ಅಧಿಕಾರದಲ್ಲಿರುವ ಪ್ರಧಾನಿ (Prime Minister) ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಸಂದರ್ಶನ (Interview) ಮಾಡಬೇಕು ಎನ್ನುವುದು ಪ್ರತಿಯೊಬ್ಬ ಪತ್ರಕರ್ತನ (Journalist) ಕನಸು. ಇನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ದೊಡ್ಡ ದೊಡ್ಡ ಪತ್ರಕರ್ತರು ಸಂದರ್ಶನ ಮಾಡಿದ್ದಾರೆ. ಇದೀಗ ಮಹಿಳಾ ಪತ್ರಕರ್ತೆಯೊಬ್ಬರು (Lady Journalist) ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶನದ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಂಡಿದ್ದಾರೆ. ಪತ್ರಕರ್ತೆಯ ಬರಹ ಈಗ ವೈರಲ್ (Viral) ಆಗಿದ್ದು, ಮೋದಿಯವರನ್ನು ಆಕೆ ಸಂದರ್ಶನ ಮಾಡುತ್ತಿರುವ ಫೋಟೋಗಳೂ (Photos) ಕೂಡ ವೈರಲ್ ಆಗಿದೆ. ವಿಶೇಷ ಅಂದ್ರೆ 3 ವರ್ಷಗಳ ಹಿಂದೆ ಮಾಡಿದ್ದ ಸಂದರ್ಶನದ ತುಣುಕು ಇದೀಗ ವೈರಲ್ ಆಗುತ್ತಿದೆ.
ಪ್ರಧಾನಿ ಸಂದರ್ಶನ ಮಾಡಿದ ಪತ್ರಕರ್ತೆ ಕರೀಶ್ಮಾ ಮೆಹ್ತಾ
‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಬ್ಲಾಗ್ ಮುಖ್ಯಸ್ಥೆ ಈ ಕರೀಶ್ಮಾ ಮೆಹ್ತಾ. ಇವರು ಖ್ಯಾತ ತಾರೆಯರು, ನಾಯಕರು ಹಾಗೂ ಉದ್ದಿಮೆದಾರರನ್ನು ಸಂದರ್ಶಿಸಿದ್ದಾರೆ. ಆ ಸಂದರ್ಶನಗಳು ‘ಹ್ಯೂಮನ್ಸ್ ಆಫ್ ಬಾಂಬೆ’ಯಲ್ಲಿ ಪ್ರಸಾರವಾಗಿದ್ದು, ಸಖತ್ ಜನಪ್ರಿಯವಾಗಿವೆ.
3 ವರ್ಷಗಳ ಹಿಂದೆ ಮೋದಿ ಸಂದರ್ಶನ ಮಾಡಿದ್ದ ಕರೀಷ್ಮಾ
ಕರೀಷ್ಮಾ ಮೆಹ್ತಾ 2019ರಲ್ಲಿ ಪ್ರಧಾನಿ ಮೋದಿ ಅವರನ್ನು ತಮ್ಮ ಬ್ಲಾಗ್ಗಾಗಿ ಸಂದರ್ಶನ ಮಾಡಿದ್ದರು. ಇದೀಗ ಸಂದರ್ಶನದ ಕುತೂಹಲಕಾರಿ ಅಂಶಗಳನ್ನು ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: India-Pakistan: ಗಡಿದಾಟಿ ಭಾರತಕ್ಕೆ ಬಂದ ಪಾಕಿಸ್ತಾನದ ಮಗು! ಮರಳಿ ತಾಯಿ ಮಡಿಲು ಸೇರಿದ್ದು ಹೇಗೆ ಕಂದಮ್ಮ?
“22 ನಿಮಿಷದ ಸಂದರ್ಶನ ನನಗೆ ತಿರುವು ನೀಡಿತು”
ಕರಿಷ್ಮಾ ಮೆಹ್ತಾ ತಮ್ಮ ಬರಹದಲ್ಲಿ ಪ್ರಧಾನಿ ಮೋದಿ ಸಂದರ್ಶಿಸುವ ಅವಕಾಶ ಬಂದಿದ್ದರ ಬಗ್ಗೆ ತಿಳಿಸಿದ್ದಾರೆ. ‘‘ಪ್ರಧಾನಿ ಮೋದಿಯವರನ್ನು ಸಂದರ್ಶಿಸುವ ಅವಕಾಶ ಲಭಿಸಿದಾಗ ನನಗೆ 27 ವರ್ಷ. 22 ನಿಮಿಷಗಳ ಆ ಸಂದರ್ಶನ ನನ್ನ ಜೀವನದಲ್ಲಿ ದೊಡ್ಡ ತಿರುವು ನೀಡಿತು’’ ಎಂದು ಕರೀಷ್ಮಾ ಮೆಹ್ತಾ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುಜರಾತಿಯಲ್ಲೇ ಮಾತನಾಡಿಸಿದ್ದ ಮೋದಿ
ಪ್ರಧಾನಿ ಮೋದಿ ಕರೀಷ್ಮಾ ಮೆಹ್ತಾ ಅವರನ್ನು ಮೊದಲು ಗುಜರಾತಿ ಭಾಷೆಯಲ್ಲೇ ಮಾತನಾಡಿಸಿದ್ದರಂತೆ. ಮೆಹ್ತಾ ಎನ್ನುವುದು ಅವರ ಹೆಸರಿನ ಜೊತೆ ಇರೋದ್ರಿ್ಂದ ಮೆಹ್ತಾ ಕೂಡ ಗುಜರಾತಿ ಎಂದು ಪ್ರಧಾನಿ ತಿಳಿದುಕೊಂಡರು ಮತ್ತು ಸಂದರ್ಶನ ಪ್ರಾರಂಭವಾಗುವ ಮುಂಚೆಯೇ "ಕೇಮ್ ಚೋ ಮೆಹ್ತಾ ಜೀ ಅಂದರೆ ನೀವು ಹೇಗಿದ್ದೀರಿ, ಮೆಹ್ತಾ ಜೀ? ಅಂತ ಗುಜರಾತಿಯಲ್ಲೇ ಕೇಳಿದ್ದರಂತೆ.
ಸಂದರ್ಶನದ ಬಳಿಕ ನನ್ನ ವೃತ್ತಿ ಜೀವನಕ್ಕೆ ತಿರುವು
ಪ್ರಧಾನಿ ಮೋದಿ ಅವರ ಸಂದರ್ಶನ ಮಾಡಿದ ಬಳಿಕ ನನ್ನ ವೃತ್ತಿ ಜೀವನಕ್ಕೆ ತಿರುವು ಸಿಕ್ಕಿತು ಅಂತ ಕರೀಷ್ಮಾ ಮೆಹ್ತಾ ಬರೆದುಕೊಂಡಿದ್ದಾರೆ. ಸುಮಾರು 22 ನಿಮಿಷಗಳ ಸಂದರ್ಶನವು ನನ್ನ ವೃತ್ತಿಜೀವನದ ಪಥವನ್ನು ಬದಲಾಯಿಸಿತು. ನಂತರ ಬಂದದ್ದು ನಮ್ಮ ಕೆಲಸಕ್ಕೆ ಮನ್ನಣೆ, ಜೊತೆಗೆ ಕೆಲವರು ದ್ವೇಷದಿಂದ ಟೀಕಿಸಿದ್ರು. ಜನಪ್ರಿಯ ಯುವ ನಿಯತಕಾಲಿಕದ ಮುಖಪುಟವು ನಮ್ಮನ್ನು ಕಟುವಾದ ಶೀರ್ಷಿಕೆಯೊಂದಿಗೆ ಟೀಕಿಸಿತು ಎಂದಿದ್ದಾರೆ. ಇನ್ನು ಈ ಸಂದರ್ಶನದ ನನ್ನ ಅನುಭವವನ್ನು ಇನ್ನೊಂದು ಬಾರಿ ಹಂಚಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
ಕೇಂದ್ರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ.
ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ಅಡಿಯಲ್ಲಿ, ಮಹಿಳೆಯರು ಸ್ವತಂತ್ರವಾಗಿ ಉದ್ಯೋಗ ಮಾಡುವ ಅವಕಾಶ ನೀಡಲಾಗುತ್ತಿದೆ. ನಯಾಪೈಸೆ ಖರ್ಚು ಮಾಡದೇ, ಕೇವಲ ಒಂದು ಅರ್ಜಿ ಸಲ್ಲಿಸುವ ಮೂಲಕ ಉಚಿತ ಹೊಲಿಗೆ ಯಂತ್ರ ಪಡೆದು ಸ್ವ-ಉದ್ಯೋಗ ಆರಂಭಿಸಬಹುದು. ಪ್ರತಿ ರಾಜ್ಯದ 50,000 ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಮಾಡಲಾಗಿದೆ.
ಇದನ್ನೂ ಓದಿ: PM Free Silai Machine 2022: ಕೇಂದ್ರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ.. ಇಲ್ಲಿ ಅರ್ಜಿ ಸಲ್ಲಿಸಿ
ಉಚಿತ ಹೊಲಿಗೆ ಯಂತ್ರ ಯೋಜನೆ 2022 ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಮಹಿಳೆಯರಿಗೆ ಉದ್ಯೋಗ ಒದಗಿಸಲು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ, ದೇಶದ ಬಡ ಮತ್ತು ಕಾರ್ಮಿಕ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ