Modi About Kili: ಕಿಲಿ, ನೀಮಾರಂತೆ ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಜನಪ್ರಿಯ ತಾಂಜಾನಿಯಾದ ಸಹೋದರ ಜೋಡಿ ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮೋದಿ

ಮೋದಿ

  • Share this:
ಕಿಲಿ ಹಾಗೂ ನೀಮಾರನ್ನು ತಿಳಿಯದವರೇ ಇಲ್ಲ. ಇನ್​​ಸ್ಟಾ ಪ್ರಿಯರಿಗೆ ಇವರಿಗೆ ಫೇವರೇಟ್, ಉಳಿದವರಿಗೆ ಇವರು ಪರಿಚಿತ ವಿಡಿಯೋ ಕ್ರಿಯೇಟರ್ಸ್. ಇನ್​ಸ್ಟಾಗ್ರಾಮ್ ವಿಡಿಯೋಗಳ ಮೂಲಕ ಬಹಳಷ್ಟು ಇಂಟ್ರೆಸ್ಟಿಂಗ್ ಹಾಗೂ ಫೇಮಸ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ಆಕ್ಷನ್ ಮಾಡುವ ಇವರು ನೆಟ್ಟಿಗರನ್ನು ನಗಿಸುತ್ತಾರೆ. ಇವರ ಒಂದೊಂದು ವಿಡಿಯೋಗಳು ಮಿಲಿಯನ್​ಗಟ್ಟಲೆ ಲೈಕ್ಸ್​ಗಳನ್ನು ಪಡೆಯುತ್ತವೆ. ಇದು ವ್ಯೂಸ್ ಅಲ್ಲ, ಬರೀ ಲೈಕ್ಸ್​ಗಳ ಕಥೆ. ಹಾಗಾಗಿಯೇ ಇವರು ಸೋಷಿಯಲ್ ಮೀಡಿಯಾ ಸ್ಟಾರ್​ಗಳಾಗಿ ಬಿಟ್ಟಿದ್ದಾರೆ. ಬಾಲಿವುಡ್​ನಿಂದ ತೊಡಗಿ ಸೌತ್ ಇಂಡಿಯಾ ಸಿನಿಮಾಗಳ ತನಕ ಎಲ್ಲ ಹಿಟ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿದ್ಧಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರ ಅಡ್ವಾನಿ ನಟಿಸಿದ ಶೇರ್ ಶಾ ಸಿನಿಮಾದ ಲಂಬೇಯಾ ಹಾಡಿಗೆ ಇವರು ಲಿಪ್ ಸಿಂಕ್ ಮಾಡಿದಾಗ ಅದು ಸಖತ್ ಹಿಟ್ ಆಗಿತ್ತು. ಆ ನಂತರದಲ್ಲಿ ಇವರು ಹೆಚ್ಚಿನ ವಿಡಿಯೋಳನ್ನು ಮಾಡುತ್ತಲೇ ಇದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಜನಪ್ರಿಯ ತಾಂಜಾನಿಯಾದ ಸಹೋದರ ಜೋಡಿ ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮನ್​ ಕೀ ಬಾತ್​ನಲ್ಲಿ ಕಿಲಿ ಹಾಗೂ ನೀಮಾ ಪ್ರಸ್ತಾಪ

ಅವರಿಂದ ಸ್ಫೂರ್ತಿ ಪಡೆಯಲು ಭಾರತೀಯರನ್ನು ಮೋದಿ ಪ್ರೋತ್ಸಾಹಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಬ್ಬರು ಸಾಮಾಜಿಕ ಮಾಧ್ಯಮ ತಾರೆಯರ ಸೃಜನಶೀಲತೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅವರ ಒಲವನ್ನು ಶ್ಲಾಘಿಸಿದ್ದಾರೆ.

ರೀಲ್ಸ್ ಮೂಲಕ ಫೇಮಸ್ ಆದ ಜೋಡಿ

ತಾಂಜೇನಿಯಾದ ಜೋಡಿಯು ಭಾರತೀಯ ಹಾಡುಗಳಲ್ಲಿನ ತಮ್ಮ ವೀಡಿಯೊಗಳೊಂದಿಗೆ ದೇಶದ ಅನೇಕರ ಹೃದಯವನ್ನು ಗೆದ್ದಿದ್ದಾರೆ. ಗಣರಾಜ್ಯೋತ್ಸವದಂದು ಕಿಲಿ ಮತ್ತು ನೀಮಾ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದರು ಮತ್ತು ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ಎಂದು ಮೋದಿ ಗಮನಿಸಿದರು.

ಇದನ್ನೂ ಓದಿ: ವರನ ಬೊಕ್ಕತಲೆ ಕಂಡು ಮೂರ್ಛೆ ಹೋದ ವಧು! ಕೂದಲಿರದ ಹುಡ್ಗ ನಂಗೆ ಬ್ಯಾಡವೇ ಬೇಡ

ಎಲ್ಲರೂ ರೀಲ್ಸ್ ಮಾಡಿ ಮುಖ್ಯವಾಗಿ ಮಕ್ಕಳು

ಭಾರತದ ವೈವಿಧ್ಯಮಯ ಭಾಷೆಗಳನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ದೇಶದ ವಿವಿಧ ಪ್ರದೇಶಗಳ ಹಾಡುಗಳ ಮೇಲೆ ಲಿಪ್-ಸಿಂಕ್ ವೀಡಿಯೊಗಳನ್ನು ಮಾಡಲು ಮತ್ತು ಕಿಲಿ ಮತ್ತು ನೀಮಾರಿಂದ ಪ್ರೇರಣೆ ಪಡೆಯಲು ಚಂದದ ವೀಡಿಯೊಗಳನ್ನು ಮಾಡಲು ಭಾರತೀಯರನ್ನು, ವಿಶೇಷವಾಗಿ ಮಕ್ಕಳನ್ನು ಒತ್ತಾಯಿಸಿದರು. ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಅರ್ಥವನ್ನು ಪುನರ್ ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಘಟನೆ ನೆನಪಿಸಿದ ಪ್ರಧಾನಿ

150 ಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳು ಕೆಲವು ವರ್ಷಗಳ ಹಿಂದೆ ಗಾಂಧಿ ಜಯಂತಿಯ ಸಂದರ್ಭದಲ್ಲಿ ತಮ್ಮ ಸಾಂಸ್ಕೃತಿಕ ವೇಷಭೂಷಣಗಳನ್ನು ಧರಿಸಿ 'ವೈಷ್ಣವ್ ಜನ ತೋ' ಹಾಡುವ ಮೂಲಕ ಹೇಗೆ ಗುರುತಿಸಿದರು ಎಂಬುದನ್ನು ಮೋದಿ ನೆನಪಿಸಿಕೊಂಡರು.

ಇದನ್ನೂ ಓದಿ: KGF Movie: ಆಫ್ರಿಕಾದಲ್ಲೂ ರಾಕಿ ಭಾಯ್ ಹವಾ: KGF-1 ಹಾಡಿಗೆ ಕಿಲಿ ಪೌಲ್ ಕುಣಿದ ವಿಡಿಯೋ ಫುಲ್ ವೈರಲ್

ಪ್ರತಿಭಾವಂತ ಜೋಡಿಯನ್ನು ಪ್ರಧಾನಿ ಗುರುತಿಸುವುದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಕಿಲಿ-ನೀಮಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದರೂ ಕೆಲವರು ಲಿಪ್ ಸಿಂಕ್ ಮಾಡಿದ ವೀಡಿಯೊಗಳನ್ನು ಮಾಡಲು ಜನರನ್ನು ಪ್ರೋತ್ಸಾಹಿಸುವ ಕಲ್ಪನೆಯನ್ನು ಟೀಕಿಸಿದ್ದಾರೆ.
Published by:Divya D
First published: