ತಾಜ್​ಮಹಲ್​ ವೀಕ್ಷಣೆಗೆ ತೆರಳುವ ಟ್ರಂಪ್ ಮತ್ತು ಕುಟುಂಬದೊಂದಿಗೆ ಪ್ರಧಾನಿ ಮೋದಿ ಹೋಗುವುದು ಅನುಮಾನ

ಅಹಮದಾಬಾದ್​ದಲ್ಲಿ ಫೆ.24ರಂದು ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ಇರಲಿದ್ದಾರೆ. ಅದಾದ ಮರುದಿನ ಫೆ.25ರಂದು ದೆಹಲಿಯಲ್ಲಿ  ಭಾರತ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿದ್ದು, ಇಲ್ಲಿ ಪ್ರಧಾನಿ ಮೋದಿ ಉಪಸ್ಥಿತರಿರಲಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಡೊನಾಲ್ಡ್ ಟ್ರಂಪ್.

ಕುಟುಂಬ ಸದಸ್ಯರೊಂದಿಗೆ ಡೊನಾಲ್ಡ್ ಟ್ರಂಪ್.

 • Share this:
  ನವದೆಹಲಿ: ಸೋಮವಾರ ಭಾರತಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕುಟುಂಬ ಸದಸ್ಯರು ಅಂದು ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ತಾಜ್​ಮಹಲ್​ಗೆ ತೆರಳುವ ಸಾಧ್ಯತೆ ಇಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

  36 ಗಂಟೆಗೂ ಕಡಿಮೆ ಅವಧಿಗೆ ಭಾರತ ಪ್ರವಾಸ ಕೈಗೊಂಡಿರುವ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24ರ ಮಧ್ಯಾಹ್ನದ ವೇಳೆಗೆ ಅಹಮದಾಬಾದ್​ಗೆ ಆಗಮಿಸಲಿದ್ದಾರೆ. ಟ್ರಂಪ್ ಅವರೊಂದಿಗೆ ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್, ಮಗಳು, ಇವಾಂಕ ಟ್ರಂಪ್ ಹಾಗೂ ಅಳಿಯ ಜರೆದ್ ಕುಶ್ನೆರ್ ಮತ್ತು ಅಮೆರಿಕ ಉನ್ನತ ಅಧಿಕಾರಿಗಳು ಭಾರತಕ್ಕೆ ಬರಲಿದ್ದಾರೆ.

  ಅಹಮಬಾದ್​ನಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿಕೊಂಡು ಟ್ರಂಪ್ ಅವರು ಕುಟುಂಬ ಸದಸ್ಯರೊಂದಿಗೆ ಆಗ್ರಾಗೆ ತೆರಳಿ, ತಾಜ್​ಮಹಲ್ ವೀಕ್ಷಿಸಲಿದ್ದಾರೆ. ಟ್ರಂಪ್ ಅವರೊಂದಿಗೆ ಮೋದಿ ಅವರು ತಾಜ್​ಮಹಲ್​ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅಂತಹ ಯಾವುದೇ ಯೋಜನೆ ಇಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  ಅಮೆರಿಕಾದ ಅಧ್ಯಕ್ಷರು ಮತ್ತು ಅವರ ಕುಟುಂಬ ಸದಸ್ಯರು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕವನ್ನು ಸೂಕ್ತವಾಗಿ ನೋಡುವ ಅವಕಾಶ ಮಾಡಿಕೊಡಲಾಗಿದೆ. ಈ ನಡುವೆ ಭಾರತದ ಕಡೆಯಿಂದ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

  ಇದನ್ನು ಓದಿ: ಟ್ರಂಪ್ ಭೇಟಿ ವೇಳೆ ಧಾರ್ಮಿಕ ಸ್ವಾತಂತ್ರ್ಯ ವಿಚಾರದ ಪ್ರಸ್ತಾಪ ಸಾಧ್ಯತೆ

  ಅಹಮದಾಬಾದ್​ದಲ್ಲಿ ಫೆ.24ರಂದು ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ಇರಲಿದ್ದಾರೆ. ಅದಾದ ಮರುದಿನ ಫೆ.25ರಂದು ದೆಹಲಿಯಲ್ಲಿ  ಭಾರತ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿದ್ದು, ಇಲ್ಲಿ ಪ್ರಧಾನಿ ಮೋದಿ ಉಪಸ್ಥಿತರಿರಲಿದ್ದಾರೆ.

  First published: