Monkeypox: ಮಂಕಿಪಾಕ್ಸ್ ರೋಗ ಉಲ್ಬಣ: ಇದನ್ನು ತಡೆಯಲು WHO ಹೇಳಿದ್ದೇನು?

ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ರೋಗ ವ್ಯಾಪಕವಾಗುತ್ತಿದೆ. ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ವಿಶ್ವ ಆರೋಗ್ಯ ಸಂಸ್ಥೆಯ ಸಹ ಎಚ್ಚೆತ್ತುಕೊಳ್ಳುತ್ತಿದ್ದು, ಕೆಲವು ಕ್ರಮಗಳನ್ನು ಕೈಗೊಂಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಿನೀವಾ: ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ರೋಗ ವ್ಯಾಪಕವಾಗುತ್ತಿದೆ. ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳು (Monkeypox Cases) ಹೆಚ್ಚಾಗುತ್ತಿದ್ದಂತೆ, ವಿಶ್ವ ಆರೋಗ್ಯ ಸಂಸ್ಥೆಯ ಸಹ ಎಚ್ಚೆತ್ತುಕೊಂಡಿದ್ದೂ, ಕೆಲವು ಕ್ರಮಗಳನ್ನು (Precautions) ಕೈಗೊಂಡಿದೆ. ಇತ್ತೀಚೆಗೆ ಕಂಡುಬರುತ್ತಿರುವ ಹೆಚ್ಚಿನ ಹೊಸ ಪ್ರಕರಣಗಳು (New Cases) ಲೈಂಗಿಕತೆಯ ಮೂಲಕ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ರೋಗ (Disease) ಹರಡುವಿಕೆಯನ್ನು ನಿಯಂತ್ರಿಸಲು ನೈರ್ಮಲ್ಯ ಮತ್ತು ಸುರಕ್ಷಿತ ಲೈಂಗಿಕತೆ (Safe Intercourse) ಬಗ್ಗೆ ಜನರಿಗೆ ಮಾಹಿತಿ ನೀಡಿದೆ. ಮಂಕಿಪಾಕ್ಸ್ ಸೋಂಕಿನ ಉಲ್ಬಣವು ಮೇ ತಿಂಗಳ ಆರಂಭದಲ್ಲಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ (Africa) ದೇಶಗಳ ಹೊರಗೆ ವರದಿಯಾಗಿವೆ. 

ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಡಬ್ಲುಹೆಚ್ಒ
ಕಳೆದ ಶನಿವಾರ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಡಬ್ಲುಹೆಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೋಂಕಿನಿಂದ ರಕ್ಷಿಸಲು ಉತ್ತಮ ಮಾರ್ಗವೆಂದರೆ ರೋಗ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡುವುದು ಎಂದಿದ್ದರು. ಜೊತೆಗೆ ಪುರುಷರೊಂದಿಗೆ ಸಂಭೋಗಿಸುವ ಪುರುಷರಿಗೆ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವ, ಹೊಸ ಪಾಲುದಾರರೊಂದಿಗೆ ಲೈಂಗಿಕತೆಯನ್ನು ಮರುಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಅನುಸರಣೆಯನ್ನು ಸಕ್ರಿಯಗೊಳಿಸುವುದು ಸೇರಿ ಇತರೆ ಎಚ್ಚರಿಕೆ ಕ್ರಮಗಳ ಬಗ್ಗೆ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

78 ದೇಶಗಳಿಂದ ವಿಶ್ವ ಆರೋಗ್ಯ ಸಂಸ್ಥೆ 18,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಟೆಡ್ರೊಸ್ ಬುಧವಾರ ಹೇಳಿದ್ದಾರೆ. ಇವುಗಳಲ್ಲಿ ಯುರೋಪ್‌ನಲ್ಲಿ 70 ಪ್ರತಿಶತ ಪ್ರಕರಣಗಳು ಮತ್ತು ಅಮೆರಿಕದಲ್ಲಿ 25 ಪ್ರತಿಶತ ಪ್ರಕರಣಗಳು ದಾಖಲಾಗಿವೆ.

‘ಯಾರಿಗಾದರೂ ಮಂಗನ ಕಾಯಿಲೆ ಬರಬಹುದು’
ವಿಶ್ವ ಆರೋಗ್ಯ ಸಂಸ್ಥೆಯು ಯಾರೂ ಬೇಕಾದರೂ ಈ ಸೋಂಕಿಗೆ ಒಳಗಾಗಬಹುದು ಎಂದು ಎಚ್ಚರಿಸಿದೆ. ಮಕ್ಕಳು, ಗರ್ಭಿಣಿಯರು, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ. ಹೆಚ್ಚಾಗಿ ಲೈಂಗಿಕ ಕ್ರಿಯೆ ವಿಚಾರದಲ್ಲಿ ಸಾಕಷ್ಟು ಕಾಳಜಿವಹಿಸಲು ಒತ್ತಿ ಒತ್ತಿ ಹೇಳಲಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಸೇರಿದಂತೆ ಇತರ ದುರ್ಬಲ ಗುಂಪುಗಳಿಗೆ ಹರಡುವ ಅಪಾಯವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲು ದೇಶಗಳನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.

ಸೋಂಕಿತರಲ್ಲಿ ಶೇ. 98ರಷ್ಟು ಜನರು ಸಲಿಂಗಕಾಮಿಗಳು
ಕಳೆದ ವಾರ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೋಂಕಿತರಲ್ಲಿ ಶೇಕಡಾ 98 ರಷ್ಟು ಜನರು ಸಲಿಂಗಕಾಮಿ ಅಥವಾ ದ್ವಿಲಿಂಗಿ ಪುರುಷರು ಮತ್ತು 95 ಪ್ರತಿಶತ ಪ್ರಕರಣಗಳು ಲೈಂಗಿಕ ಚಟುವಟಿಕೆಯ ಮೂಲಕ ಹರಡುತ್ತವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

ಗುಳ್ಳೆಗಳ ದದ್ದುಗೆ ಕಾರಣವಾಗುವ ರೋಗದ ಪ್ರಸರಣವು ಮುಖ್ಯವಾಗಿ ನಿಕಟ, ದೈಹಿಕ ಸಂಪರ್ಕದ ಸಮಯದಲ್ಲಿ ಸಂಭವಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಜೊತೆಗೆ ಇದು ಚರ್ಮದ ಸಂಪರ್ಕದ ಮೂಲಕ ಅಥವಾ ಮನೆಯ ವ್ಯವಸ್ಥೆಯಲ್ಲಿ ಕಲುಷಿತ ಹಾಸಿಗೆ ಅಥವಾ ಟವೆಲ್‌ಗಳನ್ನು ಸ್ಪರ್ಶಿಸುವ ಮೂಲಕ ಹರಡುತ್ತದೆ ಎಂದು ಒತ್ತಿಹೇಳುತ್ತಾರೆ.

ಗಮನಿಸಬೇಕಾದ ರೋಗಲಕ್ಷಣಗಳ ಬಗ್ಗೆ ಮಾಹಿತಿಯನ್ನು ಹರಡುವುದು ಮತ್ತು ತ್ವರಿತವಾಗಿ ಬೇರೆಯವರಿಂದ ಅಂತರ ಕಾಪಾಡಿಕೊಳ್ಳುವುದು, ಪರೀಕ್ಷೆಗಳು ಮತ್ತು ಔಷಧಿಗಳಿಗೆ ಪ್ರವೇಶವನ್ನು ಒಳಗೊಂಡಂತೆ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇತರ ಕ್ರಮಗಳು ಸಹ ಅಗತ್ಯವಿದೆ ಎಂದು ಅವರು ಹೇಳಿದರು.

‘ಸಾಮೂಹಿಕ ವ್ಯಾಕ್ಸಿನೇಷನ್ ಅವಶ್ಯಕತೆ ಇಲ್ಲ’
ಪ್ರಕರಣಗಳ ಉಲ್ಬಣವನ್ನು ತಗ್ಗಿಸಲು ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಆದರೆ ರೋಗದಿಂದ ಬಳಲುತ್ತಿರುವವರಿಗೆ ಅಥವಾ ಆರೋಗ್ಯ ಕಾರ್ಯಕರ್ತರು ಮತ್ತು ಬಹು ಲೈಂಗಿಕ ಪಾಲುದಾರರನ್ನು ಒಳಗೊಂಡಂತೆ ಹೆಚ್ಚಿನ ಅಪಾಯದಲ್ಲಿರುವವರಿಗೆ ಉದ್ದೇಶಿತ ವ್ಯಾಕ್ಸಿನೇಷನ್ ಅನ್ನು ಶಿಫಾರಸು ಮಾಡಲಾಗಿದೆ. "ಈ ಸಮಯದಲ್ಲಿ, ಮಂಕಿಪಾಕ್ಸ್ ವಿರುದ್ಧ ಸಾಮೂಹಿಕ ಲಸಿಕೆಯನ್ನು ನಾವು ಶಿಫಾರಸು ಮಾಡುವುದಿಲ್ಲ" ಎಂದು ಟೆಡ್ರೊಸ್ ಹೇಳಿದ್ದಾರೆ.

ಇದನ್ನೂ ಓದಿ: Explained: ಕೋವಿಡ್‌ನಂತೆ ಭಾರತವನ್ನೂ ಕಾಡಲಿದೆಯಾ ಮಂಕಿಪಾಕ್ಸ್? ಈ ಬಗ್ಗೆ ಆರೋಗ್ಯ ತಜ್ಞರು ಏನಂತಾರೆ?

ಸಿಡುಬು ಮತ್ತು ಮಂಕಿಫಾಕ್ಸ್ ರೋಗ ಬಹುತೇಕ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಸಿಡುಬಿಗೆ ನೀಡುತ್ತಿದ್ದ ಲಸಿಕೆಯನ್ನೇ ಮಂಕಿಫಾಕ್ಸ್ ಪೀಡಿತರಿಗೆ ನೀಡಲಾಗುತ್ತಿದೆ. ಆದರೆ ಈ ಲಸಿಕೆಯ ಫಲಿತಾಂಶ ವಿಳಂಬವಾಗಿದೆ ಎನ್ನುತ್ತಾರೆ ತಜ್ಞರು ಟೆಡ್ರೊಸ್ "ಲಸಿಕೆಯು ಸೋಂಕು ಅಥವಾ ರೋಗದ ವಿರುದ್ಧ ತ್ವರಿತ ರಕ್ಷಣೆ ನೀಡುವುದಿಲ್ಲ ಮತ್ತು ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು" ಎಂದು ತಿಳಿಸಿದ್ದಾರೆ.
Published by:Ashwini Prabhu
First published: