Mohan Bhagwat Speech: ‘ಇಡೀ ಜಗತ್ತಿಗೆ ಶಾಂತಿ ನೀಡಬಲ್ಲ ದೇಶ ಭಾರತ, ಮನಮಂದಿರ ನಿರ್ಮಿಸೋಣ‘ - ಮೋಹನ್​ ಭಾಗವತ್​​

ಹಿಂದೂ ಧರ್ಮವೂ ಎಲ್ಲರನ್ನೂ ಮುನ್ನೆಲೆಗೆ ತರುತ್ತದೆ. ಇಡೀ ಜಗತ್ತಿಗೆ ಶಾಂತಿ ತರಬಲ್ಲ ದೇಶದ ಭಾರತ. ನಾವು ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ನಿರ್ಮಾಣ ಮಾಡಿ ಸುಮ್ಮನಾಗದೇ ಜತೆಗೆ ಮನಮಂದಿರಗಳನ್ನು ಕಟ್ಟಬೇಕು ಎಂದು ಮೋಹನ್​​ ಭಾಗವತ್​​ ಹೇಳಿದರು.

news18-kannada
Updated:August 5, 2020, 2:57 PM IST
Mohan Bhagwat Speech: ‘ಇಡೀ ಜಗತ್ತಿಗೆ ಶಾಂತಿ ನೀಡಬಲ್ಲ ದೇಶ ಭಾರತ, ಮನಮಂದಿರ ನಿರ್ಮಿಸೋಣ‘ - ಮೋಹನ್​ ಭಾಗವತ್​​
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​
  • Share this:
ನವದೆಹಲಿ(ಆ.05): ದೇಶದಲ್ಲಿ ಲಕ್ಷಾಂತರ ಮಂದಿರಗಳಿವೆ. ಆದರೆ, ಭಾರತದ ಪ್ರಾಚೀನ ನಗರಗಳಲ್ಲೊಂದಾದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ಮಾತ್ರ ಭಿನ್ನ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್​​ ಭಾಗವತ್​​ ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ಸಲ್ಲಿಸಿದ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತಾಡುವಾಗ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​ ಹೀಗೆಂದರು. ಇಲ್ಲಿ ಸೇರುವ ಎಲ್ಲರೂ ರಾಮರೇ, ನನ್ನಲ್ಲಿ, ನಿಮ್ಮಲ್ಲಿ ಎಲ್ಲರಲ್ಲೂ ರಾಮ ಇದ್ದಾನೆ. ರಾಮ ಮಂದಿರ ಕಟ್ಟೋಣ. ನಮ್ಮ ಹೃದಯಗಳನ್ನೇ ಅಯೋಧ್ಯೆ ಮಾಡಿಕೊಳ್ಳೋಣ ಎಂದರು.

ಹಿಂದೂ ಧರ್ಮವೂ ಎಲ್ಲರನ್ನೂ ಮುನ್ನೆಲೆಗೆ ತರುತ್ತದೆ. ಇಡೀ ಜಗತ್ತಿಗೆ ಶಾಂತಿ ತರಬಲ್ಲ ದೇಶದ ಭಾರತ. ನಾವು ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ನಿರ್ಮಾಣ ಮಾಡಿ ಸುಮ್ಮನಾಗದೇ ಜತೆಗೆ ಮನಮಂದಿರಗಳನ್ನು ಕಟ್ಟಬೇಕು ಎಂದು ಮೋಹನ್​​ ಭಾಗವತ್​​ ಹೇಳಿದರು.

ಅತೀ ಆಸೆ, ವಿಪರೀತ ಸಿಟ್ಟು ತರಹದ ಸಮಾಜ ಮಾರಕ ಸ್ವಭಾವಗಳಿಂದ ದೂರ ಇರೋಣ. ಇದಕ್ಕಾಗಿ ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಇದು ಐತಿಹಾಸಿಕ ದಿನ. ನಮ್ಮ ಸಂಘದ ಹಿಂದಿನ ಸರ ಸಂಚಾಲಕ ಬಾಳಾಸಾಹೇಬ್ ದೇವರಸರು ಒಂದು ಮಾತೇಳಿದ್ದರು. ಈ ಕೆಲಸವನ್ನು ವರ್ಷಗಟ್ಟಲೇ ಮಾಡಬೇಕು ಎಂದಿದ್ದರು. ನಾವು ಅದರಂತೆಯೇ ನಡೆದುಕೊಂಡಿದ್ದೇವೆ. ಈ ಕಾರ್ಯಕ್ಕೆ ಸಾವಿರಾರು ಮಂದಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಇಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ಎಲ್ಲರ ಕನಸನ್ನು ಸಾಕಾರಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಹೀಗೆ ಮುಂದುವರಿದ ಅವರು, ಅಡ್ವಾಣಿಯವರು ತಮ್ಮ ಮನೆಯಲ್ಲೇ ಕೂತು ಈ ಕಾರ್ಯಕ್ರಮ ನೋಡುತ್ತಿದ್ದಾರೆ. ಸಾಕಷ್ಟು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದರು.

ಇದನ್ನೂ ಓದಿ: Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿರಾಮನ ಹಾದಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಕೊರೋನಾದಿಂದ ಇಡೀ ಜಗತ್ತು ತತ್ತರಿಸಿದೆ. ಈ ಸಂದರ್ಭದಲ್ಲಿ ಎಲ್ಲವನ್ನು ಎದುರಿಸಲು ರಾಮನೇ ದಾರಿ ತೋರುವನು ಎಂಬ ವಿಶ್ವಾಸ ಇದೆ ಎಂದರು ಭಾಗವತ್​​.
Published by: Ganesh Nachikethu
First published: August 5, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading