HOME » NEWS » National-international » MODI VISIT TO KOLKATA PM ANNOUNCES RS 1000 CRORE INTERIM RELIEF FOR WEST BENGAL AFTER AERIAL SURVEY SNVS

PM Modi in Bengal: ಮಮತಾ ಬ್ಯಾನರ್ಜಿಗೆ ಮೋದಿ ಶ್ಲಾಘನೆ; ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ಆರಂಭಿಕ ಪರಿಹಾರ ಘೋಷಣೆ

Modi and Mamata Aerial Survey - ನಿನ್ನೆ ಅಪ್ಪಳಿಸಿದ ಅಂಪನ್ ಚಂಡಮಾರುತ ಕೋಲ್ಕತಾ ಮತ್ತು ಒಡಿಶಾ ರಾಜ್ಯಗಳನ್ನ ಘಾಸಿಗೊಳಿಸಿದೆ. ಬಂಗಾಳದಲ್ಲಿ 80 ಜನರು ಬಲಿಯಾಗಿರುವುದು ತಿಳಿದುಬಂದಿದೆ.

news18-kannada
Updated:May 22, 2020, 2:52 PM IST
PM Modi in Bengal: ಮಮತಾ ಬ್ಯಾನರ್ಜಿಗೆ ಮೋದಿ ಶ್ಲಾಘನೆ; ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ಆರಂಭಿಕ ಪರಿಹಾರ ಘೋಷಣೆ
ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ
  • Share this:
ಕೋಲ್ಕತಾ(ಮೇ 22): ಅಂಪನ್ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳಕ್ಕೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಚಂಡಮಾರುತದಿಂದ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಅದಾದ ಬಳಿಕ ಪ್ರಧಾನಿಗಳು ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ರೂಪಾಯಿಯನ್ನು ತತ್​ಕ್ಷಣದ ಪರಿಹಾರವಾಗಿ ಘೋಷಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಹಾಗೆಯೇ, ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರು., ಗಾಯಗೊಂಡವರಿಗೆ 50,000 ರೂ ಕೊಡುವುದಾಗಿ ಪ್ರಧಾನಿ ತಿಳಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ರಾಜಕೀಯವಾಗಿ ಬದ್ಧವೈರಿಯಾದರೂ ಕೋವಿಡ್ ಮತ್ತು ಅಂಪನ್ ಬಿಕ್ಕಟ್ಟಿನಲ್ಲಿ ದೀದಿಗೆ ಮೋದಿ ಹೊಗಳಿಕೆಯ ಗೌರವ ಸಲ್ಲಿಸಿದರು. ಎರಡು ವಿಭಿನ್ನ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಭಾಯಿಸಿದ ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: RBI Governor: ಕೋವಿಡ್ ಬಿಕ್ಕಟ್ಟನಲ್ಲಿ ಆರ್ಥಿಕ ಸಂಕಷ್ಟ; ಕೃಷಿ ಮಾತ್ರ ಆಶಾಕಿರಣ: ಆರ್​ಬಿಐ ಗವರ್ನರ್

“ಕೋವಿಡ್-19 ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಪಾಲನೆಯತ್ತ ಗಮನ ಕೊಡಬೇಕಾಗುತ್ತದೆ. ಅಂಪನ್ ಚಂಡಮಾರುತ ವಿರುದ್ಧ ಹೋರಾಡಬೇಕಾದರೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಬೇಕಾಗುತ್ತದೆ. ಈ ವೈರುದ್ಧ್ಯಗಳಿದ್ದರೂ ಮಮತಾಜಿ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ಎದ್ದು ನಿಲ್ಲುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ” ಎಂದು ಪ್ರಧಾನಿಗಳು ತಿಳಿಸಿದರು.

ಕೇಂದ್ರ ಸರ್ಕಾರ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರಂಭದಿಂದಲೂ ಅತ್ಯಂತ ತೀವ್ರ ಮಟ್ಟದಲ್ಲಿ ವಿರೋಧಿಸುತ್ತಾ ಬಂದಿದ್ದ ಮಮತಾ ಬ್ಯಾನರ್ಜಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ಪರಿಹಾರ ಮತ್ತು ಪುನರ್ವಸತಿಗಾಗಿ ಕೇಂದ್ರದ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಬೆನ್ನಿಗೆ ನಿಲ್ಲುವುದಾಗಿ ಪ್ರಧಾನಿಗಳೂ ಅಭಯಹಸ್ತ ನೀಡಿದ್ದಾರೆ.

ಇವತ್ತು ಬೆಳಗ್ಗೆ ಬಂಗಾಳಕ್ಕೆ ಬಂದ ಪ್ರಧಾನಿ ಮೋದಿ ಅವರನ್ನು ಮಮತಾ ಬ್ಯಾನರ್ಜಿ ಅವರೇ ಖುದ್ದಾಗಿ ಬರಮಾಡಿಕೊಂಡಿದ್ದು ವಿಶೇಷ. ನಾರ್ತ್ 24 ಪರ್ಗಣ ಜಿಲ್ಲೆಯ ಬಸೀರ್​ಹತ್​ನಲ್ಲಿ ಇಬ್ಬರೂ ಒಟ್ಟಿಗೆ ವೈಮಾನಿಕ ಸಮೀಕ್ಷೆ ನಡೆಸಿದರು.

ಇದನ್ನೂ ಓದಿ: KKR-Jio Platforms deal: ಜಿಯೋದಲ್ಲಿ ಮತ್ತೊಂದು ಕಂಪನಿ ಬಂಡವಾಳ; ಕೆಕೆಆರ್​ನಿಂದ 11,367 ಕೊಟಿ ಹೂಡಿಕೆನಿನ್ನೆ ಅಪ್ಪಳಿಸಿದ ಅಂಪನ್ ಚಂಡಮಾರುತ ಕೋಲ್ಕತಾ ಮತ್ತು ಒಡಿಶಾ ರಾಜ್ಯಗಳನ್ನ ಘಾಸಿಗೊಳಿಸಿದೆ. ಬಂಗಾಳದಲ್ಲಿ 80 ಜನರು ಬಲಿಯಾಗಿರುವುದು ತಿಳಿದುಬಂದಿದೆ. ಜೊತೆಗೆ, ಲಕ್ಷಾಂತರ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾಕಷ್ಟು ಆಸ್ತಿಪಾಸ್ತಿ ನಾಶವಾಗಿದೆ. ಇದು ಕೊರೋನಾಗಿಂತಲೂ ದೊಡ್ಡ ಮಟ್ಟದ ಹಾನಿ ಸಂಭವಿಸಿದೆ. ಇಂಥ ಚಂಡಮಾರುತವನ್ನು ತಾನೆಂದೂ ನೋಡಿದ್ದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅತ್ತ, ಒಡಿಶಾದಲ್ಲೂ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದೆ. ಭೀಕರ ಮಳೆ ಬಿರುಗಾಳಿಯಿಂದ ಅನೇಕ ಪ್ರದೇಶಗಳಲ್ಲಿ ಜನರು ಬಾಧಿತರಾಗಿದ್ದಾರೆ.Javascript

First published: May 22, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories