ವಿದೇಶ ಪ್ರವಾಸದ ವೇಳೆ ಮೋದಿ ಪಡೆದ ಗಿಫ್ಟ್ಗಳ ಬೆಲೆ 12 ಲಕ್ಷ ರೂ.!
news18
Updated:August 27, 2018, 9:28 AM IST
news18
Updated: August 27, 2018, 9:28 AM IST
ನ್ಯೂಸ್ 18 ಕನ್ನಡ
ನವದೆಹಲಿ (ಆ.27): ಕಳೆದ ಒಂದು ವರ್ಷದಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಟ್ಟು 12.57 ಲಕ್ಷ ಮೌಲ್ಯದ 168 ಉಡುಗೊರೆಗಳು ಸಿಕ್ಕಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ವಿಭಾಗ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಅವರು ಜುಲೈ 2017ರಿಂದ ಜೂನ್ 2018ರವರೆಗೆ ಕೈಗೊಂಡ ವಿದೇಶ ಪ್ರವಾಸದ ವೇಳೆ ಈ ಗಿಫ್ಟ್ಗಳು ಸಿಕ್ಕಿವೆ. ಇವುಗಳಲ್ಲಿ 1.10 ಲಕ್ಷ ರೂ. ಬೆಲೆಯ 'ಮೋಂಟ್ಬ್ಲಾಂಕ್' ಕೈ ಗಡಿಯಾರ, ಬೆಳ್ಳಿಯ ಪದಕ, 3.4 ಲಕ್ಷ ರೂ. ಬೆಲೆಯ ಎರಡು ಮೋಂಟ್ಬ್ಲಾಂಕ್ ಪೆನ್ನುಗಳು ಸೇರಿವೆ.
ಪ್ರಧಾನಿ ಅವರಿಗೆ ಪುತ್ಥಳಿಗಳು, ಕಲಾಕೃತಿಗಳು, ಪುಸ್ತಕಗಳು, ಭಾವಚಿತ್ರಗಳು, ಬುಲೆಟ್ ಟ್ರೇನ್ ಮತ್ತು ಮಸೀದಿಗಳ ಪ್ರತಿಕೃತಿಗಳನ್ನೂ ಉಡುಗೊರೆಯಾಗಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ ಮೋದಿ ಅವರು ಇಸ್ರೇಲ್, ಜರ್ಮನಿ, ಚೀನಾ, ಯುಎಇ, ರಷ್ಯಾ, ಬ್ರಿಟನ್, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ 20 ದೇಶಗಳಿಗೆ ಭೇಟಿ ನೀಡಿದ್ದರು.

Loading...