Monsoon Parliament Session: ಆಗಸ್ಟ್ 3 ಅಥವಾ 4ನೇ ವಾರದಲ್ಲಿ ಮಳೆಗಾಲದ ಸಂಸತ್ ಅಧಿವೇಶನ ನಡೆಯುವ ಸಾಧ್ಯತೆ

ಪ್ರಸಕ್ತ ಸಾಲಿನ ಮಳೆಗಾಲದ ಸಂಸತ್ ಅಧಿವೇಶನದಲ್ಲಿ 11 ಸುಗ್ರೀವಾಜ್ಞೆಗಳು ಪಾಸ್ ಆಗಬೇಕಿದೆ. ಇಲ್ಲದಿದ್ದರೆ ಈ  ಸುಗ್ರೀವಾಜ್ಞೆಗಳು ಸಿಂಧುತ್ವವನ್ನು ಕಳೆದುಕೊಳ್ಳಲಿವೆ.

ಸಂಸತ್​ ಚಿತ್ರಣ

ಸಂಸತ್​ ಚಿತ್ರಣ

  • Share this:
ನವದೆಹಲಿ(ಜು.08): ಕೊರೋನಾ ಕಾರಣಕ್ಕೆ ಮಳೆಗಾಲದ ಸಂಸತ್ ಅಧಿವೇಶನ ನಡೆಯುವುದು ಅನಿಶ್ಚಿತತೆಯಿಂದ ಕೂಡಿದೆ. ಇದೇ ತಿಂಗಳಲ್ಲಿ ನಡೆಯಬೇಕಿದ್ದ ಮಳೆಗಾಲದ ಸಂಸತ್ ಅಧಿವೇಶನ ಆಗಸ್ಟ್ 3 ಅಥವಾ 4ನೇ ವಾರದಲ್ಲಿ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ.

ಸಾಮಾನ್ಯವಾಗಿ ಮಳೆಗಾಲದ ಸಂಸತ್ ಅಧಿವೇಶ ಒಂದು ತಿಂಗಳ ಕಾಲ ನಡೆಯಲಿದೆ. ಇದು ನಿಯಮಗಳ ಪ್ರಕಾರ ಸೆ. 23ರೊಳಗೆ ಮುಕ್ತಾಯವಾಗಬೇಕಾಗಿದೆ. ಆದುದರಿಂದ ಆಗಸ್ಟ್ 3 ಅಥವಾ 4ನೇ ವಾರದಲ್ಲಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪ್ರಸಕ್ತ ಸಾಲಿನ ಮಳೆಗಾಲದ ಸಂಸತ್ ಅಧಿವೇಶನದಲ್ಲಿ 11 ಸುಗ್ರೀವಾಜ್ಞೆಗಳು ಪಾಸ್ ಆಗಬೇಕಿದೆ. ಇಲ್ಲದಿದ್ದರೆ ಈ  ಸುಗ್ರೀವಾಜ್ಞೆಗಳು ಸಿಂಧುತ್ವವನ್ನು ಕಳೆದುಕೊಳ್ಳಲಿವೆ. ಸುಗ್ರೀವಾಜ್ಞೆಗಳಿಗೆ ಸಿಂಧುತ್ವ ಕಳೆದುಹೋದರೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ ಮತ್ತು ಮತ್ತೊಮ್ಮೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗುತ್ತದೆ.

ಆರೋಗ್ಯ ಇಲಾಖೆ ಎಡವಟ್ಟು; ಪಾಸಿಟಿವ್ ಬಂದಿದ್ರೂ ವೃದ್ಧೆಯನ್ನು ಮನೆಯಲ್ಲೇ ಬಿಟ್ಟು ಹೋದ ಸಿಬ್ಬಂದಿ

ಸಂಸತ್ ಅಧಿವೇಶನ ನಡೆಸಲು ಕೊರೊನಾ ಅಡ್ಡಿಯಾಗಿದ್ದು ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.‌ ಅದಕ್ಕಾಗಿ ಲೋಕಸಭೆ, ರಾಜ್ಯಸಭೆಯ ಸಂಸದರ ಗ್ಯಾಲರಿಗಳು, ಸ್ಪೀಕರ್ ಗ್ಯಾಲರಿಗಳು, ಸಂದರ್ಶಕರ ಗ್ಯಾಲರಿಗಳು, ಸೆಂಟ್ರಲ್ ಹಾಲ್ ಮತ್ತಿತರ ಜಾಗಗಳಲ್ಲಿ ಸಂಸದರಿಗೆ ಆಸನದ ವ್ಯವಸ್ಥೆ  ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಸಕ್ತ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಾರಕ ಕೊರೋನಾ, ಆರ್ಥಿಕ ಹಿನ್ನಡೆ, ಗಡಿ ಸಮಸ್ಯೆ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.
Published by:Latha CG
First published: