2020ರ ಆರ್ಥಿಕ ಬೆಳವಣಿಗೆಯ ಅಂದಾಜು ದರ ಶೇ. 6.6ರಿಂದ ಶೇ. 5.4ಕ್ಕೆ ಇಳಿಕೆ; ಮೂಡೀಸ್ ಲೆಕ್ಕಾಚಾರ

2020ರ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಹುಸಿಯಾಗಿದೆ. ದುರ್ಬಲ ಆರ್ಥಿಕತೆ ಮತ್ತು ಕ್ಷೀಣಗೊಂಡ ಹಣದ ಹರಿವು ಎರಡೂ ಕೂಡ ಸೇರಿ ಹೊಡೆತ ಕೊಟ್ಟಿವೆ. ಈ ಕಾರಣದಿಂದ ಆರ್ಥಿಕ ಕುಸಿತ ನಿಂತರೂ ಶೀಘ್ರ ಚೇತರಿಕೆ ಅಸಾಧ್ಯವಾಗಿದೆ ಎಂಬುದು ಮೂಡೀಸ್ ಅಭಿಪ್ರಾಯ.

Vijayasarthy SN | news18
Updated:February 17, 2020, 3:54 PM IST
2020ರ ಆರ್ಥಿಕ ಬೆಳವಣಿಗೆಯ ಅಂದಾಜು ದರ ಶೇ. 6.6ರಿಂದ ಶೇ. 5.4ಕ್ಕೆ ಇಳಿಕೆ; ಮೂಡೀಸ್ ಲೆಕ್ಕಾಚಾರ
ಪ್ರಾತಿನಿಧಿಕ ಚಿತ್ರ
  • News18
  • Last Updated: February 17, 2020, 3:54 PM IST
  • Share this:
ನವದೆಹಲಿ(ಫೆ. 17): ಭಾರತದ ಆರ್ಥಿಕತೆ ನಿರೀಕ್ಷೆ ತಕ್ಕಷ್ಟು ವೇಗವಾಗಿ ಚೇತರಿಕೆ ಕಾಣುವ ಸುಳಿವು ಇಲ್ಲ. ಈ ವರ್ಷವೂ ಆರ್ಥಿಕ ವೇಗ ಮಂದಗತಿಯಲ್ಲಿ ಸಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ. 2019ರಲ್ಲಿ ಶೇ. 5ರ ದರದಲ್ಲಿರಬಹುದೆಂದು ಭಾವಿಸಲಾಗಿರುವ ಆರ್ಥಿಕ ಅಭಿವೃದ್ಧಿ ಈ ವರ್ಷ ಕೂಡ ಹೆಚ್ಚೂ ಕಡಿಮೆ ಅದೇ ಮಂದವೇಗದಲ್ಲಿ ಧಾವಿಸಬಹುದು ಎಂದು ಮೂಡೀಸ್ ಎಂಬ ಖಾಸಗಿ ಹಣಕಾಸು ಹೂಡಿಕೆ ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಮೊದಲು ಇದೇ ಸಂಸ್ಥೆಯು ಆರ್ಥಿಕ ಅಭಿವೃದ್ಧಿಗೆ ಶೇ. 6.6ರ ವೇಗ ಸಿಗಬಹುದು ಎಂದು ಅಂದಾಜು ಮಾಡಿತ್ತು. ಈಗ ವಿವಿಧ ಕ್ಷೇತ್ರಗಳಲ್ಲಾಗಿರುವ ಹಿನ್ನಡೆಯನ್ನು ಪರಿಗಣಿಸಿ ತಮ್ಮ ಅಂದಾಜನ್ನು ಮರುಪರಿಶೀಲನೆ ಮಾಡಿದೆ. ಈ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಸಂಸ್ಥೆಯ ಪ್ರಕಾರ 2020 ಮತ್ತು 2021ರಲ್ಲಿ ಶೇ. 5.4 ಮತ್ತು ಶೇ. 5.8ರ ವೇಗದಲ್ಲಿ ಆರ್ಥಿಕತೆ ಬೆಳೆಯುವ ಸಾಧ್ಯತೆ ಇದೆ.

ಕಳೆದ ಎರಡು ವರ್ಷದಿಂದ ಭಾರತದ ಆರ್ಥಿಕ ಅಭಿವೃದ್ಧಿಯ ವೇಗದಲ್ಲಿ ತೀರಾ ಇಳಿಕೆಯಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೇತರಿಕೆ ಪ್ರಾರಂಭವಾಗಬಹುದು ಎಂದು ಮೂಡೀಸ್ ಸಂಸ್ಥೆ ಹೇಳಿದೆ. ಆದರೆ, ಈ ಚೇತರಿಕೆ ನಿರೀಕ್ಷೆಮಟ್ಟದಲ್ಲಿಲ್ಲ ಎಂದೂ ಎಚ್ಚರಿಸಿದೆ.

ಇದನ್ನೂ ಓದಿ: ಕನ್ನಡಿಗ ವಕೀಲ ಸಂಜಯ್ ಹೆಗ್ಡೆಗೆ ಶಾಹೀನ್​​​ ಬಾಗ್ ಪ್ರತಿಭಟನಾಕಾರರ ಮನವೊಲಿಸಲು ಸುಪ್ರೀಂಕೋರ್ಟ್ ಮನವಿ

“ಏನೇ ಚೇತರಿಕೆಯಾದರೂ ನಾವು ಹಿಂದೆ ಅಂದಾಜು ಮಾಡಿದ್ದಕ್ಕಿಂತ ಮಂದಗತಿಯಲ್ಲೇ ಇರುವ ಸಾಧ್ಯತೆ ಇದೆ. ಇದರ ಆಧಾರದ ಮೇಲೆ ಮುಂದಿನ ಎರಡು ವರ್ಷಕ್ಕೆ ನಾವು ಮಾಡಿದ್ದ ಅಂದಾಜು ಅಭಿವೃದ್ಧಿ ದರವನ್ನು(ಜಿಡಿಪಿ ವೃದ್ಧಿ ದರ) ಪರಿಷ್ಕರಿಸಿದ್ದೇವೆ. 2020 ಮತ್ತು 2021ರಲ್ಲಿ ಶೇ. 6.6 ಮತ್ತು ಶೇ. 6.7ರಷ್ಟು ಬೆಳವಣಿಗೆ ಆಗಬಹುದೆಂದು ಭಾವಿಸಿದ್ದೆವು. ಈಗ ಅದು ಶೇ. 5.4 ಮತ್ತು ಶೇ. 5.8 ಇರಬಹುದು ಎಂಬುದು ನಮ್ಮ ನಿರೀಕ್ಷೆ” ಎಂದು ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್ ಮ್ಯಾಗಜಿನ್​ನಲ್ಲಿ ಮೂಡೀಸ್ ಸಂಸ್ಥೆ ತಿಳಿಸಿದೆ.

2019ರಲ್ಲಿ(ಜನವರಿಯಿಂದ ಡಿಸೆಂಬರ್​ವರೆಗಿನ ವರ್ಷ) ಜಿಡಿಪಿ ಶೇ. 5ರಷ್ಟು ಹೆಚ್ಚಳ ಕಂಡಿತ್ತು. 2020ರ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಹುಸಿಯಾಗಿದೆ. ದುರ್ಬಲ ಆರ್ಥಿಕತೆ ಮತ್ತು ಕ್ಷೀಣಗೊಂಡ ಹಣದ ಹರಿವು ಎರಡೂ ಕೂಡ ಸೇರಿ ಹೊಡೆತ ಕೊಟ್ಟಿವೆ. ಆರ್ಥಿಕ ಕುಸಿತ ನಿಂತಿದೆಯಾದರೂ ಈ ಕಾರಣದಿಂದ ಶೀಘ್ರ ಚೇತರಿಕೆ ಅಸಾಧ್ಯವಾಗಿದೆ ಎಂಬುದು ಮೂಡೀಸ್ ಅಭಿಪ್ರಾಯ.

ಇದನ್ನೂ ಓದಿ: ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬ ಧೋರಣೆ ಬಿಡಿ; ಸೇನಾ ನೇಮಕಾತಿಯಲ್ಲಿ ಸಮಾನತೆ ತೋರಿ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

ಈ ಬಾರಿಯ ಕೇಂದ್ರ ಬಜೆಟ್ ಬಗ್ಗೆ ಮೂಡೀಸ್ ನಿರಾಸೆ ವ್ಯಕ್ತಪಡಿಸಿದೆ. ಆರ್ಥಿಕ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಬಜೆಟ್​ನಲ್ಲಿ ಪೂರಕವಾದ ಯೋಜನೆಗಳು ಯಾವುವೂ ಇಲ್ಲ. ಹೂಡಿಕೆಗೆ ಅಪಾಯ ಹೆಚ್ಚಿರುವ ಸಂದರ್ಭದಲ್ಲಿ ನೀವು ತೆರಿಗೆ ಕಡಿತಗೊಳಿಸಿದರೆ ಅಷ್ಟೇನೂ ಪ್ರಯೋಜನವಾಗದು ಎಂದು ಮೂಡೀಸ್​ನಲ್ಲಿರುವ ತಜ್ಞರು ಹೇಳಿದ್ಧಾರೆ.ಇದು ಭಾರತದ ಕಥೆಯಾದರೆ ಜಾಗತಿಕವಾಗಿಯೂ ವಿವಿಧ ದೇಶಗಳ ಆರ್ಥಿಕತೆಯ ವೇಗವು ಉತ್ತಮವಾಗಿಯೇನೂ ಇಲ್ಲ. ಕೊರೊನಾ ವೈರಸ್ ಸೋಂಕಿನಿಂದ ಬಾಧಿತವಾಗಿರುವ ಚೀನಾ ದೇಶದ ಆರ್ಥಿಕ ಬೆಳವಣಿಗೆಯ ಅಂದಾಜು ದರವನ್ನು ಶೇ. 5.2ಕ್ಕೆ ಇಳಿಸಲಾಗಿದೆ. ಜಿ20 ರಾಷ್ಟ್ರಗಳು 2020ರಲ್ಲಿ ಒಟ್ಟಾರೆಯಾಗಿ ಶೇ. 2.4ರಷ್ಟು ಜಿಡಿಪಿ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ಮೂಡೀಸ್ ಹೇಳಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

 
First published:February 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading