Union Budget 2019: ಬಜೆಟ್‌ ಗಾತ್ರ ಹಿಗ್ಗಿಸಿದ ಮೋದಿ ಸರ್ಕಾರ!

2013 ರಿಂದ 2018ರವರೆಗೆ ಪ್ರತಿ ವರ್ಷ ಬಜೆಟ್‌ನ ಜಿಡಿಪಿಯ ಶೇಕಡ ಗಾತ್ರವನ್ನು ಶೇ 14.2ರಿಂದ ಶೇ 12.7ಕ್ಕೆ ಇಳಿಸಲಾಗಿತ್ತು. 2019-20ರಲ್ಲಿಯೂ ಈ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿತ್ತು.

Ganesh Nachikethu | news18
Updated:February 1, 2019, 9:34 AM IST
Union Budget 2019: ಬಜೆಟ್‌ ಗಾತ್ರ ಹಿಗ್ಗಿಸಿದ ಮೋದಿ ಸರ್ಕಾರ!
ಮೋದಿ ಮತ್ತು ಅರುಣ್​​ ಜೇಟ್ಲಿ
Ganesh Nachikethu | news18
Updated: February 1, 2019, 9:34 AM IST
ನವದೆಹಲಿ(ಫೆ.01): ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಬಜೆಟ್​​ ಮಂಡನೆಗೆ ಮುಂದಾಗಿದೆ. ಈಗಾಗಲೇ ಲೇಖಾನುದಾನ ಪಡೆಯುವ ಸಂಪ್ರದಾಯ ಕೈಬಿಟ್ಟು ಕೇಂದ್ರ ಮಧ್ಯಂತರ ಬಜೆಟ್‌ ಮಂಡಿಸುವ ನಿರ್ಧಾರಕ್ಕೆ ಬಂದಿದೆ. ಅಲ್ಲದೇ ಬಜೆಟ್‌ನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡವಾರು ಪ್ರಮಾಣವನ್ನು ತಗ್ಗಿಸುವ ವಾಗ್ದಾನ ಕೂಡ ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ. ಇದೀಗ ಜನರಿಗೆ ಅಪಾರ ಕೊಡುಗೆಗೆಳನ್ನು ನೀಡಲು ಮುಂದಾದ ಪ್ರಧಾನಿ ಮೋದಿ, ಕಾನೂನನ್ನು ಗಾಳಿಗೆ ತೂರಿ ಬಜೆಟ್‌ ಗಾತ್ರವನ್ನು ಹಿಗ್ಗಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಕಾನೂನನ್ನು ಲೆಕ್ಕಿಸದೇ ಚುನಾವಣೆ ಸಂದರ್ಭದಲ್ಲಿ ಲೇಖಾನುದಾನ ಪಡೆಯುವ ಸಂಪ್ರದಾಯ ಕೇಂದ್ರ ಕೈಬಿಟ್ಟಿದೆ. ಜತೆಗೆ ಯಾವುದಕ್ಕೂ ಲೆಕ್ಕಿಸದೇ ಮಧ್ಯಂತರ ಬಜೆಟ್​​ ಮಂಡನೆಗೆ ಮುಂದಾಗಿದೆ. ಮತದಾರರನ್ನು ಸೆಳೆಯಲೆಂದೇ ಮಂಡಿಸುತ್ತಿರುವ ಬಜೆಟ್​​ ಪ್ರಮಾಣವನ್ನು ಮೋದಿ ಸರ್ಕಾರ ಹಿಗ್ಗಿಸಿದೆ. ವಿಪಕ್ಷಗಳ ವಿರೋಧದ ನಡುವೆಯೂ ಹಿಗ್ಗಿಸಿದ ಬಜೆಟ್​​​ ಹಣವನ್ನು ಕೇಂದ್ರ ಕೃಷಿ, ನವೋದ್ಯಮ, ಮಹಿಳೆ ಮತ್ತು ಯುವ ಸಮುದಾಯಕ್ಕೆ ವಿನಿಯೋಗ ಮಾಡಲು ಚಿಂತಿಸಿದೆ. ಹೀಗಾಗಿಯೇ ಗರಿಷ್ಠ ಪ್ರಮಾಣದಲ್ಲಿ ಅನುದಾನ ಹೆಚ್ಚಿಸಬೇಕಾಗಿ ಬಂತು ಎನ್ನಲಾಗಿದೆ.

ಕೇಂದ್ರ ಸರ್ಕಾರ  ಕೃಷಿ ವಲಯದ ಪರಿಹಾರಕ್ಕಾಗಿ ₹ 1.25 ಲಕ್ಷ ಕೋಟಿ, ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಲು ₹ 200 ಕೋಟಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲು ಯೋಚಿಸಿದೆ. ಕೃಷಿ ವಲಯದ ಕೊಡುಗೆ ಎಂದರೇ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವುದು; ಸಣ್ಣ ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವುದು; ಮತ್ತು ಸಾಲದ ಪ್ರಮಾಣ ಹೆಚ್ಚಿಸುವುದಾಗಿದೆ. ಇನ್ನು 'ನರೇಗಾ'ಗೆ ವಿಶೇಷ ಆದ್ಯತೆ ನೀಡಿರುವ ಮೋದಿ, ಗ್ರಾಮೀಣ ಅಭಿವೃದ್ಧಿ ಮತ್ತು ರೈಲ್ವೆಯ ವಾರ್ಷಿಕ ಅನುದಾನವನ್ನು ಹೆಚ್ಚಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಕೇಂದ್ರ ಮಧ್ಯಂತರ ಬಜೆಟ್‌ 2019: ಬರಪೂರ ಕೊಡುಗೆ ನಿರೀಕ್ಷೆ!

ಈ ಹಿಂದೆ ಯಾವುತ್ತು ಮಂಡಿಸದ ರೀತಿಯಲ್ಲಿ ಮೋದಿ ಸರ್ಕಾರದ ಇಂದಿನ ಮಧ್ಯಂತರ ಬಜೆಟ್​​ ರೂಪುಗೊಂಡಿದೆ. ಜನರ ನಿರೀಕ್ಷೆಗಳನ್ನು ಈಡೇರಿಸಲೆಂದೇ ಬೆಜೆಟ್​​​ ಸ್ವರೂಪ ಬದಲಿಸಲಾಗಿದೆ. ಆರ್ಥಿಕತೆಯ ಹಿತಾಸಕ್ತಿ ದೃಷ್ಟಿಯಿಂದ ಮಧ್ಯಂತರ ಬಜೆಟ್‌ ಮಂಡಿಸಲಾಗುವುದು ಎಂದಿರುವ ಹಣಕಾಸು ಸಚಿವರು ಆಶಯಕ್ಕೆ ಪೂರಕವಾಗಿ  ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಮುನ್ನ ಕೇಂದ್ರ ಬಜೆಟ್​​​; ಮತದಾರನ ಓಲೈಕೆಗೆ ಮುಂದಾಯ್ತ ಮೋದಿ ಸರ್ಕಾರ?

2013 ರಿಂದ 2018ರವರೆಗೆ ಪ್ರತಿ ವರ್ಷ ಬಜೆಟ್‌ನ ಜಿಡಿಪಿಯ ಶೇಕಡ ಗಾತ್ರವನ್ನು ಶೇ 14.2ರಿಂದ ಶೇ 12.7ಕ್ಕೆ ಇಳಿಸಲಾಗಿತ್ತು. 2019-20ರಲ್ಲಿಯೂ ಈ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿತ್ತು. ಮತದಾರರನ್ನು ಓಲೈಕೆಗೆ ತೀರ್ಮಾನಿಸಿರುವ ಎನ್‌ಡಿಎ ಸರ್ಕಾರ, ಕಾನೂನು ಗಾಳಿಗೆ ತೂರಿದೆ. ಎಲ್ಲವನ್ನೂ ಕೈಬಿಟ್ಟು ಅನೇಕ ಕೊಡುಗೆಗಳನ್ನು ನೀಡಲು ಬಜೆಟ್‌ನ ಗಾತ್ರ ಹಿಗ್ಗಿಸಲು ಎನ್ನುತ್ತಾರೆ ತಜ್ಙರು.
Loading...

--------------
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ