PM Modi: ಥಾಣೆ-ದಿವಾ ನಡುವಿನ ಸಂಚಾರ ಇನ್ನು ಸುಲಭ! 620 ಕೋಟಿ ಮೊತ್ತದ ಕಾಮಗಾರಿಗೆ ಇಂದು ಪ್ರಧಾನಿ ಚಾಲನೆ

ಮಹಾರಾಷ್ಟ್ರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ 620 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 1.4 ಕಿಲೋಮೀಟರ್ ಉದ್ದದ ರೈಲು ಮೇಲ್ಸೇತುವೆ, 3 ಪ್ರಮುಖ ಸೇತುವೆಗಳು, 21 ಚಿಕ್ಕ ಸೇತುವೆಗಳನ್ನು ಈ ರೈಲು ಮಾರ್ಗ ಸಂಪರ್ಕಿಸಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಮಹಾರಾಷ್ಟ್ರ: ಭಾರತೀಯ ರೈಲ್ವೆ ಇಲಾಖೆಗೆ (Indian Railway Department) ಮತ್ತಷ್ಟು ಹೊಸ ಮಾರ್ಗ (New Lane) ಸೇರ್ಪಡೆಯಾಗಲಿದೆ. ಮಹಾರಾಷ್ಟ್ರದಲ್ಲಿ (Maharashtra) ಎರಡು ರೈಲ್ವೆ ಯೋಜನೆಗಳು (Railway Projects) ಇಂದು ಉದ್ಘಾಟನೆಯಾಗಲಿದೆ. 620 ಕೋಟಿ (620 Crore) ರೂಪಾಯಿಗಳ ಈ ಬೃಹತ್ ಯೋಜನೆಯನ್ನು ಇಂದು ಸಂಜೆ ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಲೋಕಾರ್ಪಣೆ (Inauguration) ಮಾಡಲಿದ್ದಾರೆ. ನವದೆಹಲಿಯ (New Delhi) ತಮ್ಮ ಕಚೇರಿಯಿಂದಲೇ ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಥಾಣೆ  (Thane) ಹಾಗೂ ದಿವಾ (Diva) ಪ್ರದೇಶವನ್ನು ಸಂಪರ್ಕಿಸುವ ರೈಲ್ವೆ ಯೋಜನೆ ಇದಾಗಿದೆ. ಇಂದು ಸಂಜೆ 4.30ಕ್ಕೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

620 ಕೋಟಿ ಮೊತ್ತದ ಬೃಹತ್ ಯೋಜನೆ

ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಅಂದಾಜು 620 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.  ಇದು 1.4 ಕಿಲೋ ಮೀಟರ್ ಉದ್ದದ ರೈಲು ಮೇಲ್ಸೇತುವೆ, 3 ಪ್ರಮುಖ ಸೇತುವೆಗಳು ಹಾಗೂ 21 ಚಿಕ್ಕ ಸೇತುವೆಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

2008ರಲ್ಲೇ ಯೋಜನೆಗಳಿಗೆ ಸಿಕ್ಕಿದ್ದ ಅನುಮೋದನೆ

620 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಥಾಣೆ ಮತ್ತು ದಿವಾ ನಡುವಿನ ರೈಲು ಮಾರ್ಗಗಳು ಮುಂಬೈ ನಗರ ಸಾರಿಗೆ ಯೋಜನೆಯ (MUTP 2B) ಭಾಗವಾಗಿದೆ. ಉಪನಗರ ಮತ್ತು ದೂರ ಪ್ರಯಾಣ ರೈಲುಗಳನ್ನು ಪ್ರತ್ಯೇಕಿಸಲು 2008ರಲ್ಲಿ ಈ ಹೊಸ ರೈಲು ಮಾರ್ಗಗಳಿಗೆ ಅನುಮೋದನೆ ನೀಡಲಾಗಿತ್ತು.

ಇದನ್ನೂ ಓದಿ: Manmohan Singh vs Modi: ಎಲ್ಲದಕ್ಕೂ ದೇಶದ ಮೊದಲ ಪ್ರಧಾನಿ ನೆಹರೂ ಅವರನ್ನೇ ದೂರುತ್ತಿದ್ದಾರೆ; ಡಾ. ಮನಮೋಹನ್ ಸಿಂಗ್ ಆಕ್ಷೇಪ

ಸಂಚಾರ ದಟ್ಟಣೆ ತಪ್ಪಿಸಲು ಈ ಯೋಜನೆಗಳಿಂದ ಅನುಕೂಲ

ಈ ಎರಡು ಹೊಸ ಮಾರ್ಗಗಳೊಂದಿಗೆ, ಮುಂಬೈನಲ್ಲಿನ ಉಪನಗರ ರೈಲಿನ ದಟ್ಟಣೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ. ದೂರದ ರೈಲುಗಳ ಸಂಚಾರದ ಅಡಚಣೆಯನ್ನು ಕೂಡ ಕಡಿಮೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಈ ಎರಡು ರೈಲು ಮಾರ್ಗಗಳು ನಗರದಲ್ಲಿ 36 ಹೊಸ ಉಪನಗರ ರೈಲುಗಳನ್ನು ಪರಿಚಯಿಸಲು ಅನುವು ಮಾಡಿಕೊಡುತ್ತದೆ ಅಂತ ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

ಹಲವು ಮಾರ್ಗಗಳ ಸಂಪರ್ಕ ಸಾಧ್ಯ

ರೈಲ್ವೆ ಇಲಾಖೆಯು ನೀಡಿರುವ ಪ್ರಕಟಣೆಯ ಪ್ರಕಾರ, ಮಹಾರಾಷ್ಟ್ರದ ಕಲ್ಯಾಣ ಪ್ರದೇಶದ ಕೇಂದ್ರ ರೈಲ್ವೆಯು ಮುಖ್ಯ ಜಂಕ್ಷನ್ ಆಗಿದೆ. ದೇಶದ ಉತ್ತರ ಭಾಗದಿಂದ ಮತ್ತು ದಕ್ಷಿಣ ಭಾಗದಿಂದ ಬರುವ ಸಂಚಾರ ಕಲ್ಯಾಣದಲ್ಲಿ ವಿಲೀನಗೊಳ್ಳುತ್ತದೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಕಡೆಗೆ ಚಲಿಸುತ್ತದೆ.

ಹಲವು ಸಾಧ್ಯತೆಗಳಿಗೆ ನಾಂದಿ ಹಾಡುವ ಈ ಯೋಜನೆ

ಕಲ್ಯಾಣ್ ಮತ್ತು CSTM ನಡುವಿನ ನಾಲ್ಕು ಹಳಿಗಳ ಪೈಕಿ ಎರಡು ಟ್ರ್ಯಾಕ್‌ಗಳನ್ನು ನಿಧಾನವಾದ ಸ್ಥಳೀಯ ರೈಲುಗಳಿಗೆ ಮತ್ತು ಎರಡು ಟ್ರ್ಯಾಕ್‌ಗಳನ್ನು ವೇಗದ ಲೋಕಲ್, ಮೇಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳಿಗೆ ಬಳಸಲಾಗಿದೆ. ಉಪನಗರ ಮತ್ತು ದೂರದ ರೈಲುಗಳನ್ನು ಪ್ರತ್ಯೇಕಿಸಲು, ಎರಡು ಹೆಚ್ಚುವರಿ ಟ್ರ್ಯಾಕ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ Telangana CMಗೆ ಹುಟ್ಟುಹಬ್ಬದ ಶುಭ ಕೋರಿದ Modi

ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತು

ಪ್ರಧಾನಮಂತ್ರಿಗಳ ಕಚೇರಿ (PMO) ಪ್ರಕಾರ, ಮುಂಬೈ ಉಪನಗರ ರೈಲ್ವೆಯ ಎರಡು ಉಪನಗರ ರೈಲುಗಳಿಗೆ ಪ್ರಧಾನಿ ಮೋದಿ ಅವರು ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಸಂಜೆ ನವದೆಹಲಿಯ ಪ್ರಧಾನಿ ಕಚೇರಿಯಿಂದ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಎರಡು ಮಾರ್ಗಗಳ ರೈಲು ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗಳ ಕುರಿತಂತೆ ಭಾಷಣ ಮಾಡಲಿದ್ದಾರೆ.
Published by:Annappa Achari
First published: