ಚಿತ್ರಣ ಮೂಡಬಹುದು. ಚಂದ್ರನ ಆಳವಾದ ಗಟ್ಟಿಯಾದ ಕಲ್ಲಿನ ವಸ್ತುವಿನಲ್ಲಿ ನಿರ್ಮಾಣವಾದ ಆಮ್ಲಜನಕವನ್ನು ನಾವು ನಿರ್ಲಕ್ಷಿಸಿದರೆ ಮತ್ತು ಮೇಲ್ಮೈಯಲ್ಲಿ ಸುಲಭವಾಗಿ ಪ್ರವೇಶಿಸಬಹುದಾದ ರೆಗೋಲಿತ್ ಅನ್ನು ಪರಿಗಣಿಸಿದರೆ ಆಮ್ಲಜನಕದ ಅಂದಾಜು ಪ್ರಮಾಣವನ್ನು ನಾವು ಊಹಿಸಹುದಾಗಿದೆ.

ಇದನ್ನೂ ಓದಿ: Kerala Couple : ಟೀ ಮಾರಿ ಬಂದ ಹಣದಿಂದ ಹೆಂಡತಿ ಜೊತೆಗೆ 25ಕ್ಕೂ ಹೆಚ್ಚು ದೇಶ ಸುತ್ತಿದ್ದ ಕೇರಳದ ವಿಜಯನ್ ನಿಧನ

ಚಂದ್ರನ ರೆಗೊಲಿತ್‌ನ ಪ್ರತಿ ಘನ ಮೀಟರ್ ಸರಾಸರಿ 1.4 ಟನ್ ಖನಿಜಗಳನ್ನು ಹೊಂದಿರುತ್ತದೆ, ಇದರಲ್ಲಿ ಸುಮಾರು 630 ಕಿಲೋಗ್ರಾಂಗಳಷ್ಟು ಆಮ್ಲಜನಕವಿದೆ. ಮನುಷ್ಯ ಬದುಕಲು ದಿನಕ್ಕೆ ಸುಮಾರು 800 ಗ್ರಾಂ ಆಮ್ಲಜನಕದ ಅಗತ್ಯವಿದೆ ಎಂದು ನಾಸಾ ಹೇಳಿದೆ. ಆದ್ದರಿಂದ 630 ಕೆಜಿ ಆಮ್ಲಜನಕವು ವ್ಯಕ್ತಿಯನ್ನು ಸುಮಾರು ಎರಡು ವರ್ಷಗಳವರೆಗೆ (ಅಥವಾ ಅದಕ್ಕಿಂತ ಹೆಚ್ಚು) ಜೀವಂತವಾಗಿರಿಸುತ್ತದೆ.

ಈಗ ನಾವು ಚಂದ್ರನ ಮೇಲಿನ ರೆಗೊಲಿತ್‌ನ ಸರಾಸರಿ ಆಳವು ಸುಮಾರು ಹತ್ತು ಮೀಟರ್‌ಗಳು ಎಂದು ಊಹಿಸೋಣ ಮತ್ತು ನಾವು ಇದರಿಂದ ಎಲ್ಲಾ ಆಮ್ಲಜನಕವನ್ನು ಹೊರತೆಗೆಯಬಹುದು. ಅಂದರೆ ಚಂದ್ರನ ಮೇಲ್ಮೈಯ ಮೇಲಿನ ಹತ್ತು ಮೀಟರ್‌ಗಳು ಭೂಮಿಯ ಮೇಲಿನ ಎಲ್ಲ 800 ಕೋಟಿ ಜನರನ್ನು ಸುಮಾರು 1 ಲಕ್ಷ ವರ್ಷಗಳವರೆಗೆ ಬೆಂಬಲಿಸಲು ಸಾಕಷ್ಟು ಆಮ್ಲಜನಕವನ್ನು ಒದಗಿಸುತ್ತದೆ ಎಂಬ ಲೆಕ್ಕಾಚಾರವನ್ನು ನಾವಿಲ್ಲಿ ಮಾಡಬಹುದು. ಆಮ್ಲಜನಕವನ್ನು ಹೊರತೆಗೆಯಲು ಮತ್ತು ಬಳಸಲು ನಾವು ಎಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.

ಭಾಷಾಂತರ ನೆರವು: ಏಜೆನ್ಸಿ

Published by:Vijayasarthy SN
First published: