Jinnah's statue: ಪಾಕಿಸ್ತಾನದಲ್ಲಿ ಮೊಹಮ್ಮದ್​ ಅಲಿ ಜಿನ್ನಾ ಪ್ರತಿಮೆ ಧ್ವಂಸಗೊಳಿಸಿದ ಉಗ್ರರು

2013ರಲ್ಲಿ ಈ ಉಗ್ರ ಸಂಘಟನೆ ಕಡೆಯ ಕಾಲದಲ್ಲಿ ಜಿನ್ನಾ ವಾಸವಿದ್ದ 121 ವರ್ಷಗಳ ಹಳೆಯ ಕಟ್ಟಡವನ್ನು ಸ್ಪೋಟಿಸಿತ್ತು.

ಜಿನ್ನಾ ಪ್ರತಿಮೆ

ಜಿನ್ನಾ ಪ್ರತಿಮೆ

  • Share this:
    ಇಸ್ಲಾಮಾಬಾದ್​ (ಸೆ. 27):  ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ (Pakistan's founder Mohammad Ali Jinnah) ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಬಾಲುಚಿಸ್ತಾನ ಪ್ರಾಂತ್ಯದ ಗ್ವಾದರ್ ನಲ್ಲಿ ಕಡಲ ತೀರದ ಬಳಿಯಿದ್ದ ಪ್ರತಿಮೆಯನ್​ನು ಬಾಂಬ್ ದಾಳಿಯ ಧ್ವಂಸಗೊಳಿಸಲಾಗಿದೆ. ಬಲೂಚ್​ ಉಗ್ರರು (Baloch militants) ಈ ಕೃತ್ಯ ನಡೆಸಿದ್ದಾರೆ. ಇಲ್ಲಿನ ಮರೈನ್​ ಡ್ರೈವ್​ನಲ್ಲಿ (Marine Drive) ಕಳೆದ ಜೂನ್​ ನಲ್ಲಿ ಈ ಪ್ರತಿಮೆಯನನು ಸ್ಥಾಪಿಸಲಾಗಿತ್ತು. ಅಲ್ಲದೇ ಈ ತೀರ ಪ್ರದೇಶವನ್ನು ಅತ್ಯಂತ ಸುರಕ್ಷಾ ಸ್ಥಳ ಎಂದು ಕೂಡ ಪರಿಗಣಿಸಲಾಗಿತ್ತು. ಆದರೆ, ಬಲೂಚ್​ ಉಗ್ರರು ಮೊಹಮ್ಮದ್​ ಅಲಿ ಜಿನ್ನಾ ಪ್ರತಿಮೆ ಕೆಳಗೆ ಸ್ಪೋಟಕಗಳನ್ನು ಇರಿಸಿ ಧ್ವಂಸ ನಡೆಸಿದ್ದಾರೆ ಎಂದು ಪಾಕಿಸ್ತಾನದ ಡಾನ್​ ಪತ್ರಿಕೆ ವರದಿ ಮಾಡಿದೆ.

    ಈ ಬಾಂಬ್​ ಸ್ಪೋಟದಿಂದ ಪಾಕಿಸ್ತಾನದ ಸಂಸ್ಥಾಪಕರ ಪ್ರತಿಮೆ ಸಂಪೂರ್ಣ ಧ್ವಂಸ ಆಗಿದೆ.

    ಬಲೂಚ್ ರಿಪಬ್ಲಿಕನ್ ಆರ್ಮಿ ಉಗ್ರ ಸಂಘಟನೆ ಕೃತ್ಯ

    ಘಟನೆ ಬಳಿಕ ಈ ಕೃತ್ಯದ ಹೊಣೆಯನ್ನು ನಿಷೇಧಿತ ಉಗ್ರ ಸಂಘಟನೆ ಬಲೂಚ್ ರಿಪಬ್ಲಿಕನ್ ಆರ್ಮಿ ಹೊತ್ತು ಕೊಂಡಿದೆ. ಅಲ್ಲದೇ ಈ ಕುರಿತು ಸಂಘಟನೆ ವಕ್ತಾರ ಟ್ವಿಟ್​ ಕೂಡ ಮಾಡಿ ಕೃತ್ಯವನ್ನು ಸಂಘಟನೆ ನಡೆಸಿದ್ದಾಗಿ ತಿಳಿಸಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ.
    ಘಟನೆ ಕುರಿತು ಉನ್ನತ ಮಟ್ಟದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಗ್ವಾದರ್ ಉಪ ಆಯುಕ್ತ ಮೇಜರ್ (ನಿವೃತ್ತ) ಅಬ್ದುಲ್ ಕಬೀರ್ ಖಾನ್ ತಿಳಿಸಿದ್ದಾರೆ. ಅಲ್ಲದೇ, ದೇಶದಲ್ಲಿ ನಿಷೇಧಿಸಲ್ಪಟ್ಟಿದ್ದರು ಈ ಉಗ್ರ ಸಂಘಟನೆ ಜಿನ್ನಾ ಪ್ರತಿಮೆ ನಾಶ ಮಾಡುವ ಮೂಲಕ ಪ್ರವಾಸಿ ಸ್ಥಳಕ್ಕೂ ಪ್ರವೇಶ ಮಾಡಿದೆ. ಘಟನೆ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಇನ್ನೆರಡು ದಿನದೊಳಗೆ ಈ ಕುರಿತ ತನಿಖೆ ಪೂರ್ಣಗೊಳಿಸಲಾ ಗುವುದು. ಪ್ರಕರಣ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಇದನ್ನು ಓದಿ: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

    ಆರೋಪಿಗಳ ಬಂಧನಕ್ಕೆ ಆಗ್ರಹ

    ಈ ಕುರಿತು ಟ್ವೀಟ್​ ಮಾಡಿರುವ ಬಲೂಚಿಸ್ತಾನದ ಮಾಜಿ ಗೃಹ ಸಚಿವ ಸರ್ಫ್ರಾಜ್ ಬುಗ್ತಿ ಗ್ವಾದರ್‌ನಲ್ಲಿರುವ ಕ್ವಾಯ್ಡ್-ಎ-ಅಜಮ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಪಾಕಿಸ್ತಾನದ ಸಿದ್ದಾಂತದ ಮೇಲಿನ ದಾಳಿಯಾಗಿದೆ. ದಾಳಿ ನಡೆಸಿರುವ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ನಾನು ಅಧಿಕಾರಿಗಳಿಗೆ ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ಇದನ್ನು ಓದಿ: ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ಮೋದಿ ತಿರುಗೇಟು

    ಜಿನ್ನಾ ಸ್ಮಾರಕವನ್ನು ಧ್ವಂಸ ಮಾಡಿದ್ದ ಉಗ್ರರು
    2013ರಲ್ಲಿ ಈ ಉಗ್ರ ಸಂಘಟನೆ ಜಿನ್ನಾ ಬಳಸುತ್ತಿದ್ದ 121 ವರ್ಷಗಳ ಹಳೆಯ ಕಟ್ಟಡವನ್ನು ಸ್ಪೋಟಿಸಿತ್ತು. ಜಿನ್ನಾ ಕಡೆಯ ಕಾಲದಲ್ಲಿ ವಾಸವಿದ್ದ ಕಟ್ಟಡದಲ್ಲಿ ಜಿನ್ನಾ ಅವರು ಬಳಕೆ ಮಾಡುತ್ತಿದ್ದ ಪಿಠೋಪಕರಣ ಸೇರಿದಂತೆ ಅನೇಕ ಐತಿಹಾಸಿಕ ನೆನಪುಗಳಿದ್ದವು. ಜಿನ್ನಾ ಅಗಲಿಕೆ ಬಳಿಕ ಈ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಗಿತ್ತು. ಆದರೆ, ಬಲೂಚ್​ ಉಗ್ರರು ಇದನ್ನು ಧ್ವಂಸಗೊಳಿಸಿದ್ದರು. ನಾಲ್ಕು ಗಂಟೆಗಳ ಕಾಲ ಹೊತ್ತು ಉರಿದ ಈ ಕಟ್ಟಡದಲ್ಲಿ ಎಲ್ಲಾ ವಸ್ತುಗಳು ಬೂದಿಯಾಗಿದ್ದವು.

    ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ
    ಅವಿಭಜಿತ ಭಾರತದಲ್ಲಿದ್ದ ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರ ರಚನೆ ಮಾಡುವಂತೆ ಹೋರಾಟ ಮಾಡಿದ ಅಖಿಲ ಭಾರತ ಮುಸ್ಲಿಂ ಲೀಗ್​ನ ನಾಯಕ ಮೊಹಮ್ಮದ್​ ಅಲಿ ಜಿನ್ನಾ. ಆಗಸ್ಟ್​ 14, 1947ರಲ್ಲಿ ಪಾಕಿಸ್ತಾನ ಹೊಸ ರಾಷ್ಟ್ರ ರಚನೆಯಾದ ಬಳಿಕ ಅವರು ಪಾಕ್​ನ ಮೊದಲ ಗವರ್ನರ್​ ಜನರಲ್​ ಆಗಿ ಸೇವೆ ಸಲ್ಲಿಸಿದರು. ಕ್ಯಾನ್ಸರ್​ಗೆ ತುತ್ತಾಗಿದ್ದ ಅವರು 1948ರಲ್ಲಿ ಅಸುನೀಗಿದರು.
    Published by:Seema R
    First published: