ಇಂದು ಸಂಸತ್​ ಕೊನೆ ಕಲಾಪ: ಸಭಾಪತಿ ವೆಂಕಯ್ಯ ನಾಯ್ಡು ಅವರ ಉಪಹಾರ ಸಭೆಗೆ ಕಾಂಗ್ರೆಸ್​ ಸಂಸದರು ಗೈರು

news18
Updated:August 10, 2018, 10:18 AM IST
ಇಂದು ಸಂಸತ್​ ಕೊನೆ ಕಲಾಪ: ಸಭಾಪತಿ ವೆಂಕಯ್ಯ ನಾಯ್ಡು ಅವರ ಉಪಹಾರ ಸಭೆಗೆ ಕಾಂಗ್ರೆಸ್​ ಸಂಸದರು ಗೈರು
news18
Updated: August 10, 2018, 10:18 AM IST
ನ್ಯೂಸ್​ 18 ಕನ್ನಡ

ದೆಹಲಿ (ಆ.10): ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳ ಕುರಿತು ಯಾವುದೇ ಚರ್ಚೆ ನಡೆಸದೆ ಮಸೂದೆ ಮಂಡಿಸಿರುವ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್​ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ  ಅಧಿವೇಶನದ ಕೊನೆಯ ದಿನವಾದ ಇಂದು  ರಾಜ್ಯಸಭಾ ಚೇರ್​ಮನ್​ ವೆಂಕಯ್ಯ ನಾಯ್ಡು ಆಯೋಜಿಸಿರುವ ಬೆಳ್ಳಗಿನ ಉಪಾಹಾರ ಸಭೆಗೆ ತೆರಳದಂತೆ ಕಾಂಗ್ರೆಸ್​ ಸಂಸದರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಗುರುವಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್​ ತಿದ್ದುಪಡಿ ಸೇರಿದಂತೆ ಮೂರು ಪ್ರಮುಖ ಮಸೂದೆಗಳು ಮಂಡನೆಯಾಗಿದೆ. ಈ ಮಸೂದೆ ಮೇಲೆ ಯಾವುದೇ ಗಂಭೀರ ಚರ್ಚೆ ನಡೆದಿಲ್ಲ. ಈ ಹಿನ್ನಲೆ ಕಾಂಗ್ರೆಸ್​  ಮೂಲಕ ಸರ್ಕಾರದ ಕಾರ್ಯ ವೈಖರಿಗೆ ಆಕ್ರೋಶಗೊಂಡಿದೆ.

ರಾಜ್ಯಸಭಾಪತಿ ವೆಂಕಯ್ಯ ನಾಯ್ಡು ಆರೋಜಿಸಿರುವ ಸಭೆಯಲ್ಲಿ ಗುರುವಾರ ನೂತನವಾಗಿ ಆಯ್ಕೆಯಾದ ಉಪಸಭಾಪತಿ ಹರಿವಂಶ ಅವರು ಕೂಡ ಭಾಗಿಯಾಗಲಿದ್ದಾರೆ.

ರಾಜ್ಯಸಭೆಯಲ್ಲಿ ಇಂದು  ತ್ರಿವಳಿ  ತಲಾಕ್ ಬಿಲ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ತಲಾಖ್​ ಸಂಬಂಧ  ದೂರು ದಾಖಲು ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಗುರುವಾರ ತ್ರಿವಳಿ ತಲಾಖ್​ಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಬಿಲ್​ ಮಂಡನೆ ಮಾಡಲಾಗಿತ್ತು. ತ್ರಿವಳಿ ತಲಾಖ್​ ನೀಡುವ ವ್ಯಕ್ತಿ ಜಾಮೀನು ಪಡೆಯಬಹುದಾದ ಅವಕಾಶವಿರುವ ತಿದ್ದುಪಡಿ ಮಸೂದೆಗೆ ಕೇಂದ್ರ ಈಗಾಗಲೇ ಒಪ್ಪಿಗೆ ನೀಡಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...