YES Bank Crisis | ಹಣ ಸುರಕ್ಷಿತವಾಗಿದೆ; ಹೂಡಿಕೆದಾರರಿಗೆ ಭರವಸೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಯೆಸ್​ ಬ್ಯಾಂಕ್ ವಹಿವಾಟಿನ ಮೇಲೆ ಆರ್​ಬಿಐ ಗುರುವಾರ ರಾತ್ರಿ ನಿಷೇಧ ಹೇರಿತ್ತು. ಮತ್ತು ಹೂಡಿಕೆದಾರರು ತಿಂಗಳಿಗೆ 50 ಸಾವಿರ ಹಣವನ್ನು ಮಾತ್ರ ಹಿಂಪಡೆಯಬಹುದು ಎಂದು ಮಿತಿ ಹೇರಿ, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ಸೀಡ್​ ಮಾಡಿದ ಮರುದಿನ ವಿತ್ತ ಸಚಿವರು ಈ ಹೇಳಿಕೆ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
    ನವದೆಹಲಿ: ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಹೂಡಿಕೆದಾರರ ಹಣ ಸುರಕ್ಷಿತವಾಗಿ. ಇದರಿಂದ ಯಾವ ಹೂಡಿಕೆದಾರರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಆರ್​ಬಿಐ ಗೌವರ್ನರ್ ನನಗೆ ಹೇಳಿದ್ದಾರೆ. ಆರ್​ಬಿಐ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಆರ್​ಬಿಐ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ನಾನೇ ಖುದ್ದಾಗಿ  ಆರ್​ಬಿಐ ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ. ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಯೆಸ್​ ಬ್ಯಾಂಕ್ ವಹಿವಾಟಿನ ಮೇಲೆ ಆರ್​ಬಿಐ ಗುರುವಾರ ರಾತ್ರಿ ನಿಷೇಧ ಹೇರಿತ್ತು. ಮತ್ತು ಹೂಡಿಕೆದಾರರು ತಿಂಗಳಿಗೆ 50 ಸಾವಿರ ಹಣವನ್ನು ಮಾತ್ರ ಹಿಂಪಡೆಯಬಹುದು ಎಂದು ಮಿತಿ ಹೇರಿ, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ಸೀಡ್​ ಮಾಡಿದ ಮರುದಿನ ವಿತ್ತ ಸಚಿವರು ಈ ಹೇಳಿಕೆ ನೀಡಿದ್ದಾರೆ.

    ಇದನ್ನು ಓದಿ: YES Bank Crisis: ಗಾಬರಿ ಬಿದ್ದ ಜನರ ಪರದಾಟ; ಬೆಂಗಳೂರಿನ ವಿವಿಧ ಯೆಸ್ ಬ್ಯಾಂಕ್, ಎಟಿಎಂಗಳಲ್ಲಿ ಉದ್ದುದ್ದ ಕ್ಯೂ

    ಬ್ಯಾಂಕ್​ನ ಎಲ್ಲ ವಹಿವಾಟು ಸದ್ಯಕ್ಕೆ ನಿಷ್ಕ್ರಿಯಗೊಂಡಿವೆ. ಯಾವುದೇ ಹೊಸ ಸಾಲ, ಗ್ರಾಂಟ್​, ಹೂಡಿಕೆ ಸೇರಿ ಯಾವುದೇ ವಹಿವಾಟನ್ನು ನಡೆಸುವಂತಿಲ್ಲ. ಮುಂದಿನ ತಿಂಗಳವರೆಗೆ ಆರ್​ಬಿಐ ನೇಮಿಸಿರುವ ಎಸ್​ಬಿಐ ಮಾಜಿ ಹಣಕಾಸು ಮುಖ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ಮುಂದುವರೆಯಲಿದೆ.

    First published: