Money Laundering Case: ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಬಂಧನ

ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂಧಿಸಲಾಗಿದೆ

ನವಾಬ್​ ಮಲ್ಲಿಕ್

ನವಾಬ್​ ಮಲ್ಲಿಕ್

 • Share this:
  ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್ (Navab Mallik)​ ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದ್ದಂತೆ ಎನ್​ಸಿಪಿ ನಾಯಕರನ್ನು (NCP Leader) ವಶಕ್ಕೆ ಪಡೆಯಲಾಗಿದೆ. ಮುಂಬೈ ಭೂಗತ ಲೋಕ, ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಗೆ ಬಂಧಿಸಲಾಗಿದೆ.  ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ

  ಇತ್ತೀಚೆಗಷ್ಟೇ ಇಡಿ ಹಲವು ದಾಳಿಗಳನ್ನು ನಡೆಸಿದ್ದು, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ವಶಕ್ಕೆ ಪಡೆದಿತ್ತು. ಮೂಲಗಳ ಪ್ರಕಾರ, ನವಾಬ್ ಮಲಿಕ್ ಖರೀದಿಸಿದ ಆಸ್ತಿಗೆ ಸಂಬಂಧಿಸಿದ ಕೆಲವು ಪುರಾವೆಗಳು ನಡೆಯುತ್ತಿರುವ ತನಿಖೆಯ ಸಮಯದಲ್ಲಿ ಹೊರಬಂದಿವೆ.

  ಆಸ್ತಿ ಖರೀದಿಸಿದ್ದ ಮಲ್ಲಿಕ್​
  ದಾವೂದ್ ಇಬ್ರಾಹಿಂ ಅವರ ಕಿರಿಯ ಸಹೋದರಿ ಹಸೀನಾ ಪಾರ್ಕರ್ ಅವರ ಆಪ್ತ ಸಹಾಯಕಿ ಎಂದು ನಂಬಲಾದ ಸಲೀಂ ಪಾಟೀಲ್ ಎಂಬಾತನಿಂದ ಮಹಾರಾಷ್ಟ ಸಚಿವರು ಎಲ್​ಬಿಎಸ್​​ ಕುರ್ಲಾದಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಈ ಆಸ್ತಿಯನ್ನು ಅವರು ಸುಮಾರು 35 ರಿಂದ 40 ಲಕ್ಷ ರೂ.ಗೆ ಖರೀದಿಸಿದ್ದಾರೆ. ಆದರೆ ಆಸ್ತಿಯ ನೈಜ ಬೆಲೆ 4 ಕೋಟಿ ರೂ ಆಗಿದೆ ಎನ್ನಲಾಗಿದೆ.

  ಬಂಧನ ವಿರೋಧಿಸಿ ಪ್ರತಿಭಟನೆ

  ಮಲಿಕ್ ವಿಚಾರಣೆ ಸಂದರ್ಭದಲ್ಲಿ ದಕ್ಷಿಣ ಮುಂಬೈನ ಇಡಿ ಕಚೇರಿಯ ಸಮೀಪದಲ್ಲಿರುವ ಎನ್​ಸಿಪಿ ಪ್ರಧಾನ ಕಚೇರಿಯ ಬಳಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದು ಸೇಡಿನ ರಾಜಕಾರಣ ಎಂದು ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರು ಇಡಿ ಕಚೇರಿಗೆ ನುಗ್ಗಲ್ಲು ಯತ್ನಿಸಿದ್ದ ಕಾರ್ಯಕರ್ತರನ್ನು ತಡೆದರು. ಈ ವೇಳೆ ಅಲ್ಲಿಯೇ ಅವರು ಪ್ರತಿಭಟನೆಗೆ ಮುಂದಾದರು

  ಇದನ್ನು ಓದಿ: ಕತ್ತಲಲ್ಲಿ ಮುಳುಗಿದ Chandigarh; ಮೊಬೈಲ್​ ನೆಟ್​ವರ್ಕ್​, ನೀರು ಸೇರಿದಂತೆ ಅನೇಕ ಸೌಲಭ್ಯಗಳಿಲ್ಲದೇ ಪರದಾಟ

  ಧ್ವನಿ ಅಡಗಿಸಲು ಸಾಧ್ಯವಿಲ್ಲ
  ಘಟನೆ ಸಂಬಂಧ ಟ್ವೀಟ್​ ಮಾಡಿರುವ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ರು ಮಲಿಕ್ ಅವರ ಧ್ವನಿಯನ್ನು ಅಡಗಿಸಲು ಮಾಡಿರುವ ಒತ್ತಡದ ತಂತ್ರವಾಗಿದೆ ಇದು ಎಂದು ಆರೋಪಿಸಿದ್ದಾರೆ. ರಾಜಕೀಯ ಪಕ್ಷವೊಂದರ ಮುಖ್ಯ ವಕ್ತಾರರಾಗಿ ಕೆಲವರ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದರು. ಅವರ ಬಂಧನದ ಮೂಲಕ ಸತ್ಯದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡುವಂತಿಲ್ಲ! ಹೊಸ ನಿಯಮಕ್ಕೆ ಬೇಸತ್ತು ಬೀದಿಗಿಳಿದ ಮುಸ್ಲಿಂ ಮಹಿಳೆಯರು!

  ಅಧಿಕಾರ ದುರುಪಯೋಗ

  ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಮತ್ತು ರಾಜ್ಯ ಸಚಿವ ಜಯಂತ್ ಪಾಟೀಲ್, ಇದು ಅಧಿಕಾರದ ದುರುಪಯೋಗದ ಮತ್ತೊಂದು ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ಇಡಿ ಯಾವುದೇ ಸೂಚನೆ ನೀಡದೆ ಬೆಳಿಗ್ಗೆ 6 ಗಂಟೆಗೆ ಮಲಿಕ್ ನಿವಾಸವನ್ನು ತಲುಪಿದೆ. ಇಡಿ ತನ್ನದೇ ಪೊಲೀಸರನ್ನು ತನ್ನೊಂದಿಗೆ ಕರೆತಂದಿತ್ತು. ಕೆಲವರು ಉದ್ದೇಶಪೂರ್ವಕವಾಗಿ ಅವರಿಗೆ ತೊಂದರೆ ಕೊಡಲು ಪ್ರಯತ್ನಿಸುತ್ತಿರಬಹುದು. ಇಡಿ ಯಾವುದೇ ಪೂರ್ವ ಮಾಹಿತಿ ಇಲ್ಲದೆ ರಾಜ್ಯ ಸಚಿವರನ್ನು ತನಿಖೆಗೆ ಕರೆದೊಯ್ದಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದಿದ್ದಾರೆ.

  ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈ ತೀರದಲ್ಲಿ ಕ್ರೂಸ್ ಹಡಗಿನ ಮೇಲೆ ನಡೆದ ದಾಳಿಯಲ್ಲಿ 20 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಮೇಲೆ ಹಲವಾರು ಸೇವಾ ಸಂಬಂಧಿತ ತಪ್ಪುಗಳ ಆರೋಪಗಳನ್ನು ಮಲಿಕ್​ ಮಾಡಿದ್ದರು
  Published by:Seema R
  First published: