Ayodhya Verdict: ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸಿದ ಮೋಹನ್​​ ಭಾಗವತ್​​: ಶಾಂತಿ ಕಾಪಾಡುವಂತೆ ಕರೆ

ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರ ಹಾಗೂ ಬಾಬರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್​ ನೀಡಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿಯೂ ನೀಡಿದೆ.

news18-kannada
Updated:November 9, 2019, 2:35 PM IST
Ayodhya Verdict: ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸಿದ ಮೋಹನ್​​ ಭಾಗವತ್​​: ಶಾಂತಿ ಕಾಪಾಡುವಂತೆ ಕರೆ
ಮೋಹನ್​ ಭಾಗವತ್​​
news18-kannada
Updated: November 9, 2019, 2:35 PM IST
ನವದೆಹಲಿ(ನ.09): ಬಹುನೀರಿಕ್ಷಿತ ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪು ಸ್ವಾಗತಿಸುತ್ತೇನೆ ಎಂದು ಆರ್​ಎಸ್​​ಎಸ್ ಮುಖ್ಯಸ್ಥ ಮೋಹನ್​​ ಭಾಗವತ್​​​​ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬೆನ್ನಲ್ಲೇ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​​ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತಾಡಿದ ಇವರು, "ಈ ದೇಶದ ಭಾವನೆಯನ್ನು ಗೌರವಿಸಲಾಗಿದೆ. ಸತ್ಯ ಎತ್ತಿಹಿಡಿದ ಸುಪ್ರೀಂಕೋರ್ಟ್​ಗೆ ಧನ್ಯವಾದಗಳು. ಶತಮಾನದ ವಿವಾದ ಕೊನೆಗೊಳಿಸಲಾಗಿದೆ. ಇದು ಗೆಲುವು-ಸೋಲಿನ ತೀರ್ಪಲ್ಲ. ಸಾತ್ವಿಕ ರೀತಿಯಲ್ಲಿ ಖುಷಿ ವ್ಯಕ್ತಪಡಿಸೋಣ. ನ್ಯಾಯಲಯದ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಟ್ರಸ್ಟ್​​ ರಚನೆ ಮಾಡಲಿದೆ. ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಆಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶತಮಾನಗಳ ಹಿಂದಿನ ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಪ್ರಕರಣ ಸಂಬಂಧ ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್​​, ವಿವಾದಿತ 2.77 ಎಕರೆ ಜಾಗವನ್ನು ಟ್ರಸ್ಟ್‌ಗೆ ನೀಡಿದೆ. ಇನ್ನು ಮೂರು ತಿಂಗಳಿನಲ್ಲಿ ಟ್ರಸ್ಟ್‌ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹಾಗೇ ಮುಸ್ಲಿಂ ಸಮುದಾಯಕ್ಕೆ 5 ಎಕರೆ ಪ್ರತ್ಯೇಕ ಜಾಗ ನೀಡಲು ಸುಪ್ರೀಂಕೋರ್ಟ್​ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೋಯ್​​ ನೇತೃತ್ವದ ಐವರು ಸದಸ್ಯರ ಸಂವಿಧಾನಿಕ ಪೀಠ ನೀಡಿದ ಈ ಐತಿಹಾಸಿಕ ತೀರ್ಪನ್ನು ಬಿಜೆಪಿ ಸೇರಿದಂತೆ ಕಾಂಗ್ರೆಸ್​​ ಮತ್ತು ವಿರೋಧ ಪಕ್ಷಗಳು ಸ್ವಾಗತಿಸಿವೆ.

ಇದನ್ನೂ ಓದಿ: Ayodhya Verdict: ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸುತ್ತೇವೆ - ಕಾಂಗ್ರೆಸ್​​

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಸುಪ್ರೀಂಕೋರ್ಟ್​ ತೀರ್ಪನ್ನು ಗೌರವಿಸುತ್ತದೆ. ಸುಪ್ರೀಂಕೋರ್ಟ್​ ತೀರ್ಪನ್ನು ಒಪ್ಪಿಕೊಳ್ಳುವ ಮೂಲಕ ದೇಶದ ಜಾತ್ಯಾತೀತ, ಸಮಾನತೆ ಮತ್ತು ಭ್ರಾತೃ‍ತ್ವ ಮೌಲ್ಯಗಳನ್ನು ಗೌರವಿಸಬೇಕೆಂದು ಎಲ್ಲಾ ಸಮುದಾಯ ಮತ್ತು ಪಕ್ಷಗಳಿಗೆ ಮನವಿ ಮಾಡುತ್ತೇವೆ. ಹಾಗೆಯೇ ದೇಶದ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಕೇಳಿಕೊಳ್ಳುತ್ತೇವೆ ಎಂದು ಕಾಂಗ್ರೆಸ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಅತ್ತ ಕಾಂಗ್ರೆಸ್​ ಸೇರಿದಂತೆ ಬಿಜೆಪಿ ನಾಯಕರು ಸುಪ್ರೀಂಕೋರ್ಟ್​ ತೀರ್ಪು ಸ್ವಾಗತ ಮಾಡಿದ್ಧಾರೆ. ಇತ್ತ ಸುಪ್ರೀಂ ಕೋರ್ಟ್‌ ತೀರ್ಪನ್ನು ಗೌರವಿಸುತ್ತೇವಾದರೂ, ಇದರಿಂದ ತೃಪ್ತಿ ಹೊಂದಿಲ್ಲ ಎಂದು ಸುನ್ನಿ ವಕ್ಫ್‌ ಮಂಡಳಿ ಪರ ವಕೀಲ ಜಾಫರ್‌ ಯಾಬ್ ಜಿಲಾನಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸದ್ಯದಲ್ಲೇ ಮತ್ತೊಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ayodhya Verdict: ಬೆಂಗಳೂರಿನಾದ್ಯಂತ ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳು ಬಂದ್
Loading...

ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರ ಹಾಗೂ ಬಾಬರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್​ ನೀಡಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿಯೂ ನೀಡಿದೆ. ಸುಪ್ರೀಂಕೋರ್ಟ್​ ಸರ್ವಾನುಮತದ ತೀರ್ಪು ನೀಡಿದ್ದು, ವಿವಾದಿತ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದೆ.
--------
First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...