Narendra Modi: ಪುಟಿನ್ ಎದುರೇ ಯುದ್ಧ ಬೇಡ ಎಂದ ಮೋದಿ! ಭಾರತದ ಸಲಹೆಗೆ 'ನಮೋ' ಎಂದ ವಿಶ್ವದ ಮಾಧ್ಯಮಗಳು

ಇಡೀ ವಿಶ್ವದ ಪ್ರಮುಖ ಮಾಧ್ಯಮಗಳು ನರೇಂದ್ರ ಮೋದಿಯವರ ಮಾತಿಗೆ ಮೆಚ್ಚುಗೆ ಸೂಚಿಸಿದೆ ಅಂತ ವರದಿಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ್ದು, ಅದನ್ನು ನಿಲ್ಲಿಸುವಂತೆ ಪುಟಿನ್‌ಗೆ ನರೇಂದ್ರ ಮೋದಿ ಸಲಹೆ ನೀಡಿದ್ದರು. ಮೋದಿಯವರ ಇದೇ ಮಾತಿಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ಸೂಚಿಸಿವೆ.

ಮೋದಿ-ಪುಟಿನ್ ಚರ್ಚೆ (ಸಂಗ್ರಹ ಚಿತ್ರ)

ಮೋದಿ-ಪುಟಿನ್ ಚರ್ಚೆ (ಸಂಗ್ರಹ ಚಿತ್ರ)

  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆಯಷ್ಟೇ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಸೇರಿದಂತೆ ವಿಶ್ವದ ಪ್ರಮುಖ ನಾಯಕರು (World leaders) ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯ (Wishes) ಕೋರಿದ್ದರು. ಇದೀಗ ಮತ್ತೊಮ್ಮೆ ಇಡೀ ವಿಶ್ವದ ಪ್ರಮುಖ ಮಾಧ್ಯಮಗಳು (Media) ನರೇಂದ್ರ ಮೋದಿಯವರ ಮಾತಿಗೆ ಮೆಚ್ಚುಗೆ ಸೂಚಿಸಿದೆ ಅಂತ ವರದಿಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ (Russia Ukraine War) ಮುಂದುವರೆದಿದ್ದು, ಅದನ್ನು ನಿಲ್ಲಿಸುವಂತೆ ಪುಟಿನ್‌ಗೆ ನರೇಂದ್ರ ಮೋದಿ ಸಲಹೆ ನೀಡಿದ್ದರು. ಮೋದಿಯವರ ಇದೇ ಮಾತಿಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ಸೂಚಿಸಿವೆ.

ಶೃಂಗಸಭೆಯಲ್ಲಿ ಮೋದಿ-ಪುಟಿನ್ ಮುಖಾಮುಖಿ

ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಕೌನ್ಸಿಲ್ ಆಫ್ ಹೆಡ್ಸ್‌ನ 22ನೇ ಶೃಂಗಸಭೆಯು ((SCO-CoHS) ಶುಕ್ರವಾರ ಸಮರ್‌ಕಂಡ್‌ನಲ್ಲಿ ನಡೆಯಿತು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರ ಮುಖಾಮುಖಿಯಾದರು. ಈ ವೇಳೆ ಉಭಯ ನಾಯಕರು ಯುದ್ಧ ಹಾಗೂ ಇತರೇ ಮಹತ್ವದ ವಿಚಾರಗಳ ಬಗ್ಗೆ ಪರಸ್ಪರ ಮಾತನಾಡಿದರು.

“ಯುದ್ಧಕ್ಕೆ ಇದು ಸೂಕ್ತ ಸಮಯವಲ್ಲ” ಎಂದ ಮೋದಿ

ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ ಇಬ್ಬರು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕುರಿತಂತೆ ಸಭೆಯಲ್ಲಿ ಮಾತನಾಡಿದ್ರು. ಈ ವೇಳೆ ಮಾತನಾಡಿದ ಮೋದಿ, ಯುದ್ಧಕ್ಕೆ ಇದು ಸೂಕ್ತವಾದ ಸಮಯ ಅಲ್ಲ, ಹಾಗಾಗಿ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವತ್ತ ನೀವು ಗಮನ ಹರಿಸುವುದು ಒಳಿತು ಅಂತ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: PM Modi Birthday: ಹುಟ್ಟುಹಬ್ಬದಂದು ಮೋದಿ ತಮ್ಮ ತಾಯಿಯನ್ನು ಯಾಕೆ ಭೇಟಿಯಾಗಿಲ್ಲ? ಇದರ ಹಿಂದಿನ ಕಾರಣ ಇಲ್ಲಿದೆ

ಮೋದಿ ಸಲಹೆಗೆ ಪುಟಿನ್ ಹೇಳಿದ್ದೇನು?

ಇನ್ನು ನರೇಂದ್ರ ಮೋದಿ ಸಲಹೆಗೆ ರಷ್ಯಾ ಅಧ್ಯಕ್ಷ ಪುಟಿನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. “ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಂಘರ್ಷದ ಬಗ್ಗೆ ನೀವು ನಿರಂತರವಾಗಿ ಕಾಳಜಿ ವ್ಯಕ್ತಪಡಿಸುತ್ತಿದ್ದೀರಿ. ನಿಮ್ಮ ಕಾಳಜಿಯ ಬಗ್ಗೆ, ನಿಮ್ಮ ನಿಲುವಿನ ಬಗ್ಗೆ ನನಗೆ ತಿಳಿದಿದೆ. ಇದನ್ನು ಆದಷ್ಟು ಬೇಗ ನಿಲ್ಲಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ. ದುರದೃಷ್ಟವಶಾತ್, ಎದುರಾಳಿ ಪಕ್ಷ, ಉಕ್ರೇನ್ ನಾಯಕತ್ವ, ಸಮಾಲೋಚನಾ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿತು ಮತ್ತು ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುತ್ತದೆ ಎಂದು ಘೋಷಿಸಿತು, ಅವರು ಹೇಳಿದಂತೆ ಯುದ್ಧಭೂಮಿಯಲ್ಲಿ ಅದೇನೇ ಇದ್ದರೂ, ನಾವು ಯಾವಾಗಲೂ ಸತ್ಯದ ಪರ ಇರುತ್ತೇವೆ. ಸದ್ಯ ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವು ತಿಳಿದಿದ್ದೀರಿ ಅಂತ ಹೇಳಿದ್ದಾರೆ ಎನ್ನಲಾಗಿದೆ.

ಮೋದಿ ನಡೆಗೆ ಅಮೆರಿಕನ್ ಮಾಧ್ಯಮಗಳಿಂದ ಮೆಚ್ಚುಗೆ

ಯುದ್ಧದ ಕುರಿತಂತೆ ಪುಟಿನ್‌ಗೆ ಸಲಹೆ ನೀಡಿದ್ದಕ್ಕಾಗಿ ಅಮೆರಿಕನ್ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿವೆ. "ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಮೋದಿ ಪುಟಿನ್ ಅವರನ್ನು ಖಂಡಿಸಿದ್ದಾರೆ" ಎಂದು ವಾಷಿಂಗ್ಟನ್ ಪೋಸ್ಟ್ ಶೀರ್ಷಿಕೆಯಲ್ಲಿ ವರದಿ ಮಾಡಿದೆ.ಮ"ಇಂದಿನ ಯುಗವು ಯುದ್ಧದ ಯುಗವಲ್ಲ, ಮತ್ತು ನಾನು ಈ ಬಗ್ಗೆ ನಿಮ್ಮೊಂದಿಗೆ ಫೋನ್ನಲ್ಲಿ ಮಾತನಾಡಿದ್ದೇನೆ" ಎಂದು ಮೋದಿ ಹೇಳಿದ್ದಾಗಿ ಅಮೆರಿಕನ್ ದಿನಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: PM Modi Birthday: ಮೋದಿಗೆ ಶುಭಾಶಯ ಕೋರಿದ ದೀದಿ, ರಾಹುಲ್‌ ಗಾಂಧಿ; ಕೇಜ್ರಿವಾಲ್‌ರಿಂದಲೂ ಶುಭ ಹಾರೈಕೆ

ಅಂತಾರಾಷ್ಟ್ರೀಯ ಮಾಧ್ಯಮಗಳಿಂದಲೂ ಮೋದಿ ಗುಣಗಾನ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಅವರು ವ್ಯಕ್ತಪಡಿಸಿದ ಕಳವಳ ಹಾಗೂ ಜಾಗತಿಕ ಸಮುದಾಯದ ಕುರಿತಾಗಿ ಅವರು ವ್ಯಕ್ತಪಡಿಸಿದ ನಿಲುವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳೂ ಕೂಡ ಮುಕ್ತ ಕಂಠದಿಂದ ಶ್ಲಾಘಿಸಿವೆ. ತನ್ನ ಬಹುಕಾಲದ ಗೆಳೆಯ ರಷ್ಯಾಗೆ ಸ್ನೇಹದ ಸಲುಗೆಯಲ್ಲೇ ಬುದ್ದಿವಾದ ಹೇಳಿದ ಭಾರತದ ನಿಲುವಿಗೆ ಮೆಚ್ಚುಗೆ ವ್ಯಕ್ತವಾಗಿದೆ.
Published by:Annappa Achari
First published: