ಭಾರತದ ಪ್ರಮುಖ ಹವಾಮಾನ ವಿಶ್ಲೇಷಣಾ ಸಂಸ್ಥೆ ಸ್ಕೈಮೆಟ್ ವೆದರ್ ಸರ್ವೀಸಸ್ (Skymet Weather Report) ಪ್ರೈವೇಟ್ ಲಿಮಿಟೆಡ್ (ಸ್ಕೈಮೆಟ್ ಹವಾಮಾನ ಸೇವೆಗಳ ಸಂಸ್ಥೆ) 2021 ರ ಮುಂಗಾರು ಮುನ್ಸೂಚನೆಯ ವಿವರವನ್ನು ಏಪ್ರಿಲ್ 13, 2021 ರಂದು ಬಿಡುಗಡೆ ಮಾಡಿತ್ತು ಹಾಗೂ ಇದೀಗ ತನ್ನ ಹವಾಮಾನ ಮುನ್ಸೂಚನೆ ವಿವರಗಳನ್ನು ನವೀಕರಿಸುತ್ತಿದೆ. ಈ ನವೀಕರಣದ ಕುರಿತು ಸ್ಕೈಮೆಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು 60% ಮಾಮೂಲಿಗಿಂತ ದುರ್ಬಲವಾಗಿದೆ ಎಂದು ನಂಬಿದ್ದು ದೋಷ ಮಾರ್ಜಿನ್ +/- 4% ನೊಂದಿಗೆ ಮುಂಗಾರು ಮಳೆ ದೀರ್ಘಾವಧಿಯ ಸರಾಸರಿ 94% ನಷ್ಟು ಆಗಿರುತ್ತದೆ (ದೀರ್ಘ ಅವಧಿಯ ಅಂದಾಜು 880.6 ಎಮ್ಎಮ್ ಜೂನ್ ತಿಂಗಳಿನಿಂದ ಸಪ್ಟೆಂಬರ್ವರೆಗೆ 4 ತಿಂಗಳು) ಎಂದು ತಿಳಿಸಿದೆ.
ನೈರುತ್ಯ ಮಾನ್ಸೂನ್ ಸರಿಯಾದ ಸಮಯದಲ್ಲಿ ಸುದೀರ್ಘ ಆರಂಭ ಸರಾಸರಿ 110% ನೊಂದಿಗೆ ಜೂನ್ ಕೊನೆಯಲ್ಲಿ ಉತ್ತಮ ಆರಂಭವನ್ನು ನೀಡಿತು. ಜುಲೈ ತಿಂಗಳಲ್ಲಿ ಮಳೆ ಅಷ್ಟೊಂದು ಪ್ರಖರವಾಗಿರಲಿಲ್ಲ ಹೀಗಾಗಿ ಜುಲೈ 11 ರಲ್ಲಿಯೇ ಮಳೆ ತನ್ನ ಆರ್ಭಟವನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇಲ್ಲಿ ನಾವು ಎಲ್ಪಿಎ ಮಟ್ಟವನ್ನು ನೋಡುವುದಾದರೆ 93% ವಾಗಿದ್ದು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಈ ತಿಂಗಳು ಹೊಂದಿತ್ತು. ಸ್ಕೈಮೆಟ್ ಮುನ್ಸೂಚನೆಯ ಎಲ್ಪಿಎ ಅಂಕಿ ಅಂಶಗಳಾದ 106% ಹಾಗೂ 97% ಗೆ ತದ್ವಿರುದ್ಧವಾಗಿ ಜೂನ್ ಹಾಗೂ ಜುಲೈ ತಿಂಗಳ ಎಲ್ಪಿಎ ಯು 110% ಹಾಗೂ 93% ವನ್ನು ದಾಖಲಿಸಿದೆ.
ನೈರುತ್ಯ ಮಾನ್ಸೂನ್ ಆಗಸ್ಟ್ 1 ರ ಎರಡನೇ ವಾರಗಳಲ್ಲಿ 2 ನೇ ಮಾನ್ಸೂನ್ ವಿರಾಮದ ಹಂತವನ್ನು ಎದುರಿಸಿದೆ (ಕಡಿಮೆ ಮಳೆ) ಮುಂಗಾರು ದುರ್ಬಲ ಪರಿಸ್ಥಿತಿಗಳಿಂದಾಗಿ ಸಂಪೂರ್ಣ ಭಾರತವು ಆಗಸ್ಟ್ ಮಧ್ಯದಲ್ಲಿ 9% ರಷ್ಟು ಮಳೆಯ ಪ್ರಮಾಣವನ್ನು ಕುಗ್ಗಿಸಲು ಕಾರಣವಾಗಿದೆ. ಮಾನ್ಸೂನ್ನ ಸಾಮಾನ್ಯ ಸ್ಥಿತಿಯು ಇದುವರೆಗೆ ಸುಧಾರಣೆಗೊಂಡಿಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ.
ಭೌಗೋಳಿಕ ಅಪಾಯದ ದೃಷ್ಟಿಯಿಂದ ಗುಜರಾತ್, ರಾಜಸ್ಥಾನ, ಒಡಿಸ್ಸಾ ಕೇರಳ ಹಾಗೂ ಈಶಾನ್ಯ ಭಾರತವು ಮಳೆಯ ಕೊರತೆಯಿಂದ ಹಾನಿಗೊಳಗಾಗಲಿವೆ ಎಂಬ ಮಾಹಿತಿ ದೊರೆತಿದೆ. ಈಗಾಗಲೇ ಗುಜರಾತ್ ಹಾಗೂ ಪಶ್ಚಿಮ ರಾಜಸ್ಥಾನ ಪ್ರದೇಶಗಳಲ್ಲಿ ಬರಗಾಲದ ಲಕ್ಷಣಗಳು ತಲೆದೋರುತ್ತಿವೆ. ಈ ಬಾರಿ ಸಮರ್ಪಕ ಮಳೆ ಕಂಡಂತಹ ಪ್ರದೇಶಗಳೆಂದರೆ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಭಾಗಗಳಾಗಿವೆ. ಮಳೆಯನ್ನು ಆಶ್ರಯಿಸಿರುವ ಕೇಂದ್ರಭಾಗಗಳ ಕೃಷಿಭೂಮಿಯಲ್ಲಿ ಆಹಾರ ಉತ್ಪಾದನೆಗಳಿಗೆ ಯಾವುದೇ ತೊಡಕು ಸಂಭವಿಸುವುದಿಲ್ಲ.
ಸ್ಕೈಮೆಟ್ನ ವ್ಯವಸ್ಥಾಪಕ ನಿರ್ದೇಶಕರಾದ ಜತಿನ್ ಸಿಂಗ್ ಮುಂಗಾರು ಮಳೆ ದುರ್ಬಲಗೊಂಡಿರುವುದಕ್ಕೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಹಿಂದೂ ಮಹಾಸಾಗರದಲ್ಲಿ IOD (ಹಿಂದೂ ಮಹಾಸಾಗರ ದ್ವಿಧ್ರುವಿ ಅಂದರೆ ಎರಡು ಪ್ರದೇಶಗಳ ನಡುವಿನ ಸಮುದ್ರದ ಮೇಲ್ಮೈ ತಾಪಮಾನದಲ್ಲಿನ ವ್ಯತ್ಯಾಸ) ದೀರ್ಘಾವಧಿಯ ಹಂತ ಹಾಗೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿಸ್ತರಿತ ಮಳೆ ವಿರಾಮ ಪರಿಸ್ಥಿತಿಗಳಾಗಿವೆ ಎಂದು ತಿಳಿಸಿದ್ದಾರೆ. ಸಪ್ಟೆಂಬರ್ನಲ್ಲಿ ಉಂಟಾಗುವ IODಹೊರಹೊಮ್ಮುವಿಕೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಜತಿನ್ ತಿಳಿಸಿದ್ದಾರೆ.
ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ ಸ್ಕೈಮೆಟ್ ಹವಾಮಾನವು 2021 ರ ಮಾನ್ಸೂನ್ ಮುನ್ಸೂಚನೆಯನ್ನು ಎಲ್ಪಿಎ ಯ 94%ಕ್ಕೆ ಪರಿಷ್ಕರಿಸಿದೆ. ತಿಂಗಳಿನ ಆಧಾರದ ಮೇಲೆ ಮಾನ್ಸೂನ್ ಮುನ್ಸೂಚನೆ ಈ ರೀತಿ ಇದೆ (ದೋಷ ಮಾರ್ಜಿನ್ +/-4% ಎಂದು ಊಹಿಸಿಕೊಂಡು)
ಆಗಸ್ಟ್ -80% LPA (ಆಗಸ್ಟ್LPA = 258.2 mm)
ಸೆಪ್ಟೆಂಬರ್ -100% LPA (ಸೆಪ್ಟೆಂಬರ್LPA=170.2ಮಿಮೀ)
ಸ್ಕೈಮೆಟ್ನ ಲೆಕ್ಕಾಚಾರಗಳ ಪ್ರಕಾರ (+/-4%ನಷ್ಟುದೋಷ ಮಾರ್ಜಿನ್ಊಹಿಸಿ), 2021ರಸಮಯದಲ್ಲಿಮಾನ್ಸೂನ್ ಅಪಾಯವು ಈ ಕೆಳಗಿನಂತಿದೆ:
ಸ್ಕೈಮೆಟ್ ಹವಾಮಾನ ಕುರಿತು
ಸ್ಕೈಮೆಟ್ ಹವಾಮಾನ ಸಂಸ್ಥೆಯು ಭಾರತದ ಅತಿದೊಡ್ಡ ಹವಾಮಾನ ಮೇಲ್ವಿಚಾರಣೆ ನಡೆಸುವ ಹಾಗೂ ಕೃಷಿ-ಅಪಾಯ ಪರಿಹಾರ ಕಂಪನಿಯಾಗಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಖಾಸಗಿ ಹವಾಮಾನ ಮುನ್ಸೂಚನೆ ಏಜೆನ್ಸಿಯಾದ ಸ್ಕೈಮೆಟ್ ಅನ್ನು 2003 ರಲ್ಲಿ ಸ್ಥಾಪಿಸಲಾಯಿತು ಹಾಗೂ ಈ ಸಂಸ್ಥೆ ವಿಶ್ವಾಸಾರ್ಹ ಹಾಗೂ ಸುಲಭಸಾಧ್ಯವಾದ ಹವಾಮಾನ ಮುನ್ಸೂಚನೆಗಳನ್ನು ಒದಗಿಸುವುದರಲ್ಲಿ ಖ್ಯಾತನಾಮವಾಗಿದೆ.
ಸ್ಕೈಮೆಟ್ ತನ್ನದೇ ಆದ ಸಂಖ್ಯಾತ್ಮಕ ಹವಾಮಾನ ಮುನ್ಸೂಚನೆ ಮಾದರಿಗಳನ್ನು ನಿರ್ವಹಿಸುತ್ತದೆ ಹಾಗೂ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ವಿದ್ಯುತ್ ಕಂಪನಿ, ಮಾಧ್ಯಮ ಸಮೂಹಗಳು, ರೈತರ ನವೀನ ಮಾದರಿಯ ಸೇವೆಗಳಿಗೆ, ಕೃಷಿ ಒಳಹರಿವಿನ ಉತ್ಪಾದಕರಿಗೆ ಹವಾಮಾನ ಮುನ್ಸೂಚನೆ ವಿವರಗಳನ್ನು ನೀಡಲು ಇದು ಹೊಸ ಮಾದರಿಯ ನವೀನತೆಯನ್ನು ಬಳಸುತ್ತದೆ. ಸುದೀರ್ಘ ಮಾನ್ಸೂನ್ ಹವಾಮಾನ ಮುನ್ಸೂಚನೆ, ಉಪಗ್ರಹ ನಿಯಂತ್ರಕ ಸೆನ್ಸಿಂಗ್ ತಂತ್ರಜ್ಞಾನಗಳು ಹಾಗೂ ಮಾನವರಹಿತ ವಾದ ವೈಮಾನಿಕ ವಾಹನಗಳಿಗೆ ಅಭಿವೃದ್ಧಿ ಬಳಕೆಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ