• Home
  • »
  • News
  • »
  • national-international
  • »
  • Monkeypox: ಮಕ್ಕಳನ್ನೂ ಕಾಡುತ್ತಿದೆ ಮಂಕಿಪಾಕ್ಸ್, ಅಂಬೆಗಾಲಿಡುವ ಮಗುವಲ್ಲೂ ಪತ್ತೆಯಾಯ್ತು ಸೋಂಕು!

Monkeypox: ಮಕ್ಕಳನ್ನೂ ಕಾಡುತ್ತಿದೆ ಮಂಕಿಪಾಕ್ಸ್, ಅಂಬೆಗಾಲಿಡುವ ಮಗುವಲ್ಲೂ ಪತ್ತೆಯಾಯ್ತು ಸೋಂಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೋಂಕಿತ ಮಕ್ಕಳಿಬ್ಬರೂ ಆರೋಗ್ಯದಿಂದ ಇದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರಿಗೂ ಮನೆಯವರಿಂದಲೇ ಸೋಂಕು ತಗುಲಿರುವ ಶಂಕೆ ಇದ್ದು, ಈ ಬಗ್ಗೆ ಆರೋಗ್ಯಾಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

  • Share this:

ಅಮೆರಿಕಾ: ಮಂಕಿಪಾಕ್ಸ್ (Monkeypox) ಅಬ್ಬರ ಮತ್ತಷ್ಟು ಜಾಸ್ತಿಯಾಗುತ್ತಿದೆ. ಈಗಾಗಲೇ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆಯ (Monkeypox dieses) ಸೋಂಕು (Infection) ಉಲ್ಬಣಿಸುತ್ತಿದೆ. ಇತ್ತ ಭಾರತದಲ್ಲೂ (India) ಮಂಕಿಪಾಕ್ಸ್ ಆತಂಕ ಶುರುವಾಗಿದ್ದು, 3 ಪ್ರಕರಣ (Monkeypox Case) ಈಗಾಗಲೇ ದೃಢಪಟ್ಟಿದೆ. ಈ ಮೂರೂ ಪ್ರಕರಣಗಳೂ ಕೇರಳದಲ್ಲೇ (Kerala) ಪತ್ತೆಯಾಗಿದೆ. ಇನ್ನು ಮಂಕಿಪಾಕ್ಸ್ ಸೋಂಕು ಮಕ್ಕಳಿಗೆ ಕೊರೋನಾ ಸೋಂಕಿಗಿಂತ ಡೇಂಜರ್ ಆಗಬಹುದು (Danger for Children) ಅಂತ ವರದಿಯೊಂದು (Report) ಹೇಳಿತ್ತು. ಈ ಆತಂಕಕಾರಿ ವರದಿ ಬೆನ್ನಲ್ಲೇ ಅಮೆರಿಕಾದಲ್ಲಿ (America) ಮಗುವಿಗೆ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢವಾಗಿದೆ. ಆಘಾತಕಾರಿ ವಿಚಾರ ಅಂದ್ರೆ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿರುವ ಮಗು ಇನ್ನೂ ಅಂಬೆಗಾಲು ಇಡುತ್ತಿರುವ ಮಗು ಎನ್ನಲಾಗಿದೆ.


 ಅಂಬೆಗಾಲಿಡುವ ಮಗುವಿಗೂ ಮಂಕಿಪಾಕ್ಸ್ ಸೋಂಕು


ಅಮೆರಿಕದಲ್ಲಿ ಅಂಬೆಗಾಲಿಡುತ್ತಿರುವ ಹಾಲುಗಲ್ಲದ ಕಂದಮ್ಮನಿಗೆ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢಪಟ್ಟಿದೆ. ಅಂಬೆಗಾಲಿಡುವ ಮಗುವಿಗೆ ಮಂಕಿಪಾಕ್ಸ್ ರೋಗ ಲಕ್ಷಣ ತೋರಿಬಂದಿತ್ತು. ಅದರ ಸ್ಯಾಂಪಲ್ಸ್‌ ಅನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಮಗುವಿನಲ್ಲಿ ಮಂಕಿಪಾಕ್ಸ್ ಸೋಂಕು ಇರೋದು ದೃಢವಟ್ಟಿದೆ.


ಅಮೆರಿಕದಲ್ಲಿರುವ ವಿದೇಶಿ ಮಗುವಿಗೂ ಸೋಂಕು ದೃಢ


ಮತ್ತೊಂದು ಕೇಸ್‌ನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಮತ್ತೊಂದು ಮಗುವಿಗೂ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢಪಟ್ಟಿದೆ. ಯುಎಸ್ ನಿವಾಸಿಯಲ್ಲದ ಆದರೆ ವಾಷಿಂಗ್ಟನ್ ಡಿಸಿಯಲ್ಲಿದ್ದಾಗ ಪರೀಕ್ಷಿಸಲ್ಪಟ್ಟ ಮಗು ಇದಾಗಿದ್ದು, ಸೋಂಕು ಇರುವುದು ಕನ್ಫರ್ಮ್ ಆಗಿದೆ.


ಇದನ್ನೂ ಓದಿ: Monkeypox V/s Marburg Virus: ಮಾನವರಿಗೆ ಯಾವುದು ಮಾರಣಾಂತಿಕ? ಮಂಕಿಪಾಕ್ಸ್ ಅಥವಾ ಮಾರ್ಬರ್ಗ್?


ಸದ್ಯ ಆರೋಗ್ಯದಿಂದ ಇರುವ ಸೋಂಕಿತ ಮಕ್ಕಳು


ಸದ್ಯ ಸೋಂಕಿತ ಮಕ್ಕಳಿಬ್ಬರೂ ಆರೋಗ್ಯದಿಂದ ಇದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರಿಗೂ ಮನೆಯವರಿಂದಲೇ ಸೋಂಕು ತಗುಲಿರುವ ಶಂಕೆ ಇದ್ದು, ಈ ಬಗ್ಗೆ ಆರೋಗ್ಯಾಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.


ಅಮೆರಿಕದಲ್ಲಿ ಹೆಚ್ಚುತ್ತಿದೆ ಮಂಕಿಪಾಕ್ಸ್ ಆತಂಕ


ಎರಡು ಮಕ್ಕಳ ಪ್ರಕರಣಗಳ ಜೊತೆಗೆ, ಇದುವರೆಗೆ ಅಮೆರಿಕದಲ್ಲಿ 2,500 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಕನಿಷ್ಠ ಎಂಟು ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ ಅಂತ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.


ಮಂಕಿಪಾಕ್ಸ್‌ನಿಂದ ಇದುವರೆಗೂ 60ಕ್ಕೂ ಹೆಚ್ಚು ಮಂದಿ ಸಾವು


ಮಂಕಿಪಾಕ್ಸ್ ಇದೀಗ ಜಗತ್ತಿನಾದ್ಯಂತ ವೇಗವಾಗಿ ಹಬ್ಬುತ್ತಿದೆ. ಈ ವರ್ಷ ಇಲ್ಲಿಯವರೆಗೆ, 60 ಕ್ಕೂ ಹೆಚ್ಚು ದೇಶಗಳಲ್ಲಿ 14,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಮತ್ತು ಆಫ್ರಿಕಾದಲ್ಲಿ ಐದು ಸಾವುಗಳು ಸಂಭವಿಸಿವೆ ಅಂತ ವರದಿಗಳು ತಿಳಿಸಿವೆ.


ಸಿಡುಬು ರೋಗ ಔಷಧಿಯೇ ಮಂಕಿಪಾಕ್ಸ್‌ಗೆ ಬಳಸಬಹುದೇ?


ಸಿಡುಬಿನ ತಡೆಗಟ್ಟುವಿಕೆಗಾಗಿ 2013 ರಿಂದ EU ನಲ್ಲಿ ಔಷಧವನ್ನು ಅನುಮೋದಿಸಲಾಗಿದೆ. ಇದು ಸಿಡುಬು ವೈರಸ್‌ಗೆ ಸಂಬಂಧಿಸಿದ 'ಮಾರ್ಪಡಿಸಿದ ವ್ಯಾಕ್ಸಿನಿಯಾ ವೈರಸ್ ಅಂಕಾರಾ' ಎಂಬ ವ್ಯಾಕ್ಸಿನಿಯಾ ವೈರಸ್‌ನ ದುರ್ಬಲಗೊಂಡ ರೂಪವನ್ನು ಹೊಂದಿದೆ. ಮಂಕಿಪಾಕ್ಸ್ ವೈರಸ್ ಮತ್ತು ಸಿಡುಬು ವೈರಸ್ ನಡುವಿನ ಹೋಲಿಕೆಯಿಂದಾಗಿ ಇದನ್ನು ಮಂಕಿಪಾಕ್ಸ್‌ಗೆ ಸಂಭಾವ್ಯ ಲಸಿಕೆ ಎಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: Monkeypox ಸೋಂಕು ಇವರಿ'ಗೇ' ಜಾಸ್ತಿ ಬರೋದಾ? ಸಂಚಲನ ಮೂಡಿಸಿದ WHO ರಿಪೋರ್ಟ್


ಭಾರತದಲ್ಲಿ 3ನೇ ಮಂಕಿಪಾಕ್ಸ್ ಕೇಸ್


ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ (India's 3rd Monkeypox case) ಖಚಿತವಾಗಿದೆ. 3ನೇ ಮಂಕಿಪಾಕ್ಸ್ ಪ್ರಕರಣವೂ ಕೇರಳದಲ್ಲೇ (Kerala Monkeypox Case) ದೃಢಪಟ್ಟಿದೆ. UAEಯಿಂದ ಮಲಪ್ಪುರಂಗೆ ಜುಲೈ 6ರಂದು ಹಿಂತಿರುಗಿದ್ದ ಕೇರಳದ 35 ವರ್ಷದ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಸಹ ಕೇರಳದಲ್ಲಿಯೇ ಭಾರತದ ಮೊದಲ ಎರಡು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದವು. ಇದೀಗ 3ನೇ ಪ್ರಕರಣವೂ ಕೇರಳದಲ್ಲೇ ಖಚಿತಪಟ್ಟಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

Published by:Annappa Achari
First published: