School Bus ಅಪಘಾತದಲ್ಲಿ ಮಗನ ಕಳೆದುಕೊಂಡ ತಾಯಿ ಮೇಲೆ ಅಧಿಕಾರಿ ದಬ್ಬಾಳಿಕೆ

ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಮುಖ್ಯಮಂತ್ರಿ ಯೋಗಿ, ಘಟನೆಗೆ ಜವಾಬ್ದಾರಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪೋಷಕರಿಗೆ ಗದರಿದ ಅಧಿಕಾರಿ

ಪೋಷಕರಿಗೆ ಗದರಿದ ಅಧಿಕಾರಿ

 • Share this:
  ಶಾಲಾ ಬಸ್​ ಅಪಘಾತದಲ್ಲಿ (School Bus Accident)  10 ವರ್ಷದ ಮಗನ ಕಳೆದುಕೊಂಡು ರೋಧಿಸುತ್ತಿದ್ದ ತಾಯಿಗೆ ಅಧಿಕಾರಿ (Officer) ಸಾಂತ್ವನ ನೀಡುವ ಬದಲು ಗದರಿ ಬಾಯಿ ಮುಚ್ಚುವಂತೆ ಆರ್ಭಟಿಸಿರುವ ಘಟನೆ ದೆಹಲಿಯ ಮೋದಿನಗರ್​ನಲ್ಲಿ (Modinagar) ನಡೆದಿದೆ. ಅಧಿಕಾರಿಯ ದುರ್ವತನೆಯ ವಿಡಿಯೋ ವೈರಲ್ (Video Viral)​ ಆಗಿದ್ದು, ಘಟನೆ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ವಿವರಣೆ ಕೇಳಿದ್ದಾರೆ.

  ಏನಿದು ಘಟನೆ
  ಬುಧವಾರ ಬೆಳಗೆ ಶಾಲೆಗೆ ತೆರಳಿದ್ದ ಅನುರಾಗ್​ ಭಾರಧ್ವಾಜ್​ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿ ಬಸ್​ನಲ್ಲಿ ತೆರಳುವಾಗಿ ವಾಕರಿಕೆ ಬಂದಿದೆ. ಕಿಟಕಿಯ ಬಳಿ ಒರಗಿ ಕುಳಿತು ಕೊಂಡಿದ್ದಾನೆ. ಈ ವೇಳೆ ಬಸ್​ ಚಾಲಕ ಅಡ್ಡಾದಿಡ್ಡಿ ಗಾಡಿ ಚಾಲಯಿಸಿದ್ದಾರೆ. ಕಿಟಕಿ ಬಳಿಯಿದ್ದ ಬಾಲಕನ ತಲೆ ಈ ವೇಳೆ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಈಗಾಗಲೇ ಬಸ್​ ಚಾಲಕ ಮತ್ತು ಬಸ್​ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಆದರೆ, ಶಾಲೆ ವಿರುದ್ಧ ಯಾವುದೇ ಕ್ರಮವನ್ನು ಪೊಲೀಸರು ಕೈ ಗೊಂಡಿಲ್ಲ. ಆತನ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ. ಅವರಿಗೆ ಶಿಕ್ಷೆಯಾಗಬೇಕು ಎಂದು ಪೋಷಕರು ಪೊಲೀಸ್​ ಠಾಣೆ ಎದುರು ಪ್ರತಿಭಟನೆಗೆ ಮುಂದಾಗಿದ್ದರು .

  ದುಃಖತಪ್ತ ತಾಯಿ ಮೇಲೆ ಅಧಿಕಾರಿ ಕಿರುಚಾಟ
  ಮೋದಿನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಎದುರು ಪ್ರತಿಭಟನೆ ವೇಳೆ ಮಗನ ಕಳೆದುಕೊಂಡ ತಾಯಿ ಗಂಡ ಸೇರಿದಂತೆ ಇತರೆ ಕೆಲ ಪೋಷಕರೊಂದಿಗೆ ನ್ಯಾಯಕ್ಕೆ ಆಗ್ರಹಿಸಿದ್ದರು. ಈ ವೇಳೆ  ಕಣ್ಣೀರಿಡುತ್ತಿದ್ದ ಬಾಲಕನ ತಾಯಿಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಶುಭಾಂಗಿ ಶುಕ್ಲಾ ಗದರಿ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ.

  ನಿಮಗೆ ಯಾಕೆ ಅರ್ಥವಾಗುತ್ತಿಲ್ಲ ನೀವು ಬಾಯಿ ಮುಚ್ಚಿ ಕುಳಿತುಕೊಳ್ಳಿ ಎಂದು ಶುಭಾಂಗಿ ಶುಕ್ಲಾ ಕಿರುಚಿದ್ದಾರೆ. ಈ ವೇಳೆ ದುಃಖತಪ್ತ ತಾಯಿ ನಿಮ್ಮ ಮಗ ಆಗಿದ್ದರೆ ಸುಮ್ಮನಿರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಅಧಿಕಾರಿ ಎಷ್ಟು ಬಾರಿ ನಾನು ನಿಮಗೆ ಅರ್ಥವಾಗುವಂತ ಹೇಳಬೇಕು ಬಾಯಿ ಮುಚ್ಚಿ ಎಂದಿದ್ದಾರೆ. ಇದಕ್ಕೆ ಕಣ್ಣೀರಿಡುತ್ತಾ ಮಾಡನಾಡಿದ ಮೃತ ಬಾಲಜ ಅನುರಾಗ್​ ಭಾರಧ್ವಾಜ್​ ತಾಯಿ, ಆತ ಈಗ ಸಂಪೂರ್ಣ ಮೌನವಾಗಿದ್ದಾನೆ ಎಂದು ನನಗೆ ಅರ್ಥವಾಗಿದೆ ಎಂದು ಕಣ್ಣಿರು ಹಾಕಿದ್ದಾರೆ.

  ಇದನ್ನು ಓದಿ: ರಾಜಸ್ಥಾನದ 12ನೇ ತರಗತಿ ಪ್ರಶ್ನೆಪತ್ರಿಕೆ ತುಂಬಾ ಕಾಂಗ್ರೆಸ್ ಕುರಿತ ಪ್ರಶ್ನೆಗಳೇ, ಭುಗಿಲೆದ್ದ ವಿವಾದ

  ಕಠಿಣಕ್ರಮಕ್ಕೆ ಸಿಎಂ ಸೂಚನೆ
  ಮೃತ ಬಾಲಕನ ತಾಯಿ ಮತ್ತು ಅಧಿಕಾರಿಯ ಈ ಸಂಭಾಷಣೆ ನೆರೆದವರಿಗೆ ಆಘಾತ ಮೂಡಿಸಿದೆ. ಅಲ್ಲದೇ ಅಧಿಕಾರಿಯ ಅಮಾನವೀಯ ವರ್ತನೆ ಕುರಿತು ಖಂಡನೆ ವ್ಯಕ್ತವಾಗಿದ್ದು, ಈ ಘಟನೆ ವಿಡಿಯೋ ವೈರಲ್​ ಆಗಿದೆ, ಪ್ರಕರಣ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ವಿವರಣೆ ಅಧಿಕಾರಿಗೆ ಸೂಚಿಸಿದ್ದಾರೆ. ಜೊತೆಗೆ ಶಾಲೆ, ಬಸ್‌ ಸಿಬ್ಬಂದಿ ಹಾಗೂ ಸಾರಿಗೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಶಾಲಾ ಬಸ್‌ಗಳ ಫಿಟ್‌ನೆಸ್‌ ತಪಾಸಣೆಗೆ ಆದೇಶಿಸಿದ್ದಾರೆ.

  ಇದನ್ನು ಓದಿ: Jignesh Mevani: ಗುಜರಾತ್ ದಲಿತ ಶಾಸಕ ಜಿಗ್ನೇಶ್ ಮೇವಾನಿ ಅರೆಸ್ಟ್

  ಸಾಂತ್ವನ ತಿಳಿಸಿದ ಯೋಗಿ
  ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಮುಖ್ಯಮಂತ್ರಿ ಯೋಗಿ, ಘಟನೆಗೆ ಜವಾಬ್ದಾರಿ ಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
  ಶಾಲೆಯು ಬಸ್‌ನಲ್ಲಿ ಗುಣಮಟ್ಟದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ. ಈ ವೇಳೆ ಹಲವಾರು ವಿದ್ಯಾರ್ಥಿಗಳು ಇದ್ದರು. ಯಾರೂ ಮೇಲ್ವಿಚಾರಣೆ ಮಾಡಲಿಲ್ಲ ಎಂದು ಶಾಲೆ ಪ್ರಿನ್ಸಿಪಾಲ್​ ಮತ್ತು ಆಡಳಿತ ಮಂಡಳಿ ವಿರುದ್ಧ ಅನುರಾಗ್ ಪೋಷಕರು ಆರೋಪಿಸಿದ್ದಾರೆ.

  ಘಟನೆ ಕುರಿತು ಅಧಿಕಾರಿ ಶುಕ್ಲಾ ಬೇರೆ ರೀತಿ ತಿಳಿಸಿದ್ದಾರೆ. ಬಸ್​ನಲ್ಲಿ ಬಾಲಕ ಶಿಕ್ಷಕರ ಜೊತೆಯಲ್ಲಿರಲಿಲ್ಲ. ಕೆಲವೇ ಮಕ್ಕಳು ಬಸ್​ನಲ್ಲಿದ್ದರು ಎಂದು ತಿಳಿಸಿದ್ದಾರೆ. ಜೊತೆಗೆ ಬಸ್​ ಯಾವುದೇ ಫಿಟ್​​ನೆಸ್​ ಪ್ರಮಾಣ ಪತ್ರ ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ.
  Published by:Seema R
  First published: