Monkeypox: ಕೊರೊನಾಗಿಂತ ಮಂಕಿಪಾಕ್ಸ್ ಮಕ್ಕಳಿಗೆ ಹೆಚ್ಚು ಡೇಂಜರ್, ಏಮ್ಸ್​​ನಿಂದ ಎಚ್ಚರಿಕೆ!

ಕೊರೊನಾ ವೈರಸ್‍ಗಿಂತ ಮಂಕಿಪಾಕ್ಸ್ ವೈರಸ್ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಏಮ್ಸ್ ವೈದ್ಯರು ಎಚ್ಚರಿಸಿದ್ದಾರೆ. ಮಕ್ಕಳಿಗೆ ಮಂಕಿಪಾಕ್ಸ್ ಮಾರಕವಾಗಬಹುದು ಎಚ್ಚರದಿಂದ ಇರಿ ಎಂದಿದ್ದಾರೆ. ಜ್ವರ ಕಾಣಿಸಿಕೊಂಡ ತಕ್ಷಣವೇ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಹೋಗಿ ಎಂದು ಸೂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Corona) ವೈರಸ್ 2 ವರ್ಷಕ್ಕಿಂತ ಹೆಚ್ಚು ಕಾಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಿಂದಾದ ಸಾವು-ನೋವುಗಳನ್ನು ಮರೆಯುವಂತಿಲ್ಲ. ಆ ಲಾಕ್‍ಡೌನ್‍ನಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ವು. ಈಗಲೂ ಹೊಸದಾಗಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಕೊರೊನಾ ಮಕ್ಕಳಿಗೆ ಬಂದ್ರೆ ತುಂಬಾ ಅಪಾಯ ಅಂತ ಎಷ್ಟೋ ವೈದ್ಯರು ಸಹ ಹೇಳಿದ್ರು. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಹೇಳಿದ್ರು. ಆದ್ರೆ ಈಗ ಏಮ್ಸ್ (AIMS) ವೈದ್ಯರು (Doctors) ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ವೈರಸ್‍ಗಿಂತ ಮಂಕಿಪಾಕ್ಸ್ (Monkey pox) ವೈರಸ್ ಮಕ್ಕಳಿಗೆ ಹೆಚ್ಚು ಅಪಾಯಕಾರಿ (Dangerous) ಎಂದು ಎಚ್ಚರಿಸಿದ್ದಾರೆ. ಮಕ್ಕಳಿಗೆ ಮಂಕಿಪಾಕ್ಸ್ ಮಾರಕವಾಗಬಹುದು ಎಚ್ಚರದಿಂದ ಇರಿ ಎಂದಿದ್ದಾರೆ.

ಮುದ್ದು ಮಕ್ಕಳಿಗೆ ಮಾರಕ ಮಂಕಿಪಾಕ್ಸ್!
ಪುಟ್ಟ ಮಕ್ಕಳನ್ನು ಎಷ್ಟೇ ಸುರಕ್ಷಿತವಾಗಿ ನೋಡಿಕೊಂಡ್ರು, ಆಗಾಗ ಜ್ವರ, ಶೀತ, ಕೆಮ್ಮು ಅಂತ ಕಾಯಿಲೆ ಬೀಳುತ್ತಲೇ ಇರುತ್ತಾರೆ. ಮಕ್ಕಳಿಗೆ ಜ್ವರ ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಯಾಕಂದ್ರೆ ಮಂಕಿಪಾಕ್ಸ್ ವೈರಸ್ ನಿಮ್ಮ ಮಕ್ಕಳನ್ನು ಕಾಡಬಹುದು. ಮಂಕಿಪಾಕ್ಸ್ ಮಕ್ಕಳಿಗೆ ಬಂದ್ರೆ ತುಂಬಾ ಡೇಂಜರ್. ಅದು ನಿಮ್ಮ ಮಕ್ಕಳಿಗೆ ಮಾರಕವಾಗಬಹುದು ಎಂದು ಏಮ್ಸ್ ಎಚ್ಚರಿಕೆ ನೀಡಿದೆ.

ಮಂಕಿಪಾಕ್ಸ್ ಗುಣ ಲಕ್ಷಣಗಳೇನು?
ಮೊದಲು ಶೀತ, ಜ್ವರ ಬರುತ್ತೆ. ಜ್ವರ ಮೂರ್ನಾಲು ದಿನವಾದ್ರೂ ಹೋಗಲ್ಲ. ನಂತರ ತಲೆನೋವು, ಸ್ನಾಯು ಸೆಳೆತ, ಊತ, ಚರ್ಮದ ಮೇಲೆ ಗುಳ್ಳೆಗಳು ಹೇಳುತ್ತವೆ. ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳಲ್ಲಿ ಊತವನ್ನು ಉಂಟುಮಾಡಿ, ಅಂಗೈ, ಪಾದಗಳು ಮತ್ತು ನಿಮ್ಮ ಬಾಯಿಯ ಒಳಭಾಗವನ್ನು ಒಳಗೊಂಡಂತೆ ದೇಹದ ಮೇಲೆ ವ್ಯಾಪಕವಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ದ್ರವದಿಂದ ತುಂಬಿದ್ದು, ತುಂಬಾ ನೋವು ಕೊಡುತ್ತವೆ. ಗುಳ್ಳೆಗಳ ಸುತ್ತಲೂ ಕೆಂಪಾಗುತ್ತದೆ.

ಇದನ್ನೂ ಓದಿ: Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್

ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಮಕ್ಕಳಿಗೆ ಕೋವಿಡ್‍ಗಿಂತ ಈ ಮಂಕಿಪಾಕ್ಸ್ ವೈರಸ್ ಅಪಾಯಕಾರಿಯಾಗಿದೆ. ವಯಸ್ಕರು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಭಾರತದಲ್ಲಿ ಮಂಕಿಪಾಕ್ಸ್ ಹಡುವಿಕೆ ಪ್ರಮಾಣ ಕಡಿಮೆ. ಜ್ವರ ಕಾಣಿಸಿಕೊಂಡ ತಕ್ಷಣವೇ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಹೋಗಿ ಎಂದು ಏಮ್ಸ್‍ನ ಮೆಡಿಸಿನ್ ಅಡಿಷನಲ್ ಪ್ರೋಫೆಸರ್ ಪಿಯೂಷ್ ರಂಜನ್ ಹೇಳಿದ್ದಾರೆ.

ಪ್ರಾಣಿಗಳಿಂದಲೂ ಮನುಷ್ಯರಿಗೆ ಮಂಕಿಪಾಕ್ಸ್ ಹರಬಹುದು
60 ದೇಶದಲ್ಲಿ 6 ಸಾವಿರ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಈ ವೈರಸ್‍ಗೆ 3 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಅದರಲ್ಲೂ ಕೇರದಲ್ಲಿ ಒಂದು ಮಂಕಿಪಾಕ್ಸ್ ಕೇಸ್ ವರದಿಯಾಗಿದೆ. ಕೇರಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದು ಪ್ರಾಣಿಗಳಿಂದಲೂ ಮನುಷ್ಯರಿಗೆ ಹಬ್ಬಬಹುದು.

ಕೇರದಲ್ಲಿ ಹೈ ಅಲರ್ಟ್
ಕೇರಳದಲ್ಲಿ ವ್ಯಕ್ತಿಯೊಬ್ಬನಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿವೆ. ಮಂಕಿಪಾಕ್ಸ್ ಪತ್ತೆಯಾಗಿರುವ ವ್ಯಕ್ತಿಯು ಯುಎಇ ಯಿಂದ ವಾಪಸ್ ಬಂದ ಮೇಲೆ ಈ ವೈರಸ್ ಕಾಣಿಸಿಕೊಂಡಿದೆ. ಆದ್ದರಿಂದ ಕೇರಳದಲ್ಲಿ ಹೈಅಲರ್ಟ್ ಘೋಷಿದ್ದಾರೆ. ತಿರುವನಂತಪುರಂ, ಕೊಲ್ಲಂ, ಪಟಣಂತಿಟ್ಟ, ಆಲಪುಝ ಹಾಗೂ ಕೊಟಯಂ ಜಿಲ್ಲೆಗಳಿಗಲ್ಲಿ ಅಲರ್ಟ್ ಘೋಷಿಸಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ.

ಸೋಂಕಿತರ ಬಗ್ಗೆ ನಿಗಾವಹಿಸಿ
ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ರೋಗದ ಮಾದರಿಯನ್ನು ಸಂಗ್ರಹಿಸಿ ತಕ್ಷಣ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತ ಪ್ರದೇಶಗಳಲ್ಲಿ ಸದಾ ನಿಗಾ ವಹಿಸಲು ಹಾಗೂ ಚಿಕಿತ್ಸೆ ವೇಳೆ ವೈದ್ಯರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Published by:Savitha Savitha
First published: