ಓಟಿಟಿ ಫ್ಲಾಟ್ಫಾರಂನಲ್ಲೇ ದೂಳೆಬ್ಬಿಸಿದ, ಇಡೀ ಪ್ರಪಂಚದಾದ್ಯಂತ ಈ ವೆಬ್ಸೀರಿಸ್ಗಾಗಿ ಕಣ್ಣು ಬಾಯಿ ಬಿಡುತ್ತಿದ್ದ ಕೋಟ್ಯಂತರ ಮಂದಿ ಸಿನಿ ಪ್ರಿಯರ ಪಾಲಿಗೆ ಸೆಪ್ಟೆಂಬರ್ 3 ಶುಭ ಶುಕ್ರವಾರವಾಗಿ ಪರಿಣಮಿಸಿತು. ಮನಿ ಹೈಸ್ಟ್ ಸೀಸನ್ 5 ರ ಮೊದಲ ಬ್ಯಾಂಕ್ ದರೋಡೆಯ ಎಪಿಸೋಡ್ಗಳು ಅಥವಾ 'ವಾಲ್ಯೂಮ್ 1' ಶುಕ್ರವಾರ ಮಧ್ಯಾಹ್ನ 12:30 IST ಕ್ಕೆ ಮೊಬೈಲ್ ತೆರೆಗೆ ಅಪ್ಪಳಿಸಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.
ಕಳೆದ ಸೀಸನ್ನ ಪ್ರಮುಖ ಪಾತ್ರ, ಅಂದರೆ ಎಲ್ಲರ ಎದೆಗೆ ಇಲಿದಿದ್ದ ಪಾತ್ರವಾದ ಸೀಸನ್ 4 ಫೈನಲ್ನಲ್ಲಿ ಗಾಂಡಿಯಾ (ಜೋಸ್ ಮ್ಯಾನುಯೆಲ್ ಪೊಗಾ) ನಿಂದ ಕೊಲ್ಲಲ್ಪಟ್ಟ ನೈರೋಬಿ ತನ್ನ ಅಭಿನಯದಿಂದ ವಿಶ್ವವ್ಯಾಪಿ ತನ್ನದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಳು.
ನೆಚ್ಚಿನ ಪಾತ್ರವನ್ನು ಕಳೆದುಕೊಂಡ ಅಭಿಮಾನಿಗಳು ಇವಳನ್ನು ಕೊಂದ ಗಾಂಡಿಯಾ (ಜೋಸ್ ಮ್ಯಾನುಯೆಲ್ ಪೊಗಾ) ಕಂಡು ಹಲ್ಲು, ಹಲ್ಲು ಕಡಿದಿದ್ದರು . ಈಗ ಕೊನೆಯ ಬಾರಿಗೆ ಪರದೆಯನ್ನು ಅಲಂಕರಿಸಲು ಬಂದಿರುವ ಅಭಿಮಾನಿಗಳು ಡಾಲಿ-ಮಾಸ್ಕ್ ಧರಿಸಿ ಕಳ್ಳತನಕ್ಕೆ ಸಿದ್ಧರಾಗಿದ್ದಾರೆ.
ಈ ವೆಬ್ಸೀರಿಸ್ನ ಕ್ರೇಜ್ ಎಷ್ಟರ ಮಟ್ಟಕ್ಕೆ ವೈರಲ್ ಆಗಿತ್ತು ಎಂದರೆ ಜನರು ತಮ್ಮದೆ ಆದ ರೀತಿಯಲ್ಲಿ ಎಲ್ಲಾ ಪಾತ್ರಗಳನ್ನು ಅನುಕರಿಸಲು, ಅಭಿನಯಿಸಲು ತೊಡಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಟ್ಟದಲ್ಲಿ ಜನರು ಶಾರ್ಟ್ ವಿಡಿಯೋ ಆ್ಯಪ್ಗಳಲ್ಲಿ ಅಭಿನಯಿಸಿ ಮತ್ತಷ್ಟು ಕ್ರೇಜ್ ಹುಟ್ಟು ಹಾಕಿತ್ತು. ಕಳೆದ ಸೀಜನ್ನಲ್ಲಿ Arturo Roman or ‘Arturito’, ಆರ್ಟುರೊ ರೋಮನ್ ಅಥವಾ 'ಆರ್ಟುರಿಟೊ' ಪಾತ್ರ ಎಲ್ಲರ ದ್ವೇಷಕ್ಕೆ ಕಾರಣವಾಗಿತ್ತು, ಅಲ್ಲದೇ ಈ ಪಾತ್ರವನ್ನು ಸಾಕಷ್ಟು ಮಂದಿ ದ್ವೇಷಿಸತೊಡಗಿದ್ದರು. ಒಂದಷ್ಟು ಸಮೀಕ್ಷೆಗಳ ಪ್ರಕಾರ ಸೀಜನ್ 4ರಲ್ಲಿ ಅತ್ಯಂತ ಹೆಚ್ಚು ಜನರಿಂದ ಕೆಟ್ಟ ಪಾತ್ರ ಎಂದು ಇದು ಗುರುತಿಸಲ್ಪಟ್ಟಿತ್ತು.
ಒಂದು ಕೆಳಮಟ್ಟದ ಪಾತ್ರ ಹೇಗೆ ಇರಬೇಕು ಅನ್ನುವುದಕ್ಕೆ ಇದು ಉತ್ರಮ ಉದಾಹರಣೆ ಎಂದು ವಿಮರ್ಶೆ ಮಾಡಲಾಗಿತ್ತು, ಎಲ್ಲರು ಇಷ್ಟಪಡದ ಕಳಪೆ ಪಾತ್ರ, ಅವನನ್ನು ಮೊದಲ ಸೀಜನ್ನಿಂದಲೆ ಪ್ರೇಕ್ಷಕರು ದ್ವೇಷಿಸುತ್ತಿದ್ದರು- ಅವನು ಸಾಕಷ್ಟು ಸುಳ್ಳು ಹೇಳುತ್ತಾನೆ, ತನ್ನ ಹೆಂಡತಿಗೆ ಮೋಸ ಮಾಡುತ್ತಾನೆ, ಅವಳು ಗರ್ಭಿಣಿಯಾದ ನಂತರ ಮಗುವನ್ನು ತೊಡೆದುಹಾಕಲು ಅವಳಿಗೆ ವಂಚಿಸುತ್ತಾನೆ, ಹೀಗೆ ಈ ಕೆಟ್ಟ ಪಾತ್ರದ ಪಟ್ಟಿ ಮುಂದುವರಿಯುತ್ತದೆ. ಈ ಬಾರಿ ಟ್ವಿಟರ್ನಲ್ಲಿ ಹೆಚ್ಚು 'ಆರ್ಟುರಿಟೊ' ಟ್ರೆಂಡ್ ಆಗಿದ್ದಾನೆ. ಇಂತಹ ಒಂದಷ್ಟು ರಿಯಾಕ್ಷಷನ್ಗಳನ್ನು ನೋಡೋಣ ಬನ್ನಿ.
https://twitter.com/niorunj/status/1433680041477492740
https://twitter.com/OsmanSawaneh/status/1433531984685395970
https://twitter.com/BestieLuci/status/1432762420238368768
ಇದನ್ನೂ ಓದಿ: Delhi Post: ಎಂಬಿ ಪಾಟೀಲ್ ಜಾಣ ನಡೆ, ಬೊಮ್ಮಾಯಿ ಸಿಎಂ ಅಭ್ಯರ್ಥಿಯಾದರೆ ಯಡಿಯೂರಪ್ಪ ಕತೆ ಏನು?
https://twitter.com/abhithecomic/status/1433696602825187333
'ಆರ್ಟುರಿಟೊ' ವಿಷಯಕ್ಕೆ ಬಂದರೆ, ಮನಿ ಹೈಸ್ಟ್ ಅಭಿಮಾನಿಗಳ ಭಾವನೆಗೆ ಸಾಕಷ್ಟು ಮನ್ನಣೆ ದೊರಕಿದೆ ಎಂದೇ ಹೆಳಬಹುದು, ಭಾರತದಲ್ಲಿ ಹೊಸ season ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ, ಜೈಪುರ ಮೂಲದ ವರ್ವೆ ಲಾಜಿಕ್ ಎಂಬ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 3 ರಂದು ರಜೆಯನ್ನೇ ಘೋಷಿಸಿದೆ, ಅದೇ ದಿನ ಪ್ರದರ್ಶನವು ಬಿಡುಗಡೆಯಾಗುತ್ತಿದ್ದಂತೆ ಅದನ್ನು 'ನೆಟ್ಫ್ಲಿಕ್ಸ್ ಮತ್ತು ಚಿಲ್ ಹಾಲಿಡೇ' ಎಂದು ಘೋಷಿಸಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ