ಮನೆಯೊಳಗೇ ಯೋಗ ಮಾಡಿ​; ಪ್ರಧಾನಿ ಮೋದಿಯ ಫಿಟ್​ನೆಸ್​ ವಿಡಿಯೋ ವೈರಲ್

Narendra Modi Fitness Video: ನಿನ್ನೆ ಮನ್ ಕಿ ಬಾತ್​ನಲ್ಲಿ ಮಾತನಾಡುವಾಗಲೇ ಟ್ವಿಟ್ಟರ್​ನಲ್ಲಿ ಕೆಲವು ವಿಡಿಯೋಗಳನ್ನು ಶೇರ್ ಮಾಡುತ್ತೇನೆ ಎಂದಿದ್ದ ಪ್ರಧಾನಿ ಮೋದಿ, ತಮ್ಮ ದಿನಚರಿ ಹೇಗಿರಲಿದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sushma Chakre | news18-kannada
Updated:March 30, 2020, 11:49 AM IST
ಮನೆಯೊಳಗೇ ಯೋಗ ಮಾಡಿ​; ಪ್ರಧಾನಿ ಮೋದಿಯ ಫಿಟ್​ನೆಸ್​ ವಿಡಿಯೋ ವೈರಲ್
ನರೇಂದ್ರ ಮೋದಿ ಯೋಗ ವಿಡಿಯೋ
  • Share this:
ಬೆಂಗಳೂರು (ಮಾ. 30): ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಫಿಟ್​ನೆಸ್​ ಸೀಕ್ರೆಟ್​ ಅನ್ನು ಬಿಚ್ಚಿಟ್ಟಿದ್ದಾರೆ. ಮನ್ ಕಿ ಬಾತ್​ನಲ್ಲಿ ತಮ್ಮ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಮೋದಿ ಯೋಗಾಸನದ ಹಳೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ನಿನ್ನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಒಬ್ಬರು ನನ್ನ ಫಿಟ್​ನೆಸ್ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕಾಗಿ ಯೋಗಾಸನದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ನೀವು ಕೂಡ ದಿನನಿತ್ಯ ಯೋಗಾಸನ ಮಾಡುತ್ತಿದ್ದೀರ ಎಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಲಾಕ್​ಡೌನ್​ನಿಂದ ಮನೆಯೊಳಗೆ ಇರುವವರು ಯೋಗಾಭ್ಯಾಸ ಮಾಡಿ ದೇಹವನ್ನು ಆರೋಗ್ಯಯುತವಾಗಿರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.ನಿನ್ನೆ ಮನ್ ಕಿ ಬಾತ್​ನಲ್ಲಿ ಮಾತನಾಡುವಾಗಲೇ ಟ್ವಿಟ್ಟರ್​ನಲ್ಲಿ ಕೆಲವು ವಿಡಿಯೋಗಳನ್ನು ಶೇರ್ ಮಾಡುತ್ತೇನೆ ಎಂದಿದ್ದ ಪ್ರಧಾನಿ ಮೋದಿ, ತಮ್ಮ ದಿನಚರಿ ಹೇಗಿರಲಿದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ಮನೆಯೊಳಗೆ ಬಂಧಿಗಳಾಗಿರುವ ಭಾರತೀಯರೇ ನಾಳೆ ದೇಶವನ್ನು ಕಟ್ಟಬೇಕಾಗಿದೆ ಎಂಬುದನ್ನು ಮರೆಯಬಾರದು. ಯೋಗದಿಂದ ನನಗೆ ಬಹಳ ಪ್ರಯೋಜನವಾಗಿದೆ. ನಾನು ಯೋಗ ಟೀಚರ್ ಅಲ್ಲ, ಫಿಟ್​ನೆಸ್​ ಗುರುವೂ ಅಲ್ಲ. ನಾನು ಕೂಡ ಎಲ್ಲರಂತೆ ಯೋಗಾಭ್ಯಾಸಿ ಅಷ್ಟೆ. ಯೋಗದ ಬಗ್ಗೆ ಕೆಲವು ವಿಡಿಯೋಗಳನ್ನು ಶೇರ್ ಮಾಡುತ್ತೇನೆ. ನೀವೂ ಅದನ್ನು ಅನುಕರಿಸಿ ಎಂದು ಮೋದಿ ನಿನ್ನೆ ಹೇಳಿದ್ದರು. ಅದರಂತೆ ಇಂದು ಯೋಗಾಭ್ಯಾಸದ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕೊರೋನಾಗೆ ಮತ್ತೊಂದು ಬಲಿ; ದೇಶದಲ್ಲಿ ಸಾವಿನ ಸಂಖ್ಯೆ 29ಕ್ಕೆ ಏರಿಕೆ

 
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading