ಪುಲ್ವಾಮ ದಾಳಿ, ಬಾಲಾಕೋಟ್ ಏರ್ ಸ್ಟ್ರೈಕ್, ಉಗ್ರ ನಿಗ್ರಹ ಕಾರ್ಯಾಚರಣೆ ಬಗ್ಗೆ ನೆಟ್ವರ್ಕ್18 ಜೊತೆ ಮೋದಿ ಮಾತು

ನೆಟ್​ವರ್ಕ್​ 18 ಸಮೂಹದ ಪ್ರಧಾನ ಸಂಪಾದಕ​ ರಾಹುಲ್ ಜೋಶಿ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಪುಲ್ವಾಮ ದಾಳಿಯ ನಂತರದ ಪರಿಸ್ಥಿತಿ, ಬಾಲಾಕೋಟ್​ ದಾಳಿಗೆ ಸರಕಾರ ನಡೆಸಿದ ಪೂರ್ವ ಸಿದ್ಧತೆ ಇತ್ಯಾದಿ ಕುರಿತು ಮಾತನಾಡಿದ್ಧಾರೆ.

news18
Updated:April 9, 2019, 3:12 PM IST
ಪುಲ್ವಾಮ ದಾಳಿ, ಬಾಲಾಕೋಟ್ ಏರ್ ಸ್ಟ್ರೈಕ್, ಉಗ್ರ ನಿಗ್ರಹ ಕಾರ್ಯಾಚರಣೆ ಬಗ್ಗೆ ನೆಟ್ವರ್ಕ್18 ಜೊತೆ ಮೋದಿ ಮಾತು
ನರೇಂದ್ರ ಮೋದಿ
news18
Updated: April 9, 2019, 3:12 PM IST
ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಬಹುಮತ ಗಳಿಸುವ ವಿಶ್ವಾಸದಲ್ಲಿದೆ. ಆದರೆ, ಬಿಜೆಪೆಯೇತರ ಜಾತ್ಯಾತೀತ ಪಕ್ಷಗಳು ಮಹಾಘಟಬಂಧನ್ ರಚಿಸಿಕೊಂಡು ಮೋದಿಗೆ ಪರ್ಯಾಯವಾಗುವ ಸೂಚನೆ ನೀಡಿವೆ. ಈ ನಡುವೆ ಕಳೆದ ಎರಡು ತಿಂಗಳಿನಿಂದ ದೇಶದ ರಾಜಕೀಯ ವಲಯದಲ್ಲಿ ಪುಲ್ವಾಮ ಹಾಗೂ ಬಾಲಾಕೋಟ್ ದಾಳಿ ಮೂಡಿಸಿರುವ ಸಂಚಲನ ಅಷ್ಟಿಷ್ಟಲ್ಲ.

ಫೆಬ್ರವರಿ 14ರಂದು ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಪುಲ್ವಾಮಾದಲ್ಲಿ ಭಾರತೀಯ ಸಿಆರ್​ಪಿಎಫ್ ಯೋಧರ ವಾಹನಗಳ ಮೇಲೆ ಆತ್ಮಾಹತ್ಯಾ ದಾಳಿ ನಡೆಸಿತ್ತು. ಪರಿಣಾಮ 40ಕ್ಕೂ ಹೆಚ್ಚು ಯೋಧರು ಮೃತ ಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ವಾಯುಸೇನೆ ಫೆ. 26ರಂದು ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಉಗ್ರಗಾಮಿಗಳ ಕ್ಯಾಂಪ್​ ಮೇಳೆ ವಾಯುದಾಳಿ ನಡೆಸಿತ್ತು.

ಇದನ್ನೂ ಓದಿ: ಬಾಲಾಕೋಟ್​​ ದಾಳಿಗೆ ಸಾಕ್ಷಿ ಕೇಳಿದ್ದು ಪಾಕ್​ಗೆ ಬಲ ನೀಡಿದಂತೆ; ನೆಟ್​ವರ್ಕ್​18 ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ ಮೋದಿ

ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರಗಾಮಿಗಳು ಮೃತರಾಗಿದ್ದಾರೆ ಎಂದು ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಮಾಹಿತಿ ನೀಡಿತ್ತಾದರೂ, ಪ್ರಮುಖ ವಿರೋಧ ಪಕ್ಷಗಳು ಈ ದಾಳಿಯ ಕುರಿತು ಸಾಕ್ಷ್ಯ ಕೇಳುತ್ತ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸಕ್ಕೆ ಮುಂದಾಗಿತ್ತು.  ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿಗಿಂತ ಈ ವಿಚಾರಗಳೇ ಪ್ರಮುಖ ಅಸ್ತ್ರಗಳಾಗಿ ಬದಲಾಗಿವೆ.

ಪ್ರಧಾನಿ ನರೇಂದ್ರ ಮೋದಿ ಭಾರತದ ಅತಿ ದೊಡ್ಡ ಮಾಧ್ಯಮ ಜಾಲವಾದ ನೆಟ್​ವರ್ಕ್​ 18ಗೆ ಸಂದರ್ಶನ ನೀಡಿದ್ದಾರೆ. ನೆಟ್​ವರ್ಕ್​ 18 ಸಮೂಹದ ಪ್ರಧಾನ ಸಂಪಾದಕರಾದ ​ರಾಹುಲ್ ಜೋಶಿ ಪ್ರಧಾನಿಯ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ಉಗ್ರಗಾಮಿಗಳನ್ನು ಸದೆಬಡಿಯಲು ಕೇಂದ್ರ ಸರಕಾರ ಕೈಗೊಂಡಿರುವ ಕ್ರಮ, ಪುಲ್ವಾಮ ದಾಳಿಯ ನಂತರದ ಪರಿಸ್ಥಿತಿ, ಬಾಲಾಕೋಟ್​ ದಾಳಿಗೆ ಸರಕಾರ ನಡೆಸಿದ ಪೂರ್ವ ಸಿದ್ಧತೆ ಹಾಗೂ ವಿರೋಧ ಪಕ್ಷಗಳ ಮನಸ್ಥಿತಿಯ ಕುರಿತು ಮೋದಿಯ ಮನದಾಳದ ಮಾತು ಇಲ್ಲಿದೆ.


ಇದನ್ನೂ ಓದಿ: ಕಾಶ್ಮೀರದ ದುಸ್ಥಿತಿಗೆ ನೆಹರೂ ನೀತಿ ಕಾರಣ; ರಾಜ್ಯದ ಅಭಿವೃದ್ಧಿಗೆ 370ನೇ ವಿಧಿ ಅಡ್ಡಿ: ಪ್ರಧಾನಿ ಮೋದಿ
Loading...

ರಾಹುಲ್ ಜೋಶಿ : ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಸೇನಾ ತುಕಡಿಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಫೆಬ್ರವರಿ 25ರಂದು ನಾನು ರೈಸಿಂಗ್ ಇಂಡಿಯಾ ಸಮ್ಮೇಳನದಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ.  ಈ ಭೇಟಿಯಾಗಿ ಕೆಲವೇ ಗಂಟೆಗಳಲ್ಲಿ ಬಾಲಾಕೋಟ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಜೆ ನಿಮ್ಮ ಮನಸಲ್ಲಿ ಏನಿದೆ ಎಂದು ಯಾರೂ ಊಹಿಸುವುದು ಸಾಧ್ಯವಾಗಿರಲಿಲ್ಲ.  ಆದರೆ, ಮರುದಿನ ಬೆಳಗ್ಗೆ 3.40ಕ್ಕೆ ಸೈನಿಕ ಕಾರ್ಯಾಚರಣೆ ಯಶಸ್ವಿಯಾದ ಮಾಹಿತಿ ನಿಮಗೆ ಲಭ್ಯವಾಗಿತ್ತು. ಆ 10-15 ದಿನಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಏನಿತ್ತು?

ನರೇಂದ್ರ ಮೋದಿ: ನಾನು ಮೊದಲ ದಿನವೇ ಈ ಕುರಿತು ಘೋಷಿಸಿದ್ದೆ. ನನ್ನ ಆಂಗಿಕ ಭಾಷೆ ಹಾಗೂ ಆಗಿನ ನನ್ನ ಭಾಷಣಗಳನ್ನು ಗಮನಿಸಿದರೆ ನಿಮಗದು ಅರ್ಥವಾಗುತ್ತದೆ ಎಂಬುದು ನನ್ನ ಭಾವನೆ. ಪಾಕಿಸ್ತಾನ ಹಾಗೂ ಉಗ್ರಗಾಮಿಗಳು ಭಾರತದ ಮೇಲೆ ದಾಳಿ ನಡೆಸಿ ದೊಡ್ಡ ತಪ್ಪಿಗೆ ಎಡೆಮಾಡಿಕೊಟ್ಟಿದ್ದರು. ಆದರೆ, ನಾನು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ. ಬದಲಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ. ಸೈನಿಕ ಕಾರ್ಯಾಚರಣೆ ನಡೆಸುವ ಕುರಿತು ರಕ್ಷಣಾ ಪಡೆ ಹಾಗೂ ನಮ್ಮ ಅಧಿಕಾರಿಗಳಿಂದ ಸಲಹೆ ಪಡೆದಿದ್ದೆ. ಅಷ್ಟರಲ್ಲಾಗಲೆ ನಮ್ಮ ರಕ್ಷಣಾ ಪಡೆ ಪುಲ್ವಾಮಾ ದಾಳಿ ಹಿಂದಿನ ಕೆಲವು ಉಗ್ರರನ್ನು ಸದೆಬಡಿದಿತ್ತು. ಇದು ನಿಜಕ್ಕೂ ಒಂದು ದೊಡ್ಡ ಸಾಧನೆಯೇ ಸರಿ. ಆದರೆ, ಇದು ನನಗೆ ತೃಪ್ತಿ ನೀಡಿರಲಿಲ್ಲ.  ನಾವು ಉಗ್ರಗಾಮಿಗಳ ಹೃದಯ ಭಾಗಕ್ಕೆ ಆಘಾತ ನೀಡದಿದ್ದಲ್ಲಿ ಅವರು ಪಾಠ ಕಲಿಯುವುದಿಲ್ಲ. 26/11 ಹಾಗೂ ಪಾರ್ಲಿಮೆಂಟ್ ಮೇಲಿನ ದಾಳಿ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಆದರೆ, ಈಗಿನ ದಾಳಿ ಅದಕ್ಕಿಂತ ಕ್ರೂರವಾಗಿತ್ತು. ಹೀಗಾಗಿಯೇ ನಾವು ಉರಿ ನಂತರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡುವ ತೀರ್ಮಾನಕ್ಕೆ ಬಂದೆವು. ಕೊನೆಗೆ ವಾಯು ದಾಳಿ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ ನಾವು ಇದರಲ್ಲಿ ಸಫಲರಾದೆವು.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು

ರಾಹುಲ್ ಜೋಶಿ : ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿಯ ಹೊರತಾಗಿಯೂ ಲಷ್ಕರ್-ಇ-ತೋಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರರು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರವೇನು?

ನರೇಂದ್ರ ಮೋದಿ :  ಇತ್ತೀಚಿನ ದಿನಗಳಲ್ಲಿ ಉಗ್ರಗಾಮಿಗಳ ದಾಳಿ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಪುಲ್ವಾಮಾ ದಾಳಿ ತೀರಾ ಅನಿಶ್ಚಿತ. ಗಡಿ ಭಾಗದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಉಗ್ರಗಾಮಿಗಳನ್ನು ಕ್ರಮೇಣ ಸದೆಬಡಿಯಲಾಗಿದೆ. ಈಗ ಉಗ್ರಗಾಮಿಗಳು ದೇಶದೊಳಗೆ ಭಯೋತ್ಪಾದಕ ಕೃತ್ಯ ನಡೆಸಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: 60 ವರ್ಷದಲ್ಲಿ ಮಾಡದ್ದನ್ನು ಕಾಂಗ್ರೆಸ್​​ ಈಗ ಮಾಡಲು ಸಾಧ್ಯವೇ?: ‘ನ್ಯಾಯ್​​ ಯೋಜನೆ’ ಬಗ್ಗೆ ಮೋದಿ ವ್ಯಂಗ್ಯ!

ರಾಹುಲ್ ಜೋಶಿ : ಬಾಲಾಕೋಟ್ ವಾಯುದಾಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ನಿಮ್ಮ ಬಳಿ ನಿರಂತರವಾಗಿ ಸಾಕ್ಷಿ ಕೇಳಿ ಪ್ರಶ್ನೆ ಮಾಡುತ್ತಿದ್ದಾರೆ. ದಾಳಿಯಲ್ಲಿ 250 ಉಗ್ರರು ಮರಣ ಹೊಂದಿದ್ದಾರೆ ಎಂಬ ಸಂಖ್ಯೆ ಎಲ್ಲಿಂದ ಲಭ್ಯವಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಬಳಿ ಸಾಕ್ಷಿ ಇದೆಯೇ?

ನರೇಂದ್ರ ಮೋದಿ: ನಾವು ಉಗ್ರಗಾಮಿಗಳ ವಿರುದ್ಧ ಸೈನಿಕ ಕಾರ್ಯಾಚರಣೆಗೆ ಇಳಿದಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಇಂತಹ ಪ್ರಶ್ನೆಗಳು ಉಗ್ರಗಾಮಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ, ರಾಷ್ಟ್ರವನ್ನು ಗೊಂದಲಕ್ಕೀಡು ಮಾಡಿದಂತಾಗುತ್ತದೆ ಅಲ್ಲದೆ ನಮ್ಮ ಸೈನಿಕರ ಸಾಮರ್ಥ್ಯವನ್ನು ಶಂಕಿಸಿದಂತಾಗುತ್ತದೆ.  ಇಂತಹ ಸಂದರ್ಭದಲ್ಲಿ ಸೈನಿಕರನ್ನು ಹುರಿದುಂಬಿಸುವಂತಹ ಮಾತುಗಳನ್ನು ಆಡಬೇಕು. ಅವರ ಕೊಡುಗೆಗಳನ್ನು ಶ್ಲಾಘಿಸಬೇಕು. ಈ ಹಿಂದೆಯೂ ನಾವು ಸಾಕಷ್ಟು ಯುದ್ಧಗಳನ್ನು ಮಾಡಿದ್ದೇವೆ ಆದರೆ. ಆಗಿಲ್ಲದ ಅನುಮಾನ ಈಗೇಕೆ? ಈ ಅವಧಿಯಲ್ಲಿ ಸಾಕಷ್ಟು ಚುನಾವಣೆಗಳು ಸಹ ನಡೆದಿವೆ ಆದರೆ ಎಲ್ಲೂ ಈತರಹದ ಮಾತುಗಳು ಕೇಳಿಬಂದಿರಲಿಲ್ಲ. ಅಧಿಕಾರದಿಂದ ವಂಚಿತರಾದ ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆಗೆ ಏರಲು ಹಾತೊರೆಯುತ್ತಿದೆ. ಇದೇ ಕಾರಣಕ್ಕೆ ಈ ರೀತಿಯ ಮಾತುಗಳನ್ನು ಆಡುತ್ತಿದೆ. ಹೀಗಿದ್ದೂ ದಾಳಿಯ ಕುರಿತು ಅವರಿಗೆ ಸಾಕ್ಷಿ ಬೇಕಾದಲ್ಲಿ ಪಾಕಿಸ್ತಾನವೇ ಅದಕ್ಕೆ ದೊಡ್ಡ ಸಾಕ್ಷಿಯಾಗಿದೆ. ದಾಳಿಯಾಗದಿದ್ದಲ್ಲಿ ಬೆಳಗ್ಗೆ 5 ಗಂಟೆಗೆ ಎದ್ದು ಪಾಕ್ ಸರಕಾರ ಏಕೆ ಟ್ವೀಟ್ ಮಾಡಬೇಕು? ದಾಳಿಯ ಕುರಿತು ಭಾರತ ಖಚಿತ ಪಡಿಸುವುದಕ್ಕೂ ಮುಂಚಿತವಾಗಿಯೇ ಪಾಕಿಸ್ತಾನ ಖಚಿತಪಡಿಸಿತ್ತು. ದಾಳಿಯ ಕುರಿತು ಪಾಕಿಸ್ತಾನವೇ ಖಚಿತಪಡಿಸಿರುವುದು ಸಾಕ್ಷಿಯಲ್ಲವೆ?

ಇದನ್ನೂ ಓದಿ: AFSPA ಹಿಂಪಡೆಯುವುದೂ ಒಂದೇ, ದೇಶ ಕಾಯುವ ಸೈನಿಕರನ್ನು ಗಲ್ಲಿಗೇರಿಸುವುದೂ ಒಂದೇ: ಪ್ರಧಾನಿ ಮೋದಿ

ರಾಹುಲ್ ಜೋಶಿ : ಪಾಕಿಸ್ತಾನ ಉಗ್ರಗಾಮಿಗಳನ್ನು ಸದೆಬಡಿಯುವ ಕುರಿತು ಭಾರತ ಎಂತಹ ನಿರೀಕ್ಷೆಗಳನ್ನು ಹೊಂದಬಹುದು? ಪಾಕಿಸ್ತಾನದ ಸೈನ್ಯದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಅಧ್ಯಕ್ಷ ಇಮ್ರಾನ್ ಖಾನ್ ಭಾರತದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ದ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಿಕೆ  ನೀಡಿದ್ದಾರೆ.

ನರೇಂದ್ರ ಮೋದಿ : ಪಾಕಿಸ್ತಾನದ ಯಾವುದೇ ನಿರ್ಧಾರಗಳನ್ನು ನಾವು ನಂಬುವುದಿಲ್ಲ. ಪಾಕಿಸ್ತಾನ ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಹೀಗಾಗಿ ಪಾಕಿಸ್ತಾನ ಹೇಳುವುದನ್ನು ಭಾರತೀಯ ನಾಗರೀಕ ಎಂದಿಗೂ ನಂಬಲಾರ. ಆದರೆ, ಇಲ್ಲಿನ ವಿರೋಧ ಪಕ್ಷಗಳು ಸಹ ಪಾಕಿಸ್ತಾನದ ಧಾಟಿಯಲ್ಲೇ ಮಾತುನಾಡುತ್ತಿರುವುದು ದುರಾದೃಷ್ಟಕರ. ಭಾರತದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಹಾಗಾಗಿ ಈ ಸೈನಿಕ ಕಾರ್ಯಾಚರಣೆಯನ್ನು ಚುನಾವಣೆಯ ಜೊತೆಗೆ ಸಂಬಂಧ ಕಲ್ಪಿಸುವುದು ತರವಲ್ಲ.

First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...