Moneycontrol; ಬಜೆಟ್​ ದಿನದ ಪ್ರಸಾರ; ನಂ1 ಡಿಜಿಟಲ್ ತಾಣವಾಗಿ ಹೊಸ ದಾಖಲೆ ಬರೆದ ಮನಿಕಂಟ್ರೋಲ್​

ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು, ಓದುಗರು ಮತ್ತು ಪ್ರಾಯೋಜಕರು ಮನಿಕಂಟ್ರೋಲ್​ ಡಿಜಿಟಲ್ ಮಾಧ್ಯಮದ ಮೇಲೆ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ದೇಶದ 2021-22ನೇ ಸಾಲಿನ ವಾರ್ಷಿಕ ಬಜೆಟ್​ ಅನ್ನು ಮಂಡಿಸಿದ್ದರು. ಈ ವೇಳೆ ಭಾರತದಾದ್ಯಂತದ ಜನರು ನವೀಕೃತ ಮಾಹಿತಿ ಮತ್ತು ತ್ವರಿತ ಸ್ಪಷ್ಟತೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಮೈಕ್ರೋಸೈಟ್‌ಗೆ ಭೇಟಿ ನೀಡಿದ್ದರಿಂದ ಮನಿಕಾಂಟ್ರೋಲ್‌ನ ಬಜೆಟ್-ದಿನದ ಪ್ರಸಾರವು ಹಿಂದಿನ ಎಲ್ಲಾ ಡಿಜಿಟಲ್ ಟ್ರಾಫಿಕ್ ದಾಖಲೆಗಳನ್ನು ಮುರಿದಿದೆ. ಹೀಗಾಗಿ ಮನಿಕಂಟ್ರೋಲ್​ ಇದೀಗ ನಂಬರ್​01 ಡಿಜಿಟಲ್​ ಮಾಧ್ಯಮವಾಗಿ ಹೊಸ ದಾಖಲೆ ನಿರ್ಮಿಸಿದೆ.

  ಭಾರತದ ಪ್ರಮುಖ ಹಣಕಾಸು ಸುದ್ದಿ ವೇದಿಕೆಯಾದ ಮನಿಕಾಂಟ್ರೋಲ್ ಗೆ ಇತ್ತೀಚೆಗೆ ಅಧಿಕ ಸಂಖ್ಯೆಯಲ್ಲಿ ಓದುಗರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮನಿ ಕಂಟ್ರೋಲ್​ ಓದುಗರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೇಂದ್ರ ಬಜೆಟ್‌ನ ಅತ್ಯಂತ ವಿಸ್ತಾರವಾದ ಮತ್ತು ನೈಜ-ಸಮಯದ ಪ್ರಸಾರಕ್ಕಾಗಿ ಮನಿ ಕಂಟ್ರೋಲ್ ಓದುಗರ ಮೊದಲ ಆಯ್ಕೆಯ ತಾಣವಾಗಿದೆ.

  ಮನಿಕಾಂಟ್ರೋಲ್ ತನ್ನ ಪ್ರತಿಸ್ಪರ್ಧಿಗಳಾದ ದಿ ಎಕನಾಮಿಕ್ ಟೈಮ್ಸ್, ಲೈವ್‌ಮಿಂಟ್ ಮತ್ತು ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ಗಳಿಗಿಂತ ಕ್ರಮವಾಗಿ ಶೇ.21, ಶೇ.77 ಮತ್ತು ಶೇ.108 ರಷ್ಟು ಹೆಚ್ಚುವರಿ ಬಳಕೆದಾರರನ್ನು ಹೊಂದಿದೆ. ಇದೇ ರೀತಿ ವೆಬ್‌ನ ಮಾಹಿತಿಯ ಪ್ರಕಾರ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮನಿಕಂಟ್ರೋಲ್ ಅತ್ಯಂತ ಹೆಚ್ಚು ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮ ಎಂಬುದು ಓದುಗರ ಅಭಿಪ್ರಾಯವಾಗಿದೆ. ಅಲ್ಲದೆ, ಮನಿಕಂಟ್ರೋಲ್ ಸ್ಪರ್ಧೆಗಿಂತ ಹೆಚ್ಚಿನ ಸಂಖ್ಯೆಯ ಪ್ರಾಯೋಜಕರನ್ನೂ ದಾಖಲಿಸಿರುವುದು ವಿಶೇಷ.

  ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು, ಓದುಗರು ಮತ್ತು ಪ್ರಾಯೋಜಕರು ಮನಿಕಂಟ್ರೋಲ್​ ಡಿಜಿಟಲ್ ಮಾಧ್ಯಮದ ಮೇಲೆ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಈ ವಿಚಾರ  ಕೇಂದ್ರ ಬಜೆಟ್ 2021 ರ ಆಳವಾದ ಒಳನೋಟಗಳಿಂದ ಮತ್ತೆ ಬೆಂಬಲಿತವಾಗಿದೆ.

  ಇದನ್ನೂ ಓದಿ: ಬಂಗಾಳದಲ್ಲಿ 6-7 ಹಂತ, ತಮಿಳುನಾಡು-ಕೇರಳಕ್ಕೆ ಒಂದೇ ಹಂತದಲ್ಲಿ ಚುನಾವಣೆ; ಫೆ.15ರ ನಂತರ ಅಂತಿಮ ಘೋಷಣೆ

  ಸರಿಯಾದ ಸಮಯದಲ್ಲಿ ನೈಜ ವಿಶ್ಲೇಷನೆ ನೀಡುವ ಕಾರಣದಿಂದಾಗಿಯೇ ಓದುಗರು ಮನಿಕಂಟ್ರೋಲ್​ ಲೈವ್​ ಅಪ್ಡೇಟ್​ ಬ್ಲಾಗ್​ಗೆ ಭೇಟಿ ನೀಡುತ್ತಾರೆ. ಮನಿಕಾಂಟ್ರೋಲ್‌ನ ಹಿರಿಯ ಸಂಪಾದಕರ ತಂಡ, ಆಂತರಿಕ ವಿಶ್ಲೇಷಕರು, ಥಿಂಕ್-ಟ್ಯಾಂಕ್‌ಗಳು ಮತ್ತು ಹಣಕಾಸು ತಜ್ಞರು ಬಜೆಟ್ ಆರಂಭವಾಗುತ್ತಿದ್ದಂತೆ ಜನರಿಗೆ ಸ್ಪಷ್ಟವಾಗಿ ಅದನ್ನು ವಿವರಿಸಿದ್ದಾರೆ. ಈ ವರ್ಷದ ಬಜೆಟ್ ದಿನದ ಒಂದು ವಿಶಿಷ್ಟ ಲಕ್ಷಣವೆಂದರೆ ಸ್ಮಾರ್ಟ್ ವಿಷುಯಲ್ ಕಾರ್ಡ್‌ಗಳ ಪ್ರದರ್ಶನವಾಗಿದ್ದು, ಇದು ಆರ್ಥಿಕತೆಯ ಪ್ರತಿಯೊಂದು ಪ್ರಮುಖ ವಲಯದ ಬಗ್ಗೆ ಬಜೆಟ್‌ನ ಕ್ರಮಗಳ ಬಗ್ಗೆ ನವೀಕೃತ ಮಾಹಿತಿಯನ್ನು ಓದುಗರಿಗೆ ನೀಡುವಲ್ಲಿ ಸಫಲವಾಗಿತ್ತು.

  ಮನಿಕಂಟ್ರೋಲ್​ನ ಕಾರ್ಯ ನಿರ್ವಾಹಕ ಸಂಪಾದಕ ಬಿನೊಯ್ ಪ್ರಭಾಕರ್ ಈ ಕುರಿತು ಮಾತನಾಡಿದ್ದು, "ಕೇಂದ್ರd ಬಜೆಟ್ ಪ್ರತಿವರ್ಷ ಭಾರತದ ಅತಿದೊಡ್ಡ ಹಣಕಾಸು ಕಾರ್ಯಕ್ರಮವಾಗಿದೆ. ಈ ವೇಳೆ ಮನಿಕಾಂಟ್ರೋಲ್​ಮ ಪತ್ರಕರ್ತರು, ವಿನ್ಯಾಸಕರು, ಉತ್ಪನ್ನ ವ್ಯವಸ್ಥಾಪಕರು ಮತ್ತು ಎಂಜಿನಿಯರ್‌ಗಳ ತಂಡವು ನಮ್ಮ ಓದುಗರಿಗೆ ವಿಶಿಷ್ಟ ಅನುಭವವನ್ನು ನೀಡಲು ಸಹಕರಿಸಿದೆ. ನಮ್ಮ ಆಳವಾದ ವಿಶ್ಲೇಷಣೆ ಮತ್ತು ಅಮೂಲ್ಯವಾದ ವ್ಯಾಖ್ಯಾನಕ್ಕಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಓದುಗರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದ್ದಕ್ಕಾಗಿ ನಾನು ಸಂತೋಷಪಡುತ್ತೇನೆ” ಎಂದು ತಿಳಿಸಿದ್ದಾರೆ.
  Published by:MAshok Kumar
  First published: