ಗರಡಿಮನೆಯಿಂದ ರಾಜಕೀಯಕ್ಕೆ ಬಂದ ಮಹಿಳಾ ಕುಸ್ತಿಪಟು; ಬಬಿತಾ ಪೊಗಟ್​​ಗೆ ಪ್ರಧಾನಿ ಮೋದಿ ಸ್ವಾಗತ

ಮಹಾವೀರ್ ಪೋಗಟ್​​​​ ತಮ್ಮ ಮಗಳಿಗೆ ತರಬೇತಿ ನೀಡಿದ್ದಾರೆ. ತಂದೆಯ ತರಬೇತಿ ಪಡೆದುಕೊಂಡೇ ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ರಾಜಕೀಯ ಪ್ರವೇಶ ಮಾಡಿದ್ದಾರೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದರು ಪ್ರಧಾನಿ ಮೋದಿ.

news18-kannada
Updated:October 15, 2019, 4:20 PM IST
ಗರಡಿಮನೆಯಿಂದ ರಾಜಕೀಯಕ್ಕೆ ಬಂದ ಮಹಿಳಾ ಕುಸ್ತಿಪಟು; ಬಬಿತಾ ಪೊಗಟ್​​ಗೆ ಪ್ರಧಾನಿ ಮೋದಿ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ(ಅ.15): ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್​ ಮೊದಲ ಬಾರಿಗೆ ತಮ್ಮ ಅದೃಷ್ಟ ಪರಿಕ್ಷೇಗೆ ಮುಂದಾಗಿದ್ದಾರೆ. ಇಂದು ದಾದ್ರಿ ಕ್ಷೇತ್ರದಲ್ಲಿ ಬಬಿತಾ ಪೋಗಟ್​​ ಪರವಾಗಿ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಹರಿಯಾಣ ಮನೆಮಗಳಿಗೆ ಮತಹಾಕಿ ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

ಇಂದು ದಾದ್ರಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಸೇರಿದ್ದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, "ಹರಿಯಾಣ ಮನೆಮಗಳಾದ ಪೋಗಟ್​​ ಎಲ್ಲಾ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಚೆನ್ನೈನಲ್ಲಿ ನನ್ನ ಮತ್ತು ಚೀನಾ ಅಧ್ಯಕ್ಷರ ಮಧ್ಯೆ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ಪೋಗಟ್​​ ವಿಚಾರ ಪ್ರಸ್ತಾಪವಾಗಿತ್ತು. ಖುದ್ದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರೇ, ಪೋಗಟ್​​​ ಜೀವನಾಧರಿತ ದಂಗಲ್​​ ಸಿನಿಮಾ ನೋಡಿದ್ದಾಗಿ ಹೇಳಿದ್ದರು. ಈಗ ಇದೇ ರಾಜಕೀಯ ದಂಗಲ್​​ಗೆ ಪೋಗಟ್​​​​​ ಪ್ರವೇಶಿಸಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಮಹಾವೀರ್ ಪೋಗಟ್​​​​ ತಮ್ಮ ಮಗಳಿಗೆ ತರಬೇತಿ ನೀಡಿದ್ದಾರೆ. ತಂದೆಯ ತರಬೇತಿ ಪಡೆದುಕೊಂಡೇ ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ರಾಜಕೀಯ ಪ್ರವೇಶ ಮಾಡಿದ್ದಾರೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದರು ಪ್ರಧಾನಿ ಮೋದಿ.

ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟುವಾಗಿ ಮಿಂಚಿದ್ದ ಬಬಿತಾ ಪೋಗಟ್(29), ಪೊಲೀಸ್​​ ಎಸ್​​ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುವಾದ ಬಬಿತಾ ಪೊಗಟ್, ತನ್ನ ತಂದೆ ಮಹಾವೀರ್​​​ ಪೋಗಟ್​​​ರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.

ಇದನ್ನೂ ಓದಿ: ಉಪಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಹೈಕಮಾಂಡ್ ಒಪ್ಪಿಗೆಯೊಂದೇ ಬಾಕಿ

ಇದೇ ವೇಳೆ ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್​​ನ ವಿವಾದಾತ್ಮಕ ನಡೆಯನ್ನು ಖಂಡಿಸಿದ ಪ್ರಧಾನಿ ಮೋದಿ, ನಿಮಗೆ ತಾಖತ್ತಿದ್ದರೇ ಮತ್ತೆ 370ನೇ ವಿಧಿ ಮರುಸ್ಥಾಪಿಸುತ್ತೇವೆ ಎಂದು ಹೇಳಿ. ನೀವು ಭಾರತದ ಕುರಿತು ವಿದೇಶಮಟ್ಟದಲ್ಲಿ ಸುಳ್ಳಿ ಸುದ್ದಿ ಹಬ್ಬಿಸುತ್ತೀದ್ದೀರಿ. ಭಾರತ ನಿಮಗೆ ತಕ್ಕ ಪಾಠ ಕಲಿಸಲಿದೆ ಎಂದರು.

ನಾನು ಹರಿಯಾಣಕ್ಕೆ ಬರಲೇಬೆಕೆಂದೇನಿಲ್ಲ. ಬಿಜೆಪಿ ಪರವಾಗಿ ಕ್ಯಾಂಪೇನ್​​ ಮಾಡಬೇಕು ಅಂತೇನಿಲ್ಲ. ಆದರೆ, ನೀವೇ ನನ್ನ ರಾಜ್ಯಕ್ಕೆ ಬರುವಂತೆ ಒತ್ತಾಯಿಸಿದ್ದೀರಿ. ನೀವು ಕರೆದಾಗ ನಾನು ಬಂದೇ ಬರುತ್ತೇನೆ, ಇದನ್ನೂ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾವಾವೇಶಕ್ಕೊಳಗಾದರು.ಇದನ್ನೂ ಓದಿ: ಕಾಶ್ಮೀರದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ಪೊಲೀಸ್ ವಶಕ್ಕೆ

ಇನ್ನು, ಇದೇ ಅಕ್ಟೋಬರ್ 21ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ರಣಕಹಳೆ ಊದಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಪ್ರಚಾರಕ್ಕಾಗಮಿಸಿ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿದಂತೆ ವಿಧಾನಸಭಾ ಚುನಾವಣೆಯಲ್ಲೂ ಖಟ್ಟರ್ ಅವರ ಕೈಹಿಡಿಯಬೇಕೆಂದು ಮೋದಿ ಮನವಿ ಮಾಡಿದ್ದಾರೆ.
--------------
First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ