Mohali Jhula Accident: ಎದೆ ಝಲ್ ಅನಿಸುತ್ತೆ! ಮುರಿದುಬಿದ್ದ 50 ಅಡಿ ಎತ್ತರದ ಜಾತ್ರೆಯ ತೊಟ್ಟಿಲು

ಜಾತ್ರೆಯ ತೊಟ್ಟಿಲಲ್ಲಿ ಆದ ಈ ಅಪಘಾತದಲ್ಲಿ ಐವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೊಹಾಲಿಯ ಪೊಲೀಸರು ತಿಳಿಸಿದ್ದಾರೆ.ಅದೃಷ್ಟವಷಾತ್ ಯಾರೂ ಈ ಅಪಘಾತದಲ್ಲಿ ಮೃತಪಟ್ಟಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೊಹಾಲಿ: ಜಾತ್ರೆಯಲ್ಲಿ ಎತ್ತರದ ತೊಟ್ಟಿಲಲ್ಲಿ ಕುಳಿತು ಖುಷಿ ಖುಷಿಯಿಂದ ಮಜಾ ಮಾಡೋದು ಮಾಮೂಲಿ. ಆದರೆ ಆ ತೊಟ್ಟಿಲೇ ಜೀವ ತೆಗೆದರೆ! ಅಬ್ಬಾ ಊಹಿಸಿಕೊಂಡರೂ ಭಯ ಆಗುತ್ತೆ ಅಲ್ವಾ? ಅಂತಹುದೇ ಒಂದು ಭಯಾನಕ ಘಟನೆ ಪಂಜಾಬ್​ನ ಮೊಹಾಲಿಯಲ್ಲಿ (Mohali Jhula Accident) ನಡೆದಿದೆ. 50 ಜನರು ಕುಳಿತಿದ್ದ ಜಾತ್ರೆಯ ತೊಟ್ಟಿಲಲ್ಲಿ ಭಯಂಕರ ಅಪಘಾತ (50 Feet Swing in a Mohali Fair) ಸಂಭವಿಸಿದೆ. ಈ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದ್ದು ನೋಡಿದವರನ್ನು ತಲ್ಲಣಗೊಳಿಸುವಂತಿದೆ.





    ಜಾತ್ರೆಯ ತೊಟ್ಟಿಲಲ್ಲಿ ಆದ ಈ ಅಪಘಾತದಲ್ಲಿ ಐವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೊಹಾಲಿಯ ಪೊಲೀಸರು ತಿಳಿಸಿದ್ದಾರೆ.ಅದೃಷ್ಟವಷಾತ್ ಯಾರೂ ಈ ಅಪಘಾತದಲ್ಲಿ ಮೃತಪಟ್ಟಿಲ್ಲ.
    Published by:guruganesh bhat
    First published: