PM Modi: ನಿಮ್ಮ ಸಾಧನೆ ಮೂಲಕ ಸೋಲಿನ ಮನಸ್ಥಿತಿಯನ್ನು ಗೆದ್ದಿದ್ದೀರಾ: ಪ್ರಧಾನಿ ಮೋದಿ

ನಿಮ್ಮ ಸಾಧನೆಯು ದೇಶದ ಸಂಪೂರ್ಣ ಕ್ರೀಡಾ ಸಮುದಾಯದ ಮನೋಬಲವನ್ನು ಹೆಚ್ಚಿಸಿದೆ.

ಪ್ರಧಾನಿ ಜೊತೆ ಪ್ಯಾರಾಲಂಪಿಕ್​ ಸ್ಪರ್ಧಿಗಳು

ಪ್ರಧಾನಿ ಜೊತೆ ಪ್ಯಾರಾಲಂಪಿಕ್​ ಸ್ಪರ್ಧಿಗಳು

 • Share this:
  ನವದೆಹಲಿ (ಸೆ. 12):  ಟೋಕಿಯೋ ಪ್ಯಾರಾಲಂಪಿಕ್​ನಲ್ಲಿ (Tokyo Para Olympic) ಅದ್ಭುತ ಸಾಧನೆ ತೋರಿದ ಕ್ರೀಡಾ ಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ವಿಶೇಷ ಸಂವಾದ ನಡೆಸಿದರು. ಈ ವೇಳೆ ಕ್ರೀಡಾಪಟುಗಳನ್ನು ಶ್ಲಾಘಿಸಿದ ಪ್ರಧಾನಿ, ಪ್ಯಾರಾ ಒಲಂಪಿಕ್​ನಲ್ಲಿ ಭಾರತದ ಸಾಧನೆಗೆ ಕ್ರೀಡಾ ಸಮುದಾಯವನ್ನು ಉತ್ತೇಜಿಸುವ ಜೊತೆಗೆ ನಿಮ್ಮ ಪ್ರದರ್ಶನಗಳು ಅನೇಕರಿಗೆ ಸ್ಪೂರ್ತಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಪ್ಯಾರಲಿಂಪಿಕ್‍ನಲ್ಲಿ  ಪ್ರತಿಯೊಬ್ಬ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರ ಯಶಸ್ಸಿನ ಕುರಿತು ಚರ್ಚೆ ನಡೆಸಿದರು. 

  ನಿಮ್ಮ ಸಾಧನೆಯು ದೇಶದ ಸಂಪೂರ್ಣ ಕ್ರೀಡಾ ಸಮುದಾಯದ ಮನೋಬಲವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಉದಯೋನ್ಮುಖ ಕ್ರೀಡಾಪಟುಗಳು ಹೆಚ್ಚಿನ ಸ್ಪೂರ್ತಿ ನೀಡುತ್ತದೆ. ನಿಮ್ಮ ಈ ಸಾಧನೆಯಿಂದ ಅನೇಕರು ಕ್ರೀಡಾ ಕ್ಷೇತ್ರವನ್ನು ಆಯ್ದುಕೊಳ್ಳಲು ಮುಂದೆ ರುತ್ತಿದ್ದಾರೆ. ಕ್ರೀಡೆ ಬಗ್ಗೆ ಅನೇಕರಲ್ಲಿ ಈಗ ಜಾಗೃತಿ ಮೂಡಿದೆ. ದೇಶದ ಜನರಿಗೆ ಮಾತ್ರವಲ್ಲ ನನಗೂ ಹೆಚ್ಚಿನ ಪ್ರೇರಣೆಯನ್ನು ನೀವು ನೀಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

  ಪ್ಯಾರಾ ಒಲಂಪಿಕ್ ಸ್ಪರ್ಧಿಗಳ ಜೀವನವೇ ಎಂದು ಸಾಹಸ ಮಯ ಅವರು, ಜೀವನದಲ್ಲಿ ಎದುರಿಸಿದ ಕಷ್ಟಗಳ ನಡುವೆ ಅವರ ಈ ಸಾಧನೆ ಹೆಚ್ಚು ಪ್ರಶಂಸನೀಯ ಎಂದು 54 ಕ್ರೀಡಾಳುಗಳ ಚೈತನ್ಯ ಮತ್ತು ಇಚ್ಛಾಶಕ್ತಿಗೆ ಶ್ಲಾಘಿಸಿದರು.

  ನಿಜವಾದ ಕ್ರೋಡಾಪಟುಗಳು ಯಾವುದೇ ಸೋಲು ಗೆಲುವಿಗೆ ತಲೆ ಕೆಡಿಸಿಕೊಂಡು ಕೂರುವುದಿಲ್ಲ. ಆತ ಮುಂದುವರೆಯುತ್ತಾನೆ. ನಿಮ್ಮ ಈ ಆಟದ ಮೂಲಕ ಇಂದು ದೇಶದ ಘನತೆ ಹೆಚ್ಚಿಸಿದರು. ಇದೇ ವೇಳೆ ಕ್ರೀಡಾ ಸ್ಪರ್ಧಿಗಳೊಂದಿಗೆ ಸಂವಾದ ವೇಳೆ ಮಾತನಾಡಿದ ಚಿನ್ನದ ಪದಕ ವಿಜೇತ ಶಟ್ಲರ್​ ಕೃಷ್ಣ ನಗರ್​ ಅವರು ತಮ್ಮ ಪದಕವನ್ನು ಕೋವಿಡ್​ 19 ವಾರಿಯರ್​ಗಳಿಗೆ ಅರ್ಪಿಸುವುದಾಗಿ ತಿಳಿಸಿದರು. ಆರೋಗ್ಯ ಕಾರ್ಯಕರ್ತರು ತಮ್ಮ ಬಗ್ಗೆ ಯೋಚಿಸದೆ ತಮ್ಮ ಕರ್ತವ್ಯವನ್ನು ಮಾಡುತ್ತಿರುವುದನ್ನು ನಾನು ನೋಡಿದೆ. ಅದೆ ನನಗೆ ಸ್ಪೂರ್ತಿ ನೀಡಿತು ಎಂದರು

  ಈ ವೇಳೆ ಮಾತನಾಡಿದ ಚಿನ್ನದ ಪದಕ ವಿಜೇತ ಭುವಿನಾ, ಪ್ರಧಾನಿಗಳೆ ತಮಗೆ ಸ್ಪೂರ್ತಿ ಎಂದರು.  ನೀವು ಜನಪ್ರಿಯ ವ್ಯಕ್ತಿಗಳಾಗಿದ್ದೀರಾ ಅದಕ್ಕೆ ನಿಮ್ಮ ಪರಿಶ್ರಮ, ತಪಸ್ಸು, ಪರಾಕ್ರಮ ಕಾರಣ. ನಿಮ್ಮ ನೆರೆಹೊರೆಯವರು, ಯುವಕರು ಹಾಗೂ ಶಾಲಾ ಮಕ್ಕಳನ್ನು ಸ್ಫೂರ್ತಿಗೊಳಿಸುವ ಮೂಲಕ ದೇಶಕ್ಕೆ ಮಹತ್ವದ ಕೊಡುಗ ನೀಡಲು ನಿಮ್ಮಿಂದ ಸಾಧ್ಯ ಎಂದು ತಿಳಿಸಿದರು.

  ಇದನ್ನು ಓದಿ: ನಿರುದ್ಯೋಗಿಗಳ ಸವಲತ್ತನ್ನು ಒಂದು ವರ್ಷ ವಿಸ್ತರಿಸಿದ ಇಎಸ್​ಐಸಿ

  ಪ್ಯಾರಾ ಅಥ್ಲೀಟ್‌ಗಳ ಸಾಧನೆಗಳು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ವಿಕಲಚೇತನ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕುರಿತು ಕಾರ್ಯಾಗಾರವೊಂದರ ಅಗತ್ಯವಿದೆ ಎಂದು ಮೋದಿ ತಿಳಿಸಿದರು.

  ಭಾರತೀಯ ಪ್ಯಾರಾ-ಅಥ್ಲೀಟ್‌ಗಳು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳನ್ನು ಗೆದ್ದಿದ್ದಾರೆ. ಆಗಸ್ಟ್ 24 ರಿಂದ ಸೆಪ್ಟೆಂಬರ್​ 5ರವರೆಗೆ ನಡೆದ ಟೋಕಿಯೋ ಪ್ಯಾರಾ ಒಲಂಪಿಕ್​ನಲ್ಲಿ ಭಾರತ ಈ ಬಾರಿ ಅಭೂತ ಪೂರ್ವ ಸಾಧನೆ ಮಾಡಿತು. ಇದೇ ಮೊದಲ ಬಾರ 19 ಪದಕಗಳನ್ನೆ ಗೆಲ್ಲುವ ಮೂಲಕ ಕ್ರೀಡಾ ಪಟುಗಳು ಹೊಸ ದಾಖಲೆ ನಿರ್ಮಿಸಿದ್ದರು.

  ಇನ್ನು ಕಳೆದ ಮೂರು ದಿಗಳ ಹಿಂದೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಾ ಒಲಂಪಿಕ್​ ಸ್ಪರ್ಧಿಗಳಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದರು. ಈ ವೇಳೆ ಸ್ಪರ್ಧಾರ್ಥಿಗಳ ಹಸ್ತಾಕ್ಷರ ಶಾಲನ್ನು ಹೆಗಲ ಮೇಲೆ ಧರಿಸಿ ಅವರು ಸಂಭ್ರಮ ವ್ಯಕ್ತಪಡಿಸಿದ್ದರು.  ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿನ ಈ ವಿಡಿಯೋ ತುಣುಕುಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.
  Published by:Seema R
  First published: