ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ

ಇದೇ ವೇಳೆ ಅಮೆರಿಕದಲ್ಲಿ ನಡೆಯುತ್ತಿರುವ ನಾಗರೀಕ ಹಿಂಸಾಚಾರದ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಮೋದಿ ಪರಿಸ್ಥಿತಿಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ಶುಭ ಹಾರೈಸಿದ್ದಾರೆ.

MAshok Kumar | news18-kannada
Updated:June 2, 2020, 10:37 PM IST
ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ
  • Share this:
ನವ ದೆಹಲಿ (ಜೂನ್‌ 02); ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಉಭಯ ದೇಶಗಳಲ್ಲಿನ ಕೊರೋನಾ ವೈರಸ್ ಪರಿಸ್ಥಿತಿ ಮತ್ತು ಭಾರತ-ಚೀನಾ ಗಡಿ ವಿಚಾರ ಸೇರಿದಂತೆ ಅನೇಕ ಮಹತ್ವದ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

ದೂರವಾಣಿ ಕರೆಯಲ್ಲಿ ಯುಎಸ್ ಪ್ರೆಸಿಡೆನ್ಸಿ ಆಫ್ ಗ್ರೂಪ್ ಆಫ್ ಸೆವೆನ್ ಬಗ್ಗೆ ಮೋದಿ ಜೊತೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ಮೀರಿ ಗುಂಪಿನ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಇಚ್ಚೆ ವ್ಯಕ್ತಪಡಿಸಿದ್ದಾರೆ. ಭಾರತ ಸೇರಿದಂತೆ ಇತರ ಪ್ರಮುಖ ದೇಶಗಳನ್ನು ಸೇರಿಸಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅಮೇರಿಕಾದಲ್ಲಿ ನಡೆಯಲಿರುವ ಮುಂದಿನ ಜಿ -7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆಯೂ ಅವರು ಮೋದಿಯವರಿಗೆ ಆಹ್ವಾನವನ್ನು ನೀಡಿದ್ದಾರೆ.

ಈ ವೇಳೆ ಹರ್ಷ ವ್ಯಕ್ತಪಡಿಸಿರುವ ನರೇಂದ್ರ ಮೋದಿ ಉದ್ದೇಶಿತ ಶೃಂಗಸಭೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮತ್ತು ಇತರ ದೇಶಗಳೊಂದಿಗೆ ಕೆಲಸ ಮಾಡಲು ಭಾರತ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಮೆರಿಕದಲ್ಲಿ ನಡೆಯುತ್ತಿರುವ ನಾಗರೀಕ ಹಿಂಸಾಚಾರದ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಮೋದಿ ಪರಿಸ್ಥಿತಿಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ಶುಭ ಹಾರೈಸಿದ್ದಾರೆ.

"ಉಭಯ ನಾಯಕರು ಉಭಯ ದೇಶಗಳಲ್ಲಿನ COVID-19 ಪರಿಸ್ಥಿತಿ, ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಸುಧಾರಣೆಗಳ ಅಗತ್ಯತೆ" ಸೇರಿದಂತೆ ಅನೇಕ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಲಕ್ಷ್ಮಣ ಸವದಿ ಸೇರಿ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ; ಉಗ್ರಪ್ಪ ಹೊಸ ಬಾಂಬ್


Published by: MAshok Kumar
First published: June 2, 2020, 10:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading